Site icon Vistara News

IPL 2024 : ಇವರೇ ನೋಡಿ ಐಪಿಎಲ್​ 2024ರ ಮೊದಲ ಕನ್​ಕಷನ್​ ಬದಲಿ ಆಟಗಾರ

IPL 2024

ಲಖನೌ : ಐಪಿಎಲ್​ 2024ನೇ (IPL 2024) ಆವೃತ್ತಿಯ ಮೊದಲ ಕನ್​ಕಷನ್​​ (ಗಾಯಗೊಂಡ ಆಟಗಾರನಿಗೆ ಬದಲಿ) ಆಟಗಾರ ಎಂಬ ಖ್ಯಾತಿಗೆ ಯದ್ವೀರ್​ ಸಿಂಗ್ (Yudhvir Singh) ಪಾತ್ರರಾಗಿದ್ದಾರೆ. ಎಲ್ಎಸ್​ಜಿ ಮತ್ತು ಕೆಕೆಆರ್ ನಡುವಿನ ಐಪಿಎಲ್ ಪಂದ್ಯದಲ್ಲಿ, ಲಕ್ನೊ ಪರ ಅವರು ಆಡಲು ಇಳಿದರು. ಲಕ್ನೊ ವೇಗಿ ಮೊಹ್ಸಿನ್ ಖಾನ್ ಥರ್ಡ್​ ಮ್ಯಾನ್​ ಪ್ರದೇಶದಲ್ಲಿ ಫೀಲ್ಡಿಂಗ್ ಮಾಡುವಾಗ ತಲೆಗೆ ಗಾಯವಾಗಿತ್ತು. ಚಿಕಿತ್ಸೆಗಾಗಿ ಮೈದಾನವನ್ನು ತೊರೆಯಬೇಕಾಯಿತು. ಹೀಗಾಗಿ ಯಧ್ವೀರ್ ಸಿಂಗ್​ ಆಡಲು ಬರಬೇಕಾಯಿತು.

ಮೊಹ್ಸಿನ್ ಖಾನ್ ತಲೆಗೆ ಪೆಟ್ಟು ಬಿದ್ದ ನಂತರ ನೆಲದ ಮೇಲೆ ಮಲಗಿ ಹೆಣಗಾಡುತ್ತಿರುವುದು ಕಂಡುಬಂತು. ನರೈನ್ ಬ್ಯಾಟಿಂಗ್ ಮಾಡುತ್ತಿದ್ದಾಗ ಈ ಘಟನೆ ಸಂಭವಿಸಿದೆ. ಮೊಹ್ಸಿನ್​ ಖಾನ್ ಚೆಂಡನ್ನು ಹಿಡಿಯಲು ಓಡಿದ್ದರು. ಆದರೆ ದುರದೃಷ್ಟವಶಾತ್ ಅವರ ತಲೆ ಮೊದಲು ನೆಲಕ್ಕೆ ಅಪ್ಪಳಿಸಿತ್ತು. ಪರಿಣಾಮವಾಗಿ 16 ನೇ ಓವರ್ ಪ್ರಾರಂಭವಾಗುವ ಮೊದಲು ಮೊಹ್ಸಿನ್ ಖಾನ್ ಬದಲಿಗೆ ಯುಧ್ವೀರ್ ಸಿಂಗ್ ಅವರನ್ನು ಕನ್ಕಷನ್ ಬದಲಿಯಾಗಿ ಕಳುಹಿಸಲಾಯಿತು.

ಯುಧ್ವೀರ್ ಸಿಂಗ್ ಚರಕ್ ಐಪಿಎಲ್ 2024 ರ ಮೊದಲ ಕನ್ಕಷನ್ ಬದಲಿ ಆಟಗಾರರಾದರು. ಇದು ಮಾತ್ರವಲ್ಲ, ಅವರು ತಮ್ಮ ಮೊದಲ ಓವರ್​​ನಲ್ಲಿ ಕೆಕೆಆರ್​​ನ ಆಂಗ್ರಿಶ್ ರಘುವಂಶಿ ಅವರನ್ನು ತಮ್ಮ ಮೊದಲ ಓವರ್​ನಲ್ಲಿ ಔಟ್ ಮಾಡಿದರು.

