ಬೆಂಗಳೂರು: ಐಪಿಎಲ್ ಪ್ರಶಸ್ತಿ ಗೆಲ್ಲುವ ರಾಜಸ್ಥಾನ್ ರಾಯಲ್ಸ್ ತಂಡದ ಆಸೆ ಕಮರಿ ಹೋದ ಬಳಿಕ ಆ ತಂಡದ ಆಟಗಾರರು ತಮ್ಮ ತಮ್ಮ ನೆಲೆಗಳಿಗೆ ಹೋರಟು ಹೋಗಿದ್ದಾರೆ. ಅದರಲ್ಲಿ ಯಶಸ್ವಿ ಜೈಸ್ವಾಲ್ (Yashasvi Jaiswal) ಮತ್ತು ಸಂಜು ಸ್ಯಾಮ್ಸನ್ ಟೀಮ್ ಇಂಡಿಯಾಕ್ಕೆ ಟಿ20 ವಿಶ್ವ ಕಪ್ಗಾಗಿ ಆಯ್ಕೆಯಾಗಿದ್ದಾರೆ. ಚೆನ್ನೈನಲ್ಲಿ ನಡೆದ ಪ್ಲೇಆಫ್ 2ನೇ ಪಂದ್ಯದಲ್ಲಿ ಪಂದ್ಯದಲ್ಲಿ ಆರ್ಆರ್ ತಂಡ ಸೋತ ಬಳಿಕ ಆಟಗಾರರು ಚೆನ್ನೈ ವಿಮಾನ ನಿಲ್ದಾಣದ ಮೂಲಕ ತಮ್ಮ ಊರುಗಳಿಗೆ ತೆರಳಿದ್ದರು. ಅಂತೆಯೇ ಯಶಸ್ವಿ ಜೈಸ್ವಾಲ್ ಕೂಡ ಅದೇ ನಿಲ್ದಾಣದ ಮೂಲಕ ಹೋಗಿದ್ದರು. ಈ ವೇಳೆ ಅವರ ಜತೆ ಗೆಳತಿಯೂ ಜತೆಗಿದ್ದರು. ಅವರಿಬ್ಬರು ಜತೆಯಾಗಿ ಹೋಗುವ ವಿಡಿಯೊ ವೈರಲ್ ಆಗಿದೆ.
Jbse iss Russian ka Saya pda tbb form ke ❤DAY lg gye😭 pic.twitter.com/noTQTVZ0rZ
— komolika bhabhi ji (@Thatdammgirll) May 26, 2024
ಜೈಸ್ವಾಲ್ ಗೆಳತಿ ಮ್ಯಾಡಿ ಹ್ಯಾಮಿಲ್ಟನ್ ಆಗಾಗೆ ಐಪಿಎಲ್ ಪಂದ್ಯಗಳ ಸ್ಟ್ಯಾಂಡ್ ಗಳಲ್ಲಿ ಕಾಣಿಸಿಕೊಳ್ಳುತ್ತಿರುತ್ತರೆ. ಜೈಸ್ವಾಲ್ ಮತ್ತು ಅವರ ತಂಡವನ್ನು ಹುರಿದುಂಬಿಸುತ್ತಿದ್ದಾರೆ. ಅವರು ಅವರನ್ನು ಬೆಂಬಲಿಸುತ್ತಿರುವುದು ಇದೇ ಮೊದಲಲ್ಲ, ಅವರು ಭಾರತ ಮತ್ತು ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಟೆಸ್ಟ್ ಸರಣಿಯ ಸಮಯದಲ್ಲಿಯೂ ಹಾಜರಿದ್ದರು. ಹ್ಯಾಮಿಲ್ಟನ್ ಅವರೊಂದಿಗಿನ ಸಂಬಂಧದ ಬಗ್ಗೆ ವದಂತಿಗಳನ್ನು ಜೈಸ್ವಾಲ್ ಇನ್ನೂ ಸಾರ್ವಜನಿಕವಾಗಿ ಹೇಳಿಕೊಳ್ಳದೇ ಹೋದರೂ ಸಾಮಾಜಿಕ ಮಾಧ್ಯಮಗಳು ಹಲವಾರು ಊಹಾಪೋಹಗಳನ್ನು ಸೃಷ್ಟಿಸುತ್ತಿವೆ.
ಇದನ್ನೂ ಓದಿ: Jos Butler: ಟಿ20 ಕ್ರಿಕೆಟ್ನಲ್ಲಿ ವಿಶೇಷ ದಾಖಲೆ ಬರೆದ ಇಂಗ್ಲೆಂಡ್ ತಂಡದ ನಾಯಕ ಬಟ್ಲರ್
ಕ್ರಿಕೆಟ್ ಪ್ರೇಕ್ಷಕರು ಹ್ಯಾಮಿಲ್ಟನ್ ಅವರ ಸೌಂದರ್ಯದ ಬಗ್ಗೆಯೂ ಮೆಚ್ಚುಗೆಯ ಮಾತನಾಡಿದ್ದಾರೆ. ಯುವ ಕ್ರಿಕೆಟಿಗನೊಂದಿಗಿನ ಅವರ ಸಂಪರ್ಕವನ್ನು ಚರ್ಚಿಸುತ್ತಿದ್ದಾರೆ. ಈ ಜೋಡಿ ಮೂರು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದಾರೆ ಎಂದು ವದಂತಿಗಳು ಕೇಳಿ ಬಂದಿವೆ. 22ರ ಹರೆಯದ ಜೈಸ್ವಾಲ್ 15 ಇನ್ನಿಂಗ್ಸ್ಗಳಲ್ಲಿ ಒಂದು ಶತಕ ಮತ್ತು ಒಂದು ಅರ್ಧಶತಕ ಸೇರಿದಂತೆ 155.91ರ ಸ್ಟ್ರೈಕ್ ರೇಟ್ನೊಂದಿಗೆ 435 ರನ್ ಗಳಿಸಿದ್ದಾರೆ.
