Site icon Vistara News

Rain News | ಬೇಡಿಕೆ ಕುಸಿತ, ರಾಯಚೂರು ಶಾಖೋತ್ಪನ್ನ ಕೇಂದ್ರದ 6 ಘಟಕಗಳು ಸ್ಥಗಿತ

rayachuru

ರಾಯಚೂರು: ರಾಜ್ಯದಲ್ಲಿ ವಿಪರೀತ ಮಳೆ, ಗಾಳಿಯ ಪರಿಣಾಮ ರಾಯಚೂರಿನ ಶಾಖೋತ್ಪನ್ನ ಕೇಂದ್ರದಲ್ಲಿ ೬ ಘಟಕಗಳು ಸ್ಥಗಿತವಾಗಿವೆ. ಭಾರಿ ಮಳೆಯ ಪರಿಣಾಮ ವಿದ್ಯುತ್‌ಗೆ ಬೇಡಿಕೆ ಕುಸಿದಿದೆ. ಹೀಗಾಗಿ ಉತ್ಪಾದನಾ ಘಟಕಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿದೆ.

೨೧೦ ಮೆಗಾ ವ್ಯಾಟ್‌ ಸಾಮರ್ಥ್ಯದ ೧,೨,೩ ಮತ್ತು ೪ನೇ ಘಟಕ, 250 ಮೆಗಾ ವ್ಯಾಟ್ ಸಾಮರ್ಥ್ಯದ 7 ಮತ್ತು 8 ನೇ ಘಟಕಗಳು ಸ್ಥಗಿತವಾಗಿದೆ. 210 ಮೆಗಾ ವ್ಯಾಟ್ ಸಾಮರ್ಥ್ಯದ 5 ಮತ್ತು 6 ನೇ ಘಟಕದಲ್ಲಿ ಮಾತ್ರ ವಿದ್ಯುತ್ ಉತ್ಪಾದನೆಯಾಗುತ್ತಿದೆ.

ಜಲ, ಪವನ, ಸೌರ ವಿದ್ಯುತ್‌ ಮೂಲಗಳ ವಿದ್ಯುತ್‌ ಉತ್ಪಾದನೆ ವೃದ್ಧಿಸಿರುವುದರಿಂದ ಕಲ್ಲಿದ್ದಲು ಆಧಾರಿತ ಉಷ್ಣ ವಿದ್ಯುತ್‌ಗೆ ಬೇಡಿಕೆ ಇಳಿಕೆಯಾಗಿದೆ. ರಾಜ್ಯದ ೪೫% ವಿದ್ಯುತ್‌ ಬೇಡಿಕೆಯನ್ನು ರಾಯಚೂರಿನ ಶಾಖೋತ್ಪನ್ನ ಕೇಂದ್ರ ಭರಿಸುತ್ತಿತ್ತು.

Exit mobile version