Site icon Vistara News

Sean Williams : ಜಿಂಬಾಬ್ವೆ ತಂಡದ ಹಿರಿಯ ಆಲ್​ರೌಂಡರ್​ ಟಿ20 ಕ್ರಿಕೆಟ್​ನಿಂದ ನಿವೃತ್ತಿ

Sean Williams

ನವ ದೆಹಲಿ: ಜಿಂಬಾಬ್ವೆ ರಾಷ್ಟ್ರೀಯ ಕ್ರಿಕೆಟ್ ತಂಡದ ಆಲ್​ರೌಂಡರ್ ಸೀನ್ ವಿಲಿಯಮ್ಸ್ (Sean Williams) ಬಾಂಗ್ಲಾದೇಶ ವಿರುದ್ಧದ ಐದು ಪಂದ್ಯಗಳ ಟಿ 20 ಐ ಸರಣಿಯ ಮುಕ್ತಾಯದ ನಂತರ ಟಿ 20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ (T20 International) ವಿದಾಯ ಹೇಳುವುದಾಗಿ ಭಾನುವಾರ ಘೋಷಿಸಿದ್ದಾರೆ. ಮಿರ್​ಪುರದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಅಂತಿಮ ಟಿ 20 ಪಂದ್ಯದಲ್ಲಿ ನಜ್ಮುಲ್ ಹುಸೇನ್ ಶಾಂಟೊ ನೇತೃತ್ವದ ಬಾಂಗ್ಲಾದೇಶ ಕ್ರಿಕೆಟ್ ತಂಡದ ವಿರುದ್ಧ ಜಿಂಬಾಬ್ವೆ 9 ವಿಕೆಟ್​ಗಳ ಗೆಲುವು ಸಾಧಿಸುವಲ್ಲಿ ಯಶಸ್ವಿಯಾದ ನಂತರ ಜಿಂಬಾಬ್ವೆಯ ಕ್ರಿಕೆಟ್ ದಂತಕಥೆಗಳಲ್ಲಿ ಒಬ್ಬರಾದ ವಿಲಿಯಮ್ಸ್ ಟಿ 20 ಐ ಕ್ರಿಕೆಟ್​ನಿಂದ ನಿವೃತ್ತರಾಗಲು ನಿರ್ಧರಿಸಿದರು.

ಜಿಂಬಾಬ್ವೆ ಆತಿಥೇಯ ಬಾಂಗ್ಲಾದೇಶದ ವಿರುದ್ಧ 1-4 ಸರಣಿ ಸೋಲನ್ನು ಎದುರಿಸಬೇಕಾಯಿತು. ಬಾಂಗ್ಲಾ ವಿರುದ್ಧ ಸರಣಿಯ ಮೊದಲ ನಾಲ್ಕು ಪಂದ್ಯಗಳನ್ನು ಕಳೆದುಕೊಂಡಿತು. ವಿಶೇಷವೆಂದರೆ, ಬಾಂಗ್ಲಾದೇಶದ ವಿರುದ್ಧ ಜಿಂಬಾಬ್ವೆ 1-4 ಸರಣಿ ಸೋಲಿನ ಸಮಯದಲ್ಲಿ 37 ವರ್ಷದ ವಿಲಿಯಮ್ಸ್ ಕೇವಲ ಎರಡು ಟಿ 20 ಐ ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದರು.

