ಬೆಂಗಳೂರು: ರಾಜ್ಯದಲ್ಲಿ ಮಳೆ ಇಲ್ಲದೆ ಜನರು ಪರಿತಪಿಸುತ್ತಿದ್ದಾರೆ. ಇದರಿಂದ ತೀವ್ರ ಬರದ (Karnataka Drought) ಸಮಸ್ಯೆಯಾಗಿದೆ. ಅಲ್ಲದೆ, ರಾಜ್ಯದಲ್ಲಿ 161 ತಾಲೂಕಿನಲ್ಲಿ ರಾಜ್ಯ ಸರ್ಕಾರ ಬರ ಘೋಷಣೆ ಮಾಡಿದೆ. ಈ ಸಂಬಂಧ ಕೇಂದ್ರ ಸರ್ಕಾರವು (Central Government) ಬರ ಅಧ್ಯಯನ ತಂಡವನ್ನು (Drought Study Team) ಕರ್ನಾಟಕಕ್ಕೆ ಕಳುಹಿಸುತ್ತಿದ್ದು, ಬುಧವಾರ (ಅಕ್ಟೋಬರ್ 4) ರಾತ್ರಿ ಅಧಿಕಾರಿಗಳು ರಾಜ್ಯಕ್ಕೆ ಆಗಮಿಸಲಿದ್ದಾರೆ. ಒಟ್ಟು 10 ಜನರ ಅಧಿಕಾರಿಗಳು ತಂಡದಲ್ಲಿದ್ದು, 13 ಜಿಲ್ಲೆಗಳಲ್ಲಿ ಅಧ್ಯಯನ ನಡೆಸಲಿದೆ.
ಈ ತಂಡವು ರಾಜ್ಯದಲ್ಲಿ ಒಟ್ಟು ಆರು ದಿನಗಳ ಕಾಲ ಅಧ್ಯಯನ ನಡೆಸಲಿದೆ. ಒಟ್ಟು ಮೂರು ತಂಡಗಳಲ್ಲಿ 13 ಜಿಲ್ಲೆಗಳಲ್ಲಿ ಪ್ರವಾಸ ಮಾಡಲಿರುವ ಅಧ್ಯಯನ ತಂಡವು, ಆಯಾ ಜಿಲ್ಲೆಯ ಬರ ಪರಿಸ್ಥಿತಿಗಳ ಬಗ್ಗೆ ಈ ತಂಡ ಅಧ್ಯಯನ ನಡೆಸಲಿದೆ.
ಇದನ್ನೂ ಓದಿ: Shivamogga Violence : ವೇಷ ಮರೆಸಿ ಗಲಭೆ ಹೇಳಿಕೆ; ರಾಮಲಿಂಗಾ ರೆಡ್ಡಿ ಮೇಲೆ ಮುಗಿಬಿದ್ದ ಬಿಜೆಪಿ
ರಾಜ್ಯ ಸರ್ಕಾರವು ಕಳೆದ ತಿಂಗಳು ಒಟ್ಟು 161 ತಾಲೂಕಿನಲ್ಲಿ ಬರ ಘೋಷಣೆ ಮಾಡಿತ್ತು. ಜತೆಗೆ ಹೆಚ್ಚುವರಿ 33 ತಾಲೂಕುಗಳನ್ನು ಸಹ ಸೇರ್ಪಡೆ ಮಾಡಿತ್ತು. ಅಲ್ಲದೆ, ಹೆಚ್ಚುವರಿಯಾಗಿ 43 ಕಡೆಗಳಲ್ಲಿ ಬರವಿದೆ ಎಂದು ರಾಜ್ಯ ಸರ್ಕಾರ ಹೇಳಿಕೊಂಡಿದೆ. ಆದರೆ, ಅದನ್ನು ಬರ ತಾಲೂಕುಗಳ ಪಟ್ಟಿಗೆ ಸೇರ್ಪಡೆ ಮಾಡಲು ಕೇಂದ್ರದ ಮಾನದಂಡ ಅಡ್ಡ ಬರುತ್ತಿದೆ.
