Site icon Vistara News

ZIM v IND 2024: ಭಾರತ ವಿರುದ್ಧ ಟಿ20 ಸರಣಿಗೆ ಜಿಂಬ್ವಾಬ್ವೆ ತಂಡ ಪ್ರಕಟ, ಸಿಕಂದರ್​ ನಾಯಕ

ZIM v IND 2024

ಬೆಂಗಳೂರು: ಜಿಂಬಾಬ್ವೆಯ ರಾಜಧಾನಿ ಹರಾರೆಯಲ್ಲಿ ಜುಲೈ 6 ರಂದು ಪ್ರಾರಂಭವಾಗಲಿರುವ ವಿಶ್ವ ಚಾಂಪಿಯನ್ ಭಾರತ ವಿರುದ್ಧದ ಐದು ಪಂದ್ಯಗಳ ಟಿ 20 ಐ ಸರಣಿಗೆ (ZIM v IND 2024) ಜಿಂಬಾಬ್ವೆ ಕ್ರಿಕೆಟ್​ ಸಂಸ್ಥೆ ಸೋಮವಾರ (ಜುಲೈ 1) ತನ್ನ ತಂಡವನ್ನು ಪ್ರಕಟಿಸಿದೆ. ಅನುಭವಿ ಆಲ್​ರೌಂಡರ್​ ಸಿಕಂದರ್ ರಾಜಾ ಅವರನ್ನು ಜಿಂಬಾಬ್ವೆ ತಂಡದ ನಾಯಕರನ್ನಾಗಿ ಘೋಷಿಸಲಾಗಿದೆ. ತಂಡದಲ್ಲಿ ಬೆಲ್ಜಿಯಂ ಮೂಲದ ಆಟಗಾರ ಅಂಟಮ್ ನಖ್ವಿ ಕೂಡ ಸೇರಿಕೊಂಡಿದ್ದಾರೆ.

ಭಾರತ ವಿರುದ್ಧದ ಸರಣಿಯಲ್ಲಿ ನಖ್ವಿಯ ಭಾಗವಹಿಸುವಿಕೆ ಅವರ ಪೌರತ್ವದ ಸ್ಥಾನಮಾನದ ದೃಢೀಕರಣಕ್ಕೆ ಒಳಪಟ್ಟಿರುತ್ತದೆ ಎಂದು ಜಿಂಬಾಬ್ವೆ ಕ್ರಿಕೆಟ್ ಪ್ರಕಟಣೆಯಲ್ಲಿ ತಿಳಿಸಿದೆ. ಆಸ್ಟ್ರೇಲಿಯಾಕ್ಕೆ ತೆರಳುವ ಮೊದಲು ಬೆಲ್ಜಿಯಂನ ಬ್ರಸೆಲ್​​ನಲ್ಲಿ ಪಾಕಿಸ್ತಾನಿ ಪೋಷಕರಿಗೆ ಜನಿಸಿದ್ದರು ನಖ್ವಿ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ ಅವರು ಜಿಂಬಾಬ್ವೆಯನ್ನು ಪ್ರತಿನಿಧಿಸುವ ಬಯಕೆ ವ್ಯಕ್ತಪಡಿಸಿದ್ದರು. ಹೀಗಾಗಿ ಅವರನ್ನು ಭಾರತ ವಿರುದ್ಧದ ಸರಣಿಗೆ ಆಯ್ಕೆ ಮಾಡಲಾಗಿತ್ತು.

ಕೆರಿಬಿಯನ್ ಮತ್ತು ಯುಎಸ್ಎಯಲ್ಲಿ ಇತ್ತೀಚೆಗೆ ಮುಕ್ತಾಯಗೊಂಡ ಟಿ20 ವಿಶ್ವಕಪ್​ಗೆ ಅರ್ಹತೆ ಪಡೆಯಲು ಜಿಂಬಾಬ್ವೆ ತಂಡ ವಿಫಲಗೊಂಡಿತ್ತು. ಆ ಬಳಿ ಜಿಂಬಾಬ್ವೆ ಹೊಸ ಮುಖ್ಯ ಕೋಚ್ ಜಸ್ಟಿನ್ ಸಮ್ಮನ್ಸ್ ಅವರ ಅಡಿಯಲ್ಲಿ ತಂಡವನ್ನು ಪುನರ್​ರಚನೆ ಮಾಡಲಾಯಿತು. ಇತ್ತೀಚೆಗೆ ಮುಕ್ತಾಯಗೊಂಡ ಟಿ 20 ವಿಶ್ವಕಪ್​ಗೆ ಅರ್ಹತೆ ಪಡೆಯಲು ವಿಫಲವಾದ ನಂತರ ಹೊಸ ಮುಖ್ಯ ಕೋಚ್ ಜಸ್ಟಿನ್ ಸಮ್ಮನ್ಸ್ ಅವರ ಅಡಿಯಲ್ಲಿ ಪುನರ್ನಿರ್ಮಾಣ ಮಾಡುವ ಗುರಿಯನ್ನು ಹೊಂದಿರುವ ಜಿಂಬಾಬ್ವೆ, ರಾಜಾ ನೇತೃತ್ವದ ಯುವ ತಂಡವನ್ನು ಆಯ್ಕೆ ಮಾಡಿದೆ. ಇದು ಭಾರತ ವಿರುದ್ಧ ಆಡಿ ತನ್ನು ಅನುಭವ ಹೆಚ್ಚಿಸಿಕೊಳ್ಳಲಿದೆ.