ಗುಡ್​ ಬೈ ಹೇಳಿದ ವಿಲಿಯಮ್ಸ್​


ಎಡಗೈ ಬ್ಯಾಟ್ಸ್ಮನ್ ಮೊದಲ ಟಿ 20 ಐನಲ್ಲಿ ಗೋಲ್ಡನ್ ಡಕ್​ ಆಗಿದ್ದರು. ತಸ್ಕಿನ್ ಅಹ್ಮದ್ ಎಸೆತಕ್ಕೆ ಕ್ಲೀನ್ ಬೌಲ್ ಅಗಿದ್ದರು. ನಂತರ ಅವರು ಬಾಂಗ್ಲಾದೇಶ ವಿರುದ್ಧದ ಐದನೇ ಟಿ 20 ಐನಲ್ಲಿ ಬ್ಯಾಟಿಂಗ್ ಮಾಡುವ ಅಗತ್ಯ ಬಂದಿರಲಿಲ್ಲ . , ಟಿ 20 ಐ ಕ್ರಿಕೆಟ್ನಿಂದ ಅವರ ನಿವೃತ್ತಿಯು ಸ್ಟಾರ್ ಆಟಗಾರನ ಕ್ರಿಕೆಟ್ ಪ್ರಯಾಣ ಅಂತ್ಯ ವಾಗುವುದಿಲ್ಲ. ಏಕೆಂದರೆ ವಿಲಿಯಮ್ಸ್ ಏಕದಿನ ಕ್ರಿಕೆಟ್ ಮತ್ತು ಟೆಸ್ಟ್ ಕ್ರಿಕೆಟ್ನಲ್ಲಿ ಜಿಂಬಾಬ್ವೆಯನ್ನು ಪ್ರತಿನಿಧಿಸುವುದನ್ನು ಮುಂದುವರಿಸಲಿದ್ದಾರೆ.

ಇದನ್ನೂ ಓದಿ: IPL 2024 : ಕೆಕೆಆರ್ ತಂಡದ ಇನ್ನೊಬ್ಬರ ಆಟಗಾರನಿಗೆ ದಂಡ ವಿಧಿಸಿದ ಬಿಸಿಸಿಐ

ವಿಲಿಯಮ್ಸ್ ತಮ್ಮ ನಿವೃತ್ತಿಯ ಬಗ್ಗೆ ಇನ್ನೂ ಯಾವುದೇ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ ಜಿಂಬಾಬ್ವೆ ಕ್ರಿಕೆಟ್ ತಂಡದೊಂದಿಗೆ ಸಂಬಂಧ ಹೊಂದಿರುವ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ (ಬಿಸಿಬಿ) ಅಧಿಕಾರಿಯೊಬ್ಬರು ಸ್ಟಾರ್ ಆಲ್ರೌಂಡರ್ ಢಾಕಾದಲ್ಲಿ ನಡೆದ ಅಂತಿಮ ಪಂದ್ಯದ ನಂತರ ಟಿ 20 ಐ ಕ್ರಿಕೆಟ್​ನಿಂದ ನಿವೃತ್ತರಾಗಿದ್ದಾರೆ ಎಂದು ದೃಢಪಡಿಸಿದ್ದಾರೆ.

ಜಿಂಬಾಬ್ವೆಯ ಟಿ 20ಐ ನಾಯಕ ಸಿಕಂದರ್ ರಾಜಾ ಕೂಡ ತಮ್ಮ ಇನ್​ಸ್ಟಾಗ್ರಾಮ್​ ಸ್ಟೋರಿಯಲ್ಲಿ ವಿಲಿಯಮ್ಸ್ ಆಟದ ಕಿರು ಸ್ವರೂಪದಲ್ಲಿ ತಮ್ಮ ವೃತ್ತಿಜೀವನ ಮುಗಿಸಿದ್ದನ್ನು ಘೋಷಿಸಿದ್ದಾರೆ ವಿಶೇಷವೆಂದರೆ, ವಿಲಿಯಮ್ಸ್ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ ಅವರೊಂದಿಗೆ 17 ವರ್ಷ, 166 ದಿನಗಳ ಜಂಟಿ ಸುದೀರ್ಘ ಟಿ 20 ವೃತ್ತಿಜೀವನವನ್ನು ಹೊಂದಿರುವ ದಾಖಲೆಯನ್ನು ಹೊಂದಿದ್ದಾರೆ.