43 ಕಡೆಗಳಲ್ಲೂ ಬರವಿದೆ. ಆದರೆ, ಕೇಂದ್ರ ನಿಯಮಗಳ ಅಡಿಯಲ್ಲಿ ಈ ತಾಲೂಕು ಸೇರಿಸಲು ಆಗಿಲ್ಲ. ರಾಜ್ಯದಲ್ಲಿ ಒಟ್ಟು 194 ತಾಲೂಕುಗಳಲ್ಲಿ ಬರ ಎದುರಾಗಿದೆ. ತಂಡದ ವರದಿ ಆಧರಿಸಿ ಕೇಂದ್ರ ಸರ್ಕಾರ ಬರಕ್ಕೆ ಹಣ ಬಿಡುಗಡೆ ಮಾಡಲಿದೆ.
ಈ 13 ಜಿಲ್ಲೆಗಳಲ್ಲಿ ಕೇಂದ್ರ ತಂಡದ ಪ್ರವಾಸ
- ವಿಜಯಪುರ
- ಬೆಳಗಾವಿ
- ಬಾಗಲಕೋಟೆ
- ಧಾರವಾಡ
- ಗದಗ
- ಕೊಪ್ಪಳ
- ಬಳ್ಳಾರಿ
- ವಿಜಯನಗರ
- ಚಿಕ್ಕಬಳ್ಳಾಪುರ
- ತುಮಕೂರು
- ಚಿತ್ರದುರ್ಗ
- ದಾವಣಗೆರೆ
- ಬೆಂಗಳೂರು ಗ್ರಾಮಾಂತರ
ಈ ಜಿಲ್ಲೆಗಳಲ್ಲಿ ಕೇಂದ್ರದ ಅಧ್ಯಯನ ತಂಡವು ಪ್ರವಾಸ ಮಾಡಲಿದ್ದು, ನೀರಿನ ಸ್ಥಿತಿಗತಿಗಳು ಹೇಗಿವೆ? ಹಸಿರಿನ ವಾತಾವರಣ ಇದೆಯೇ? ಬೆಳೆಗಳು ಒಣಗಿವೆಯೇ? ಎಷ್ಟು ಬೆಳೆಗಳು ನಾಶವಾಗಿವೆ? ಎಂಬಿತ್ಯಾದಿ ಅಂಶಗಳನ್ನು ಅಧ್ಯಯನ ಮಾಡಲಿವೆ.
ರಾಜ್ಯ ಸರ್ಕಾರ ಘೋಷಣೆ ಮಾಡಿರುವ 161 ಬರ ತಾಲೂಕುಗಳಲ್ಲಿ ಕೇಂದ್ರ ಸರ್ಕಾರದ ಮಾನದಂಡವನ್ನು ಅನುಸರಿಸಲಾಗಿದೆಯೇ? ಎಂಬುದನ್ನು ಪರಿಶೀಲನೆ ಮಾಡಲಾಗುತ್ತದೆ.
ಇದನ್ನೂ ಓದಿ: DK Shivakumar : ನನಗೆ ಜಾತಿ ರಾಜಕಾರಣ ಗೊತ್ತಿಲ್ಲ: ಡಿಸಿಎಂ ಡಿ.ಕೆ. ಶಿವಕುಮಾರ್
ಅಕ್ಟೋಬರ್ 12ಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ ಸಭೆ
ಕಾವೇರಿ ಜಲಸಂಕಷ್ಟ ವಿಚಾರವಾಗಿ ಅಕ್ಟೋಬರ್ 12ಕ್ಕೆ ಕಾವೇರಿ ನೀರು ನಿಯಂತ್ರಣ ಸಮಿತಿ (ಸಿಡಬ್ಲ್ಯುಆರ್‌ಸಿ) ಸಭೆಯು ನವ ದೆಹಲಿಯಲ್ಲಿ ನಡೆಯಲಿದೆ. ಇದೇ ವೇಳೆ ರಾಜ್ಯ ಸರ್ಕಾರ ಸಹ ಉತ್ತಮ ಮಳೆ ನಿರೀಕ್ಷೆಯಲ್ಲಿದೆ. ಒಂದು ವೇಳೆ ಉತ್ತಮ ಮಳೆಯಾದರೆ ಈ ಸಭೆಯು ಮಹತ್ವ ಪಡೆದುಕೊಳ್ಳುವುದಿಲ್ಲ.