ಜೂನ್ 1 ರಿಂದ ಪ್ರಾರಂಭವಾಗುವ ಮುಂಬರುವ ಟಿ 20 ವಿಶ್ವಕಪ್ 2024 ಗಾಗಿ ಜೈಸ್ವಾಲ್ ಶೀಘ್ರದಲ್ಲೇ ಯುಎಸ್ಎಗೆ ತೆರಳಲಿದ್ದಾರೆ. ಉದ್ಘಾಟನಾ ಪಂದ್ಯದಲ್ಲಿ ಭಾರತ ತಂಡ ಐರ್ಲೆಂಡ್ ವಿರುದ್ಧ ಸೆಣಸಲಿದೆ.
ಕೊಹ್ಲಿಯ ಸಾಧನೆ ಸರಿಗಟ್ಟಿದ ಯಶಸ್ವಿ ಜೈಸ್ವಾಲ್
ರಾಂಚಿ: ಇಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡ ಗೆಲುವು ಸಾಧಿಸಿದೆ. ಇದರೊಂದಿಗೆ ಸರಣಿ ಭಾರತದ ಕೈವಶವಾಗಿದೆ. 192 ರನ್ಗಳ ಸವಾಲಿನ ಗುರಿ ಬೆನ್ನಟ್ಟಿದ ಭಾರತಕ್ಕೆ ಯಶಸ್ವಿ ಜೈಸ್ವಾಲ್ (Yashasvi Jaiswal) ಆರಂಭಿಕರಾಗಿ ಕಣಕ್ಕೆ ಇಳಿದು 44 ರನ್ ಗಳಿಸಿದರು. ರೋಹಿತ್ ಶರ್ಮಾ ಜತೆ ಶಾಂತವಾಗಿ ಆಡಿದ ಅವರು ಆರಂಭಿಕ ವಿಕೆಟ್ಗೆ 84 ರನ್ ಬಾರಿಸಿದರು.
ಗೆಲುವಿನಲ್ಲಿ ರೋಹಿತ್ ಶರ್ಮಾ ಅವರ 55 ರನ್, ಶುಭ್ಮನ್ ಗಿಲ್ ಅವರ ಅಜೇಯ 52 ಮತ್ತು ಧ್ರುವ್ ಜುರೆಲ್ ಅವರ ಉಪಯುಕ್ತ 35 ರನ್ಗಳಿವೆ. ಇವೆಲ್ಲದರ ನಡುವೆ ಯಶಸ್ವಿ ಜೈಸ್ವಾಲ್ ಭಾರತ ಪರ ವಿಶೇಷ ಸಾಧನೆ ಮಾಡಿದ್ದಾರೆ. ಈ ಹಾದಿಯಲ್ಲಿ ಅವರು ಮಾಜಿ ನಾಯಕ ವಿರಾಟ್ ಕೊಹ್ಲಿಯ ದಾಖಲೆ ಸರಿಗಟ್ಟಿದ್ದಾರೆ.
ಜೈಸ್ವಾಲ್ ನಾಲ್ಕು 50+ ಸ್ಕೋರ್ ಮತ್ತು ಎರಡು ದ್ವಿಶತಕಗಳೊಂದಿಗೆ, ಜೈಸ್ವಾಲ್ ಪ್ರಸ್ತುತ ಸರಣಿಯಲ್ಲಿ 93.57 ಸರಾಸರಿಯಲ್ಲಿ 655 ರನ್ ಗಳಿಸಿದ್ದಾರೆ. 2016/17ರಲ್ಲಿ ಇಂಗ್ಲೆಂಡ್ ತಂಡ ಭಾರತ ಪ್ರವಾಸ ಕೈಗೊಂಡಿದ್ದಾಗ ವಿರಾಟ್ ಕೊಹ್ಲಿ ಈ ಸಾಧನೆ ಮಾಡಿದ್ದರು. ಜೈಸ್ವಾಲ್ ಸರಣಿಯಲ್ಲಿ ಇನ್ನೂ ಒಂದು ಪಂದ್ಯವನ್ನು ಹೊಂದಿದ್ದಾರೆ. ಅಂದರೆ ಅವರು ವಿರಾಟ್ ಕೊಹ್ಲಿಯನ್ನು ಮೀರಿಸುತ್ತಾರೆ. ಇಂಗ್ಲೆಂಡ್ ವಿರುದ್ಧ ಟೆಸ್ಟ್ ದ್ವಿಪಕ್ಷೀಯ ಸರಣಿಯಲ್ಲಿ ನಿರ್ವಿವಾದ