Site icon Vistara News

Karnataka Weather : ಬಿಸಿಲ ತಾಪಕ್ಕೆ ಕರಾವಳಿ, ಉತ್ತರ ಕರ್ನಾಟಕ ತತ್ತರ

Dry weather likely to prevail over the State

ಬೆಂಗಳೂರು: ರಾಜ್ಯದಲ್ಲಿ ಶುಷ್ಕ ವಾತಾವರಣವೇ (Dry Weather) ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು (Karnataka Weather Forecast) ನೀಡಿದೆ.

ರಾಜ್ಯಾದ್ಯಂತ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ. ಇತ್ತ ಉತ್ತರ ಒಳನಾಡಿನ ಕೆಲವು ಕಡೆಗಳಲ್ಲಿ ಮತ್ತು ಕರಾವಳಿಯ ಒಂದೆರಡು ಕಡೆಗಳಲ್ಲಿ ಕನಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಿ ಇರಲಿದೆ.

ಬೆಂಗಳೂರು ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಆದರೆ ಬೆಂಗಳೂರು ವಿಮಾನ ನಿಲ್ದಾಣ ಸೇರಿ ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕುವ ಸಾಧ್ಯತೆ ಇದೆ. ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Murder Case : ನಿಗೂಢವಾಗಿ ನಾಪತ್ತೆಯಾಗಿದ್ದ ಯುವಕ ಹೊಲದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆ

ರಾಜ್ಯಾದ್ಯಂತ ಬುಧವಾರ ಒಣ ಹವೆ ಇತ್ತು. ರಾಜ್ಯದ ಸಮತಟ್ಟಾದ ಪ್ರದೇಶಗಳಲ್ಲಿ ಅತೀ ಕಡಿಮೆ ಕನಿಷ್ಠ ಉಷ್ಣಾಂಶ 15.8 ಡಿ.ಸೆ. ಮಂಡ್ಯದಲ್ಲಿ ದಾಖಲಾಗಿತ್ತು. ಕೋಲಾರದಲ್ಲಿ ಸರಾಸರಿ ಕನಿಷ್ಠ ಉಷ್ಣಾಂಶ 12.3 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ದಕ್ಷಿಣ ಕನ್ನಡದಲ್ಲಿ ಗರಿಷ್ಠ ಉಷ್ಣಾಂಶ 37.9 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.

ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಮತ್ತು ಕೋಲಾರದ ಕೆಲವು ಭಾಗಗಳಲ್ಲಿ ಕನಿಷ್ಠ ತಾಪಮಾನ 10 ಡಿಗ್ರಿ ಸೆಲ್ಸಿಯಸ್‌ನಿಂದ 12 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗಿದೆ. ಹಾವೇರಿ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಗರಿಷ್ಠ ತಾಪಮಾನ 40ರಿಂದ 42 ಡಿಗ್ರಿ ಸೆಲ್ಸಿಯಸ್ ವ್ಯಾಪ್ತಿಯಲ್ಲಿ ದಾಖಲಾಗಿದೆ.

ಇದನ್ನೂ ಓದಿ: Murder Case : ನಿಗೂಢವಾಗಿ ನಾಪತ್ತೆಯಾಗಿದ್ದ ಯುವಕ ಹೊಲದಲ್ಲಿ ಸುಟ್ಟ ಸ್ಥಿತಿಯಲ್ಲಿ ಪತ್ತೆ

ಹೊಟ್ಟೆ ಬಿರಿಯುವಂತೆ ಉಂಡ ಬಳಿಕ ಜೀರ್ಣಿಸಿಕೊಳ್ಳುವುದು ಹೇಗೆ? ಇಲ್ಲಿದೆ ಸರಳೋಪಾಯ!