ವಿಲಿಯಮ್ಸ್ ಸಾಧನೆ ಈ ರೀತಿ ಇದೆ

ಸೀನ್ ವಿಲಿಯಮ್ಸ್ 2006ರಲ್ಲಿ ಬಾಂಗ್ಲಾದೇಶ ವಿರುದ್ಧ ಜಿಂಬಾಬ್ವೆ ಪರ ಟಿ20 ಕ್ರಿಕೆಟ್​​ಗೆ ಪದಾರ್ಪಣೆ ಮಾಡಿದ್ದರು. ಅವರು ಈ ಸ್ವರೂಪದಲ್ಲಿ ಜಿಂಬಾಬ್ವೆ ತಂಡದ ಪ್ರಮುಖ ಆಟಗಾರನಾಗಿ ತಮ್ಮನ್ನು ತಾವು ಸ್ಥಾಪಿಸಿಕೊಂಡಿದ್ದರು. 81 ಟಿ 20 ಪಂದ್ಯಗಳಲ್ಲಿ, ವಿಲಿಯಮ್ಸ್ 23.48 ಸರಾಸರಿ ಮತ್ತು 126.38 ಸ್ಟ್ರೈಕ್ ರೇಟ್ನೊಂದಿಗೆ 1691 ರನ್ ಗಳಿಸುವ ಮೂಲಕ ತಮ್ಮ ಬ್ಯಾಟಿಂಗ್ ಪರಾಕ್ರಮವನ್ನು ಪ್ರದರ್ಶಿಸಿದ್ದರು. ಅವರು ಟಿ 20 ಪಂದ್ಯಗಳಲ್ಲಿ 11 ಅರ್ಧಶತಕಗಳನ್ನು ಬಾರಿಸಿದ್ದಾರೆ, ಅವರ ಗರಿಷ್ಠ ಸ್ಕೋರ್ 66 ರನ್.

ವಿಲಿಯಮ್ಸ್ ತಮ್ಮ ಎಡಗೈ ಸ್ಪಿನ್ ಬೌಲಿಂಗ್​​ನಿಂದ ಜಿಂಬಾಬ್ವೆ ಪರ 6.93 ಎಕಾನಮಿ ರೇಟ್​ನಲ್ಲಿ 48 ವಿಕೆಟ್​​ ಪಡೆದಿದ್ದಾರೆ.ಈ ಸಾಧನೆ ಹೊರತಾಗಿ, ವಿಲಿಯಮ್ಸ್ ಏಕದಿನ ಕ್ರಿಕೆಟ್​ನ್ಲಿ ಇನ್ನೂ ಹೆಚ್ಚಿನ ಯಶಸ್ಸನ್ನು ಕಂಡುಕೊಂಡಿದ್ದಾರೆ. 156 ಪಂದ್ಯಗಳಿಂದ 38.06ರ ಸರಾಸರಿಯಲ್ಲಿ 4986 ರನ್ ಗಳಿಸಿದ್ದು, 86.69ರ ಸ್ಟ್ರೈಕ್ ರೇಟ್ ಹೊಂದಿದ್ದಾರೆ. ಅವರು ತಮ್ಮ ಏಕದಿನ ವೃತ್ತಿಜೀವನದಲ್ಲಿ ಇದುವರೆಗೆ ಎಂಟು ಶತಕಗಳು ಮತ್ತು 35 ಅರ್ಧಶತಕಗಳನ್ನು ಬಾರಿಸಿದ್ದಾರೆ. ವಿಲಿಯಮ್ಸ್ ಏಕದಿನ ಪಂದ್ಯಗಳಲ್ಲಿ 83 ವಿಕೆಟ್ ಗಳನ್ನು ಪಡೆದು ತಮ್ಮ ಆಲ್ ರೌಂಡ್ ಸಾಮರ್ಥ್ಯವನ್ನು ಪ್ರದರ್ಶಿಸಿದ್ದಾರೆ.

ವಿಲಿಯಮ್ಸ್ ಏಕದಿನ ಕ್ರಿಕೆಟ್ನಲ್ಲಿ 1000 ರನ್, 50 ವಿಕೆಟ್ ಮತ್ತು 50 ಕ್ಯಾಟ್​​ನಲ್ಲಿ ಪಡೆದ ದಾಖಲೆ ಹೊಂದಿದ್ದಾರೆ. ಅವರು 14 ಟೆಸ್ಟ್ ಪಂದ್ಯಗಳಲ್ಲಿ ಜಿಂಬಾಬ್ವೆಯನ್ನು ಪ್ರತಿನಿಧಿಸಿದ್ದಾರೆ ಮತ್ತು ನಾಲ್ಕು ಶತಕಗಳು ಮತ್ತು ಮೂರು ಅರ್ಧಶತಕಗಳ ಸಹಾಯದಿಂದ 1034 ರನ್ ಗಳಿಸಿದ್ದಾರೆ. ಟೆಸ್ಟ್ ಕ್ರಿಕೆಟ್​​ನಲ್ಲಿ 21 ವಿಕೆಟ್ ಕಬಳಿಸಿದ್ದಾರೆ.

Exit mobile version