Site icon Vistara News

Narendra Modi : ಲೂಟಿ ಮಾಡಿದ್ದನ್ನು ವಾಪಸ್ ವಸೂಲು​ ಮಾಡುತ್ತೇವೆ; ಇಡಿ ದಾಳಿ ಸಮರ್ಥಿಸಿದ ಮೋದಿ

Modi Speach

ನವದೆಹಲಿ: ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ (UPA Government) ಅಧಿಕಾರಾವಧಿಯಲ್ಲಿ ಇರುವುದಕ್ಕಿಂತ ಭಿನ್ನವಾಗಿ ತನಿಖಾ ಸಂಸ್ಥೆಗಳು ಈಗ ಹೆಚ್ಚು ಸ್ವತಂತ್ರವಾಗಿವೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಸೋಮವಾರ ಪ್ರತಿಪಾದಿಸಿದ್ದಾರೆ. ಬಜೆಟ್​ ಅಧಿವೇಶನದ (budget session) ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯಕ್ಕೆ ಉತ್ತರ ನೀಡಿದ ಅವರು ಇತ್ತೀಚಿನ ದಿನಗಳಲ್ಲಿ ದೇಶದ ವಿವಿಧೆಡೆ ನಡೆಯುತ್ತಿರುವ ಐಟಿ ಮತ್ತು ಇಡಿ ದಾಳಿಗಳನ್ನು ಸಮರ್ಥಿಸಿಕೊಂಡರು.

ಕೇಂದ್ರ ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗಾಗಿ ದುರುಪಯೋಗಪಡಿಸಿಕೊಳ್ಳಲಾಗುತ್ತಿದೆ ಎಂಬ ಪ್ರತಿಪಕ್ಷಗಳ ಆರೋಪಗಳಿಗೆ ಪ್ರತಿಯಾಗಿ ಪ್ರಧಾನಿ ಈ ಹೇಳಿಕೆ ನೀಡಿದ್ದಾರೆ. ಯುಪಿಎ ಅಧಿಕಾರಾವಧಿಯಲ್ಲಿ ತನಿಖಾ ಸಂಸ್ಥೆಗಳನ್ನು ರಾಜಕೀಯ ಉದ್ದೇಶಗಳಿಗಾಗಿ ಮಾತ್ರ ಬಳಸಲಾಗುತ್ತಿತ್ತು. ಆದರೆ ಈ ಹಾಗಿಲ್ಲ. ಹಣಕಾಸು ಅಕ್ರಮ ವರ್ಗಾವಣೆ ಅಡಿಯಲ್ಲಿ ನಾವು ಮೊದಲಿಗಿಂತ ಎರಡು ಪಟ್ಟು ಪ್ರಕರಣಗಳನ್ನು ದಾಖಲಿಸಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಕಾಂಗ್ರೆಸ್ ಅಧಿಕಾರಾವಧಿಯಲ್ಲಿ ಜಾರಿ ನಿರ್ದೇಶನಾಲಯವು ಕೇವಲ 5,000 ಕೋಟಿ ರೂಪಾಯಿ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿತ್ತು. ಆದರೆ, ನಮ್ಮ ಅಧಿಕಾರಾವಧಿಯಲ್ಲಿ ಜಾರಿ ನಿರ್ದೇಶನಾಲಯ 1 ಲಕ್ಷ ಕೋಟಿ ರೂ. ಮೌಲ್ಯದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ. ಲೂಟಿ ಮಾಡಿದ ಹಣವನ್ನು ನೀವು ಖರ್ಚು ಮಾಡಬೇಕಾಗುತ್ತದೆ ಎಂದು ಪ್ರಧಾನಿ ಮೋದಿ ಪ್ರತಿಪಾದಿಸಿದರು.