ಕೆಲವೊಮ್ಮೆ ಯಾವುದೋ ಮದುವೆಯಲ್ಲೋ, ಹಬ್ಬದೂಟದ ಸಂದರ್ಭವೋ, ಅಥವಾ ಗೆಳೆಯರ ಜೊತೆಗೆ ರೆಸ್ಟೋರೆಂಟಿಗೆ ಹೋಗಿಯೋ ಅಗತ್ಯಕ್ಕಿಂತ ಹೆಚ್ಚೇ ಊಟ ಮಾಡಿ ಬಂದುಬಿಡುತ್ತೇವೆ. ಊಟ ಮಾಡುವ ಸಂದರ್ಭ ಮಾತುಕತೆಯಲ್ಲೋ, ಅಥವಾ ಊಟ ಬಹಳ ರುಚಿಯಾಗಿದೆಯೆಂದೋ, ತನ್ನ ಫೇವರಿಟ್‌ ಅಡುಗೆ ಬಹಳ ದಿನಗಳ ನಂತರ ಸಿಕ್ಕಿದೆಯೆಂದೋ ಹೊಟ್ಟೆ ಬಿರಿಯ ತಿಂದುಬಿಡುತ್ತೇವೆ. ಊಟ ಕುತ್ತಿಗೆವರೆಗೆ ಬಂದಿದೆ ಅನಿಸಿದರೂ, ಕೊನೆಯಲ್ಲಿ ಸಿಹಿತಿನಿಸನ್ನೋ, ಐಸ್‌ಕ್ರೀಮನ್ನೋ ಹೊಟ್ಟೆಗಿಳಿಸಿ ತೇಗುತ್ತೇವೆ. ಎಲ್ಲ ಮುಗಿದ ಮೇಲೆ ಹೊಟ್ಟೆ ಮೇಲೆ ಕೈಯಾಡಿಸುವಾಗಲೇ ಇಹಲೋಕಕ್ಕೆ ಮರಳಿ, ಅಗತ್ಯಕ್ಕಿಂತ ಹೆಚ್ಚೇ ತಿಂದೆ ಎಂಬ ಅನುಭವವಾಗುವುದು. ಕೆಲವೊಮ್ಮೆ ಇಂಥ ಊಟ ಮಾಡುವ ಸಂದರ್ಭ ಮನಸ್ಸಿಗೆ ಖುಷಿಯಾದರೂ, ಜ್ಞಾನೋದಯವಾಗುವ ಹೊತ್ತಿಗೆ ಹೊಟ್ಟೆ ಉಬ್ಬರಿಸಿದಂಥ ಭಾವ. ಇನ್ನೇನು ಮಾಡುವುದು, ಹೊಟ್ಟೆ ಹೊತ್ತುಕೊಂಡು ನಾಲ್ಕು ಹೆಜ್ಜೆ ನಡೆಯಲಾರದಷ್ಟು ಹೊಟ್ಟೆ ಭಾರ. ಅದಕ್ಕಾಗಿಯೇ ಯಾವಾಗಲೂ ನಾವು ತಿನ್ನುತ್ತಿರುವ ಆಹಾರ ಪೋಷಕಾಂಶಗಳಿಂದ ಸಮೃದ್ಧವಾಗಿದೆಯೇ ಎಂದು ಯೋಚಿಸಬೇಕು. ದೇಹದ ಪಚನಕ್ರಿಯೆಯನ್ನು ಚುರುಕಾಗಿಸಲು ಯಾವಾಗಲೂ ಸಮೃದ್ಧ ಆಹಾರಗಳಲ್ಲೇ ಹೆಚ್ಚು ತಾಕತ್ತಿದೆ. ಆದರೂ, ಕೆಲವೊಮ್ಮೆ ನಮ್ಮ ಮನೋಸಾಮರ್ಥ್ಯವನ್ನು ಮೀರಿ ನಾವು ತಿಂದು ಬಿಡುತ್ತೇವೆ. ಅಂಥ ಸಂದರ್ಭ ನಮ್ಮ ಪಚನಕ್ರಿಯೆಯನ್ನು ಚುರುಕಾಗಿಸಲು, ಕೊಂಚ ಬೇಗನೆ ಹೊಟ್ಟೆ ಹಗುರಾಗಿಸಲು ಯಾವ ಉತ್ತೇಜಕ ಆಹಾರಗಳನ್ನು ಕೊನೆಯಲ್ಲಿ ಊಟದ ನಂತರ ಸೇವಿಸಬಹುದು (health tips for digestion) ಎಂಬುದನ್ನು ನೋಡೋಣ.

