Site icon Vistara News

Karnataka Weather: ಉತ್ತರ ಕರ್ನಾಟಕಕ್ಕೂ ಆವರಿಸಲಿದ್ಯಾ ಮಳೆ? ಯಾವ್ಯಾವ ಜಿಲ್ಲೆಗೆ ಅಲರ್ಟ್‌

Girl standing in River side And Holding Umbrela

ಬೆಂಗಳೂರು: ದಕ್ಷಿಣ ಒಳನಾಡು ಹಾಗೂ ಕರಾವಳಿ, ಮಲೆನಾಡಲ್ಲಿ ಮಳೆಯು ವೈಲೆಂಟ್‌ ಆಗಿದ್ದರೆ, ಉತ್ತರ ಒಳನಾಡಲ್ಲಿ ಸೈಲೆಂಟ್‌ ಆಗಿತ್ತು. ಇದೀಗ ರಾಜ್ಯದಲ್ಲಿ ಇನ್ನೆರಡು ದಿನಗಳು (Karnataka Weather Forecast) ಗುಡುಗು, ಮಿಂಚು ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ. ದಕ್ಷಿಣ ಒಳನಾಡು, ಮಲೆನಾಡು, ಕರಾವಳಿಯ ಬಹುತೇಕ ಕಡೆಗಳಲ್ಲಿ ಮಳೆ (Rain News) ಮುಂದುವರಿಯಲಿದ್ದು, ಒಣಹವೆ ಇದ್ದ ಉತ್ತರ ಒಳನಾಡಲ್ಲಿ ಮಳೆಯು ಆವರಿಸಲಿದೆ.

ದಕ್ಷಿಣ ಒಳನಾಡಲ್ಲಿ ಸಾಧಾರಣ ಮಳೆ

ದಕ್ಷಿಣ ಒಳನಾಡಿನ ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ತುಮಕೂರು ಹಾಗೂ ಚಾಮರಾಜನಗರದಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಬಹುದು. ಉಳಿದ ಭಾಗಗಳಲ್ಲಿ ಹಗುರದಿಂದ ಕೂಡಿದ ಮಳೆ ಸುರಿಯಬಹುದು.

ಇನ್ನು ಉತ್ತರ ಒಳನಾಡಿನಲ್ಲಿ ನಿಧಾನವಾಗಿ ಮಳೆಯು ಶುರುವಾಗಿದೆ. ಬೆಳಗಾವಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ವ್ಯಾಪಕವಾಗಿ ಹಗುರದಿಂದ ಸಾಧಾರಣ ಮಳೆಯಾಗಲಿದೆ. ಉಳಿದ ಭಾಗಗಳಲ್ಲಿ ಪ್ರತ್ಯೇಕವಾಗಿ ಚದುರಿದಂತೆ ಮಧ್ಯಮ ಮಳೆಯಾಗಬಹುದು. ಆದರೆ ಕಲಬುರಗಿ ಮತ್ತು ಯಾದಗಿರಿಯಲ್ಲಿ ಶುಷ್ಕ ವಾತಾವರಣ ಇರಲಿದೆ.

ಇದನ್ನೂ ಓದಿ: Kochi Stampede: ಹೃದಯ ಛಿದ್ರಗೊಂಡಿದೆ; ಕೊಚ್ಚಿ ಕಾಲ್ತುಳಿತಕ್ಕೆ ಗಾಯಕಿ ನಿಖಿತಾ ಗಾಂಧಿ ಕಂಬನಿ

ಕರಾವಳಿ, ಮಲೆನಾಡಲ್ಲಿ ಭಾರಿ ಮಳೆ

ಮಲೆನಾಡಿನ ಹಾಸನ, ಶಿವಮೊಗ್ಗದಲ್ಲಿ ವ್ಯಾಪಕ ಮಳೆಯಾಗಲಿದೆ. ಚಿಕ್ಕಮಗಳೂರು, ಕೊಡಗಿನಲ್ಲಿ ಅಲ್ಪ ಮಳೆಯ ಸಾಧ್ಯತೆ ಇದೆ. ಕರಾವಳಿಯ ದಕ್ಷಿಣ ಕನ್ನಡದಲ್ಲಿ ಭರ್ಜರಿ ಮಳೆಯಾದರೆ, ಉಡುಪಿ ಹಾಗೂ ಉತ್ತರ ಕನ್ನಡದಲ್ಲಿ ತುಂತುರು ಮಳೆಯಾಗಲಿದೆ.

ಬೆಂಗಳೂರಲ್ಲಿ ಸಣ್ಣ ಮಳೆ

ಬೆಂಗಳೂರಲ್ಲಿ ಮುಂಜಾನೆ ಹೊತ್ತು ಸಾಮಾನ್ಯವಾಗಿ ಮೋಡ ಕವಿದ ವಾತಾವರಣವಿರಲಿದೆ. ಕೆಲವೆಡೆ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆ ಇದೆ. ಕೆಲವು ಕಡೆಗಳಲ್ಲಿ ಬೆಳಗಿನ ಜಾವ ಮಂಜು ಮುಸುಕಲಿದೆ. ಗರಿಷ್ಠ ಉಷ್ಣಾಂಶ 26 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಪ್ರಮುಖ ನಗರಗಳಲ್ಲಿನ ಇಂದಿನ ತಾಪಮಾನ ಹೀಗಿದೆ.

ನಗರದ ಹೆಸರು- ಗರಿಷ್ಠ ಉಷ್ಣಾಂಶ- ಕನಿಷ್ಠ ಉಷ್ಣಾಂಶ (ಡಿಗ್ರಿ ಸೆಲ್ಸಿಯಸ್‌)
ಬೆಂಗಳೂರು ನಗರ: 26 ಡಿ.ಸೆ -19 ಡಿ.ಸೆ
ಮಂಗಳೂರು: 34 ಡಿ.ಸೆ – 24 ಡಿ.ಸೆ
ಚಿತ್ರದುರ್ಗ: 30 ಡಿ.ಸೆ – 20 ಡಿ.ಸೆ
ಗದಗ: 31 ಡಿ.ಸೆ – 20 ಡಿ.ಸೆ
ಹೊನ್ನಾವರ: 36 ಡಿ.ಸೆ- 23 ಡಿ.ಸೆ
ಕಲಬುರಗಿ: 34 ಡಿ.ಸೆ – 21 ಡಿ.ಸೆ
ಬೆಳಗಾವಿ: 30 ಡಿ.ಸೆ – 20 ಡಿ.ಸೆ
ಕಾರವಾರ: 35 ಡಿ.ಸೆ – 24 ಡಿ.ಸೆ

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ. ಜತೆಗೆ ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ.

Exit mobile version