ಇದನ್ನೂ ಓದಿ: IND vs SA: ದಕ್ಷಿಣ ಆಫ್ರಿಕಾ ವಿರುದ್ಧದ ಏಕೈಕ ಟೆಸ್ಟ್​​ನಲ್ಲಿ ಮಹಿಳೆಯರ ತಂಡಕ್ಕೆ10 ವಿಕೆಟ್​ ಭರ್ಜರಿ ಭರ್ಜರಿ ಜಯ

86 ಟಿ 20 ಪಂದ್ಯಗಳನ್ನು ಹೊಂದಿರುವ ನಾಯಕ ರಾಜಾ ತಂಡದ ಅತ್ಯಂತ ಅನುಭವಿ ಆಟಗಾರ. ಲ್ಯೂಕ್ ಜಾಂಗ್ವೆ ಜಿಂಬಾಬ್ವೆ ಪರ ಚುಟುಕು ಸ್ವರೂಪದಲ್ಲಿ 63 ಪಂದ್ಯಗಳನ್ನು ಆಡಿದ ಇನ್ನೊಬ್ಬ ಆಟಗಾರ. ವೇಗದ ಬೌಲರ್​ಗಳಾದ ರಿಚರ್ಡ್ ಎನ್ಗರವ (52 ಟಿ 20 ಐ) ಮತ್ತು ಬ್ಲೆಸ್ಸಿಂಗ್ ಮುಜರಬಾನಿ (51 ಟಿ 20 ಐ) ತಂಡದಲ್ಲಿರುವ ಇತರ ಅನುಭವಿ ಕ್ರಿಕೆಟಿಗರು. ಅಲ್ಲಿನ ಅನುಭವಿ ಆಟಗಾರರಾದ ಕ್ರೇಗ್ ಎರ್ವಿನ್ ಮತ್ತು ಸೀನ್ ವಿಲಿಯಮ್ಸ್ ಅವರನ್ನು ಆಯ್ಕೆಗೆ ಪರಿಗಣಿಸಲಾಗಿಲ್ಲ. ರಿಯಾನ್ ಬರ್ಲ್, ಜಾಯ್ಲಾರ್ಡ್ ಗುಂಬಿ ಮತ್ತು ಐನ್ಸ್ಲೆ ಎನ್ಡ್ಲೋವು ಕೂಡ ಸ್ಥಾನ ಪಡೆಯಲು ವಿಫಲರಾಗಿದ್ದಾರೆ.

ಜಿಂಬಾಬ್ವೆ ತಂಡ: ಸಿಕಂದರ್ ರಾಜಾ (ನಾಯಕ), ಅಕ್ರಮ್ ಫರಾಜ್, ಬೆನೆಟ್ ಬ್ರಿಯಾನ್, ಕ್ಯಾಂಪ್ಬೆಲ್ ಜೋನಾಥನ್, ಚಟಾರಾ ತೆಂಡೈ, ಜೊಂಗ್ವೆ ಲ್ಯೂಕ್, ಕೈಯಾ ಇನ್ನೋಸೆಂಟ್, ಮದಂಡೆ ಕ್ಲೈವ್, ಮಡ್ವೆರೆ ವೆಸ್ಲಿ, ಮಾವುಮಣಿ ತಡಿವಾನಾಶೆ, ಮಸಕಡ್ಜಾ ವೆಲ್ಲಿಂಗ್ಟನ್, ಮಾವುಟಾ ಬ್ರಾಂಡನ್, ಮುಜರಬಾನಿ ಬ್ಲೆಸ್ಸಿಂಗ್, ಮೈಯರ್ಸ್ ಡಿಯೋನ್, ನಖ್ವಿ ಅಂಟಮ್, ಎನ್ಗರವಾ ರಿಚರ್ಡ್, ಶುಂಬಾ ಮಿಲ್ಟನ್.

Exit mobile version