ಸೋಂಪು ಹಾಗೂ ಜೀರಿಗೆ

ಸೋಂಪು ಹಾಗೂ ಜೀರಿಗೆಯಲ್ಲಿರುವ ಅಂಶಗಳು ನಮ್ಮ ದೇಹದಲ್ಲಿ ಜೀರ್ಣಕಾರಕ ಕಿಣ್ವಗಳನ್ನು ಪ್ರಚೋದಿಸುತ್ತವೆ. ಜೀರಿಗೆ ಜೀರ್ಣಕ್ರಿಯೆಗೆ ಸಹಾಯ ಮಾಡುವುದಲ್ಲದೆ ಕೊಬ್ಬು ಕರಗಿಸುವಲ್ಲಿಯೂ ನೆರವಾಗುತ್ತದೆ. ತೂಕ ಇಳಿಸುವ ಮಂದಿಗೂ ಇದು ತೂಕ ಇಳಿಕೆಗೆ ನೆರವಾಗುತ್ತದೆ. ಆರೋಗ್ಯಕರ ಆಹಾರದ ಸೇವನೆಯೊಂದಿಗೆ ಇವುಗಳ ಸೇವನೆಯು ಈ ಎಲ್ಲ ಕ್ರಿಯೆಗಳನ್ನು ಇನ್ನಷ್ಟು ಚುರುಕುಗೊಳಿಸುವಲ್ಲಿ ನೆರವಾಗುತ್ತದೆ.

ಅಜ್ವೈನ್‌ (ಓಂಕಾಳು)

ಓಂಕಾಳನ್ನು ನೀರಿನಲ್ಲಿ ಕುದಿಸಿ ಕುಡಿಯುವುದರಿಂದ ಸಾಕಷ್ಟು ಜೀರ್ಣ ಸಂಬಂಧೀ ಸಮಸ್ಯೆಗಳು ಪರಿಹಾರವಾಗುತ್ತವೆ. ತಿಂದಿದ್ದು ಅತಿಯಾದಾಗ ಅಥವಾ ರಾತ್ರಿ ಇದರ ನೀರನ್ನು ಕೊನೆಯಲ್ಲಿ ಕುಡಿದು ಮಲಗುವುದರಿಂದ ಸಮರ್ಪಕವಾಗಿ ಜೀರ್ಣವಾಗಲು ಸಹಾಯವಾಗುತ್ತದೆ. ಅಜೀರ್ಣವಾದಾಗ, ಜೀರ್ಣಕ್ರಿಯೆ ಸಮರ್ಪಕವಾಗಿ ನಡೆಯದಾದಾಗ ಇದರ ನೀರನ್ನು ಕುಡಿಯುವುದರಿಂದ ಜೀರ್ಣಕಾರಕ ಕಿಣ್ವಗಳು ಬಿಡುಗಡೆಯಾಗಿ ಬೇಗನೆ ಜೀರ್ಣವಾಗಲು ನೆರವಾಗುತ್ತವೆ.

ಮಜ್ಜಿಗೆ

ಮಜ್ಜಿಗೆ ನೀರೂ ಕೂಡ ಜೀರ್ಣಕ್ಕೆ ಒಳ್ಳೆಯದು. ಅತಿಯಾಗಿ ಉಂಡಾಗ, ಮದುವೆಯೂಟದಂತಹ ಹಬ್ಬದಡುಗೆ ಉಂಡಾಗ ಒಂದು ಮಜ್ಜಿಗೆ ನೀರು ಕುಡಿದು ಅಂತ್ಯಗೊಳಿಸಿದರೆ, ಜೀರ್ಣಕ್ರಿಯೆ ಚುರುಕಾಗುತ್ತದೆ.