ಐಪಿಎಲ್​​ನ ಕನ್ಕಷನ್ ಬದಲಿ ಇತಿಹಾಸವನ್ನು ಹಿಂತಿರುಗಿ ನೋಡಿದರೆ, ಯುಧ್ವೀರ್ ಎರಡನೇ ಆಟಗಾರರಾದರು. ಮುಂಬೈ ಇಂಡಿಯನ್ಸ್ ವಿಕೆಟ್ ಕೀಪರ್ ವಿಷ್ಣು ವಿನೋದ್ ಈ ಪಟ್ಟಿಯಲ್ಲಿ ಮೊದಲಿಗರು. ಐಪಿಎಲ್ 2023 ರ ಎರಡನೇ ಕ್ವಾಲಿಫೈಯರ್​ನಲ್ಲಿ ಮುಂಬೈ ಇಂಡಿಯನ್ಸ್ ಪರ ಇಶಾನ್ ಕಿಶನ್ ಬದಲಿಗೆ ವಿನೋದ್ ಆಡಿದ್ದರು.

ಕಂಕಷನ್ ಬದಲಿ ಆಟಗಾರರ ವಿವರ

ಇಶಾನ್ ಕಿಶನ್ ಮುಂಬೈ ಇಂಡಿಯನ್ಸ್ ವಿಷ್ಣು ವಿನೋದ್
ಮೊಹ್ಸಿನ್ ಖಾನ್ ಲಕ್ನೋ ಸೂಪರ್ ಜೈಂಟ್ಸ್: ಯುಧ್ವೀರ್ ಸಿಂಗ್

ಪಂದ್ಯದಲ್ಲಿ ಏನಾಯಿತು?

ಲಖನೌ: ಬ್ಯಾಟಿಂಗ್​ ಹಾಗೂ ಬೌಲಿಂಗ್​ನಲ್ಲಿ ಅಸಾಮಾನ್ಯ ಪ್ರದರ್ಶನ ನೀಡಿದ ಕೋಲ್ಕೊತಾ ನೈಟ್​ ರೈಡರ್ಸ್​ ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) 54ನೇ ಪಂದ್ಯದಲ್ಲಿ ಲಕ್ನೊ ಸೂಪರ್​ ಜೈಂಟ್ಸ್​ ವಿರುದ್ಧ 98 ರನ್​ಗಳ ಬೃಹತ್​ ಅಂತರದ ಗೆಲುವು ಸಾಧಿಸಿದೆ. ಇದರೊಂದಿಗೆ ಆಡಿರುವ 11 ಪಂದ್ಯಗಳಲ್ಲಿ 8 ಗೆಲುವಿನೊಂದಿಗೆ 16 ಅಂಕಗಳನ್ನು ಸಂಪಾದಿಸಿರುವ ಶ್ರೇಯಸ್​ ಅಯ್ಯರ್ ನೇತೃತ್ವದ ಕೋಲ್ಕೊತಾ ಬಳಗ ಪ್ಲೇಆಫ್​ ಹಂತಕ್ಕೆ ಬಹುತೇಕ ತೇರ್ಗಡೆ ಗೊಂಡಿದೆ. ಇದೇ ವೇಳೆ 11 ಪಂದ್ಯಗಳಲ್ಲಿ 5ನೇ ಸೋಲಿಗೆ ಒಳಗಾಗಿದ್ದು 12 ಅಂಕಗಳ ಸಮೇತ ಐದನೇ ಸ್ಥಾನದಲ್ಲಿ ಉಳಿದಿದೆ.

ಇದನ್ನೂ ಓದಿ: Champions Trophy : ಚಾಂಪಿಯನ್ಸ್​ ಟ್ರೋಫಿ ಮೂಲಕ ಐಪಿಎಲ್​ಗೆ ತೊಂದರೆ ಕೊಡಲು ಪಾಕಿಸ್ತಾನ ಸಂಚು

ಇಲ್ಲಿನ ಶ್ರೀ ಭಾರತ ರತ್ನ ಅಟಲ್​ ಬಿಹಾರಿ ವಾಜಪೇಯಿ ಏಕನಾ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಗೆದ್ದ ಲಕ್ನೊ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಕೆಕೆಅರ್​ ಬಳಗ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 235 ರನ್​ಗಳ ಬೃಹತ್ ಮೊತ್ತವನ್ನು ಕಲೆ ಹಾಕಿತು. ಪ್ರತಿಯಾಗಿ ಆಡಿದ ತವರಿನ ತಂಡ 16.1 ಓವರ್​ಗಳಲ್ಲಿ 137 ರನ್​ಗಳಿಗೆ ಆಲ್​ಔಟ್​ ಆಗಿ ಹೀನಾಯ ಸೋಲಿಗೆ ಒಳಗಾಯಿತು.

Exit mobile version