Site icon Vistara News

IPL 2024 : ಐಪಿಎಲ್​ನಲ್ಲಿ ಹೊಸ ದಾಖಲೆ ಬರೆದ ಸ್ಪಿನ್ನರ್​ ಯಜ್ವೇಂದ್ರ ಚಹಲ್​

IPL 2024

ಬೆಂಗಳೂರು: ಐಪಿಎಲ್​ನ (IPL 2024) ಪ್ರಭಾವಿ ತಂಡ ರಾಜಸ್ಥಾನ್ ರಾಯಲ್ಸ್ ನ ಲೆಗ್ ಸ್ಪಿನ್ನರ್ ಚಾಹಲ್ ಜೈಪುರದಲ್ಲಿ ಸೋಮವಾರ ರಾತ್ರಿ ಐಪಿಎಲ್​​ ಇತಿಹಾಸದಲ್ಲಿ ಹೊಸ ಸಾಧನೆ ಮಾಡಿದರು. ಮುಂಬೈ ಇಂಡಿಯನ್ಸ್ ವಿರುದ್ಧ ವಿಕೆಟ್ ಪಡೆಯುವ ಮೂಲಕ 200 ನೇ ಐಪಿಎಲ್ ವಿಕೆಟ್ ಪಡೆಯುವ ವಿಶೇಷ ಮೈಲುಗಲ್ಲು ಸಾಧಿಸಿದರು. ಅಲ್ಲದೆ ಈ ಸಾಧನೆ ಮಾಡಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಲೆಗ್ ಸ್ಪಿನ್ನರ್ ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಎಸೆತದೊಂದಿಗೆ ತಮ್ಮ ಮೈಲಿಗಲ್ಲನ್ನು ತಲುಪಿದರು. ಮೊಹಮ್ಮದ್ ನಬಿ ವಿಕೆಟ್ ಪಡೆದು ಈ ಸಾಧನೆ ಮಾಡಿದರು.

2013 ರಲ್ಲಿ ಮುಂಬೈ ಇಂಡಿಯನ್ಸ್ ಪರ ಪಾದಾರ್ಪಣೆ ಮಾಡಿದ ಚಾಹಲ್ ರಾಜಸ್ಥಾನ್ ವಿರುದ್ಧ ಈ ಸಾಧನೆ ಮಾಡಿದರು. ಕಳೆದ ಋತುವಿನಲ್ಲಿ ಸಿಎಸ್​ಕೆ ಅನುಭವಿ ಬೌಲರ್​​ ಡ್ವೇನ್ ಬ್ರಾವೋ ಅವರಿಂದ 183 ವಿಕೆಟ್​​ಗಳ ಸಾಧನೆಯನ್ನು ಹಿಂದಿಕ್ಕಿ ಐಪಿಎಲ್​ನಲ್ಲಿ ಗರಿಷ್ಠ ವಿಕೆಟ್​ ಪಡೆದ ಬೌಲರ್​ ಎಂಬ ಸಾಧನೆಯನ್ನು ಚಾಹಲ್ ಮಾಡಿದ್ದರು. ಇದೀಗ 200 ರ ಗಡಿ ದಾಟಿದ್ದಾರೆ.

ಮುಂಬಯಿ ವಿರುದ್ಧ ಮತ್ತೊಂದು ಸಾಧನೆ ಮಾಡಿದ್ದರು

ಕಳೆದ ತಿಂಗಳು ಮುಂಬೈ ಇಂಡಿಯನ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್​ಗಳಲ್ಲಿ 3 ವಿಕೆಟ್​ ಪಡೆದಿದ್ದ ಚಾಹಲ್ ಮತ್ತೊಂದು ಐಪಿಎಲ್ ದಾಖಲೆಯನ್ನು ಸರಿಗಟ್ಟಿದ್ದರು. ಲೀಗ್ ಇತಿಹಾಸದಲ್ಲಿ ಅತಿ ಹೆಚ್ಚು ಮೂರು ಮತ್ತು ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಜಂಟಿ ಅಗ್ರ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಇದನ್ನೂ ಓದಿ: Venkatesh Prasad : ಐಪಿಎಲ್ ಉದಾಹರಣೆ ಕೊಟ್ಟು ಮೋದಿ ಮಾತನ್ನು ಬೆಂಬಲಿಸಿದ ವೆಂಕಟೇಶ್ ಪ್ರಸಾದ್​

ಲೆಗ್ ಸ್ಪಿನ್ನರ್​ ಬೌಲಿಂಗ್​ ದಕ್ಷತೆಯನ್ನು ಅನುಮಾನಿಸಬೇಕಾಗಿಲ್ಲ. ವಾಸ್ತವವಾಗಿ, ಚಾಹಲ್ ಫ್ರಾಂಚೈಸಿಯ ಇತಿಹಾಸದಲ್ಲಿ ಆರ್​ಸಿಬಿಯ ಪ್ರಮುಖ ವಿಕೆಟ್ ಟೇಕರ್ ಆಗಿದ್ದಾರೆ, ಕೇವಲ 113 ಪಂದ್ಯಗಳಲ್ಲಿ 139 ವಿಕೆಟ್​ಗಳನ್ನು ಪಡೆದಿದ್ದಾರೆ. ಐಪಿಎಲ್ ಇತಿಹಾಸದಲ್ಲಿ ಒಂದು ಫ್ರಾಂಚೈಸಿಗಾಗಿ 100 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್​ ಪಡೆದ ಏಕೈಕ ಬೌಲರ್ ಆಗಿದ್ದಾರೆ.

2021 ರ ಋತುವಿನ ನಂತರ ಆರ್​ಸಿಬಿ ಅವರನ್ನು ಬಿಡುಗಡೆ ಮಾಡಿತ್ತು. ಅಲ್ಲಿಂದ ಆರ್​​ಆರ್​ ತಂಡ ಸೇರಿದ್ದ ಅವರು ಅಲ್ಲಿ ತಮ್ಮ ಪ್ರಭಾವ ಮುಂದುವರಿಸಿದ್ದಾರೆ.

Exit mobile version