Lettuce

ಬೆರ್ರಿ ಹಣ್ಣುಗಳು

ಆಂಟಿ ಆಕ್ಸಿಡೆಂಟ್‌ಗಳು ಹಾಗೂ ನಾರಿನಂಶ ಹೇರಳವಾಗಿರುವ ಬೆರ್ರಿ ಹಣ್ಣುಗಳು ಹುಳಿಸಿಹಿಯಾದ ಹಣ್ಣುಗಳು. ಇವುಗಳ ಸೇವನೆ ಜೀರ್ಣಕ್ರಿಯೆಯನ್ನು ಚುರುಕಾಗಿಸುತ್ತದೆ. ಊಟವಾದ ನಂತರ ಸ್ವಲ್ಪ ಹೊತ್ತಿನ ಮೇಲೆ ಇವುಗಳನ್ನು ಸೇವಿಸುವ ಮೂಲಕ ಜೀರ್ಣಕ್ರಿಯೆಗೆ ಪ್ರಚೋದನೆ ನೀಡಬಹುದು.

ಗ್ರೀನ್‌ ಟೀ

ಗ್ರೀನ್‌ ಟೀಯಲ್ಲಿರುವ ಕೆಟಚಿನ್‌ ಎಂಬ ಅಂಶವು ಜೀರ್ಣಕ್ರಿಯೆಯನ್ನು ಚುರುಕುಗೊಳಿಸುವ ಗುಣವನ್ನು ಹೊಂದಿದೆ. ಅಷ್ಟೇ ಅಲ್ಲ, ಇದಕ್ಕೆ ಕೊಬ್ಬು ಕರಗಿಸುವ ಗುಣವೂ ಇದೆ. ಹಾಗಾಗಿಯೇ ಗ್ರೀನ್‌ಟೀ ತೂಕ ಇಳಿಸುವವರ ಅತ್ಯಂತ ಪ್ರಿಯವಾದ ಪೇಯ. ಊಟದ ಸ್ವಲ್ಪ ಹೊತ್ತಿನ ನಂತರ ಗ್ರೀನ್‌ಟೀ ಕುಡಿಯುವ ಮೂಲಕ ಜೀರ್ಣಕ್ರಿಯೆಗೆ ಚುರುಕು ಮುಟ್ಟಿಸಬಹುದು.

ಸೊಪ್ಪು

ನಾರಿನಂಶ ಹೆಚ್ಚಿರುವ, ಪೋಷಕಾಂಶಗಳಿಂದ ಸಂಪದ್ಭರಿತವಾಗಿರುವ ಪಾಲಕ್‌, ಬಸಳೆ, ಕೊತ್ತಂಬರಿ ಸೊಪ್ಪು, ಮೆಂತ್ಯ ಸೊಪ್ಪು ಸೇರಿದಂತೆ ಬಹುತೇಕ ಎಲ್ಲ ಸೊಪ್ಪುಗಳೂ ಕೂಡಾ, ಹೊಟ್ಟೆಯಲ್ಲಿ ಸುಲಭವಾಗಿ ಜೀರ್ಣವಾಗುವಂಥವುಗಳು. ಹೆಚ್ಚು ಉಂಡ ಸಂದರ್ಭಗಳಲ್ಲಿ, ನಂತರದ ಊಟವನ್ನು ಮಿತವಾಗಿ ಇಟ್ಟುಕೊಳ್ಳುವ ಮೂಲಕ ಅಥವಾ ಸೊಪ್ಪಿನ ಸೂಪ್‌ ಅಥವಾ ಸೊಪ್ಪಿನ ಆಹಾರ ಪದಾರ್ಥಗಳ ಸೇವನೆಯ ಮೂಲಕ ಜೀರ್ಣಕ್ರಿಯೆ ಸರಾಗವಾಗಿ ಆಗವಂತೆ ನೋಡಿಕೊಳ್ಳಬಹುದು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ‌

Exit mobile version