ಬಡವರ ಲೂಟಿ ಅಸಾಧ್ಯ

ಈಗ ಮಧ್ಯವರ್ತಿಗಳು ಬಡವರನ್ನು ಲೂಟಿ ಮಾಡಲು ಕಷ್ಟಪಡುತ್ತಿದ್ದಾರೆ. ನಾವು ಡಿಬಿಟಿ, ಜನ್ ಧನ್, ಆಧಾರ್ ಮತ್ತು ಮೊಬೈಲ್ ಫೋನ್ ಗಳ ಮೂಲಕ ಸೇವೆಗಳನ್ನು ನೀಡುತ್ತಿದ್ದೇವೆ. ನಾವು 30 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಹಣವನ್ನು ನೇರವಾಗಿ ಜನರ ಬ್ಯಾಂಕ್ ಖಾತೆಗಳಿಗೆ ವರ್ಗಾಯಿಸಿದ್ದೇವೆ. ಸರ್ಕಾರ ಕಳುಹಿಸಿದ 100 ರೂ.ಗಳಲ್ಲಿ ಬಡವರಿಗೆ ಕೇವಲ 15 ರೂ.ಗಳು ಮಾತ್ರ ಸಿಗುತ್ತವೆ ಎಂದು ಕಾಂಗ್ರೆಸ್​ ಪ್ರಧಾನಿಯೊಬ್ಬರು ಹೇಳಿದ್ದರು. ಪರಿಸ್ಥಿತಿ ಈಗ ಹಾಗಿಲ್ಲ ಎಂದು ಮೋದಿ ಹೇಳಿದರು.

ಹಣದುಬ್ಬರದ ಬಗ್ಗೆ ಕಾಂಗ್ರೆಸ್ ವಿರುದ್ಧ ಮೋದಿ ವಾಗ್ದಾಳಿ

ತಮ್ಮ ಭಾಷಣದಲ್ಲಿ, ಪ್ರಧಾನಿ ಹಣದುಬ್ಬರಕ್ಕೆ ಕಾಂಗ್ರೆಸ್ ಅನ್ನು ದೂಷಿಸಿದರು. ಕಾಂಗ್ರೆಸ್​ ಆಡಳಿತ ಅವಧಿಯಲ್ಲಿ ಹಣದುಬ್ಬರ ಹೆಚ್ಚಿತ್ತು ಎಂದು ಹೇಳಿದರು. ಯುಪಿಎ ಅಧಿಕಾರಾವಧಿಯಲ್ಲಿ ಹಣದುಬ್ಬರವು ಎರಡಂಕಿಗಳಲ್ಲಿತ್ತು. ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗಲೆಲ್ಲಾ ಹಣದುಬ್ಬರ ಹೆಚ್ಚಾಗಿತ್ತು ಎಂದು ಪ್ರಧಾನಿ ಮೋದಿ ಹೇಳಿದರು.

ಇದನ್ನೂ ಓದಿ : Narendra Modi : ರಾಹುಲ್‌ ಗಾಂಧಿಗೆ ಲೋಕಸಭೆಯಲ್ಲಿ ಮೋದಿ ಕೊಟ್ಟ ಟಾಂಗ್‌ ಏನೇನು ನೋಡಿ!

ಕಾಂಗ್ರೆಸ್ ಕ್ಯಾನ್ಸಲ್ ಸಂಸ್ಕೃತಿ’ಯನ್ನು ಬೆಳೆಸಿದೆ – ನಾವು ಮೇಕ್ ಇನ್ ಇಂಡಿಯಾ ಎಂದು ಹೇಳುತ್ತೇವೆ, ಕಾಂಗ್ರೆಸ್ ರದ್ದುಗೊಳಿಸಿ ಎಂದು ಹೇಳುತ್ತದೆ; ನಾವು ಆತ್ಮನಿರ್ಭರ ಭಾರತ್ ಎಂದು ಹೇಳುತ್ತೇವೆ, ಕಾಂಗ್ರೆಸ್ ರದ್ದುಗೊಳಿಸಿ ಎಂದು ಹೇಳುತ್ತದೆ. ನಾವು ವೋಕಲ್ ಫಾರ್ ಲೋಕಲ್ ಎಂದು ಹೇಳುತ್ತೇವೆ, ಕಾಂಗ್ರೆಸ್ ರದ್ದು ಎಂದು ಹೇಳುತ್ತದೆ, ವಂದೇ ಭಾರತ್ ರೈಲನ್ನು ರದ್ದುಗೊಳಿಸಿ ಎಂದು ಕಾಂಗ್ರೆಸ್ ಹೇಳುತ್ತದೆ. ನಾವು ಹೊಸ ಸಂಸತ್ ಭವನ ಎಂದು ಹೇಳುತ್ತೇವೆ, ಕಾಂಗ್ರೆಸ್ ರದ್ದು ಮಾಡಿ ಎಂದು ಹೇಳುತ್ತದೆ. ಇದೇ ನನಗೆ ಆಶ್ಚರ್ಯ. ಏಕೆಂದರೆ ಇವು ಮೋದಿಯವರ ಸಾಧನೆಗಳಲ್ಲ, ಇವು ದೇಶದ ಸಾಧನೆಗಳು” ಎಂದು ಮೋದಿ ಹೇಳಿದರು.

Exit mobile version