Site icon Vistara News

Karnataka Weather : ಕರಾವಳಿ ಸೇರಿ ದಕ್ಷಿಣದಿಂದ ಉತ್ತರ ಒಳನಾಡಿನವರೆಗೂ ತಾಪಮಾನ ದುಪ್ಪಟ್ಟು

The maximum temperature doubles from south to north interior Karnataka including coastal areas

ಬೆಂಗಳೂರು: ಮುಂದಿನ 48 ಗಂಟೆಯಲ್ಲಿ ರಾಜ್ಯಾದ್ಯಂತ ಒಣ ಹವೆ (Dry Weather) ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ (Karnataka Weather Forecast) ಮುನ್ಸೂಚನೆಯನ್ನು ನೀಡಿದೆ.

ಇನ್ನೂ ಕರಾವಳಿಯ ಕೆಲವು ಕಡೆಗಳಲ್ಲಿ ಮತ್ತು ಉತ್ತರ ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2-3 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ. ಇನ್ನೂ ದಕ್ಷಿಣ ಒಳನಾಡಿನ ಒಂದೆರಡು ಕಡೆಗಳಲ್ಲಿ ಗರಿಷ್ಠ ತಾಪಮಾನವು ಸಾಮಾನ್ಯಕ್ಕಿಂತ 2 ಡಿಗ್ರಿ ಸೆಲ್ಸಿಯಸ್ ಹೆಚ್ಚಾಗಲಿದೆ.

ಮುಂದಿನ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ ಮುಖ್ಯವಾಗಿ ನಿರ್ಮಲ ಆಕಾಶವಿರುತ್ತದೆ. ಗರಿಷ್ಠ ಉಷ್ಣಾಂಶ 33 ಮತ್ತು ಕನಿಷ್ಠ ಉಷ್ಣಾಂಶ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.

ಇದನ್ನೂ ಓದಿ: Mysuru News : ಪತಿಗೆ ಬ್ಯಾಂಕ್‌ನಿಂದ ನೋಟಿಸ್; ಹೆದರಿ ಟಾಯ್ಲೆಟ್‌ನಲ್ಲಿ ಪತ್ನಿ ಆತ್ಮಹತ್ಯೆ

ಬಾಗಲಕೋಟೆಯಲ್ಲಿ ಬಿಸಿಲ ತಾಪ

ಶನಿವಾರ ರಾಜಧಾನಿ ಬೆಂಗಳೂರು ಸೇರಿದಂತೆ ಹಲವೆಡೆ ಶುಷ್ಕ ವಾತಾವರಣವೇ ಮುಂದುವರಿದಿತ್ತು. ಗರಿಷ್ಠ ಉಷ್ಣಾಂಶ 38.5 ಡಿ.ಸೆ ಬಾಗಲಕೋಟೆಯಲ್ಲಿ ದಾಖಲಾಗಿದ್ದರೆ, ಕನಿಷ್ಠ ಉಷ್ಣಾಂಶ 16.0 ಡಿ.ಸೆ. ಚಾಮರಾಜನಗರದಲ್ಲಿ ದಾಖಲಾಗಿದೆ.

ಇನ್ನೂ ಸರಾಸರಿ ಕನಿಷ್ಠ ಉಷ್ಣಾಂಶ 16 ಡಿಗ್ರಿ ಸೆಲ್ಸಿಯಸ್ ಕೋಲಾರ ಜಿಲ್ಲೆಯಲ್ಲಿ ದಾಖಲಾಗಿದೆ. ರಾಯಚೂರಲ್ಲಿ ಸರಾಸರಿ ಗರಿಷ್ಠ ಉಷ್ಣಾಂಶ 38.7 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ. ಬೆಂಗಳೂರು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ, ಬೆಳಗಾವಿ, ರಾಮನಗರದಲ್ಲಿ ಕನಿಷ್ಠ ಉಷ್ಣಾಂಶ 13 ಡಿಗ್ರಿ ಸೆಲ್ಸಿಯಸ್ ನಿಂದ 15 ಡಿಗ್ರಿ ಸೆಲ್ಸಿಯಸ್‌ವರೆಗೆ ದಾಖಲಾಗಿದೆ. ಕಲಬುರಗಿ, ಬಾಗಲಕೋಟೆ, ಯಾದಗಿರಿ ಮತ್ತು ಬಳ್ಳಾರಿ ಸೇರಿದಂತೆ ರಾಯಚೂರು, ತುಮಕೂರು, ವಿಜಯಪುರ, ಗದಗ ಜಿಲ್ಲೆಗಳಲ್ಲಿ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ ನಿಂದ 41 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ.

ಕುತ್ತಿಗೆ ನೋವೇ?‌ ಮಾನಸಿಕ ಒತ್ತಡವೂ ಕಾರಣವಾಗಿರಬಹುದು!

ಮಾನಸಿಕ ಒತ್ತಡವು ದೇಹದ ಮೇಲೆ ಹಲವು ರೀತಿಯಲ್ಲಿ ಪರಿಣಾಮ ಬೀರಬಲ್ಲದು. ಜೀರ್ಣಾಂಗಗಳ ಆರೋಗ್ಯದಲ್ಲಿ ಏರುಪೇರು, ಬೆನ್ನು ನೋವು, ಕುತ್ತಿಗೆ ನೋವು- ಹೀಗೆ ತರಹೇವಾರಿ ಸಮಸ್ಯೆಗಳನ್ನು ಹುಟ್ಟುಹಾಕಬಲ್ಲದು. ಅದರಲ್ಲೂ ತೀವ್ರವಾದ ಆತಂಕ ಮತ್ತು ಒತ್ತಡವು ಅಷ್ಟೇ ತೀವ್ರವಾದ ಕುತ್ತಿಗೆ ನೋವನ್ನು ಸೃಷ್ಟಿಸಬಲ್ಲದು. ಮಾನಸಿಕ ಒತ್ತಡ (Stress can cause neck pain) ಹೆಚ್ಚಾದಷ್ಟೂ ಸ್ನಾಯುಗಳ ಮೇಲಿನ ಒತ್ತಡವೂ ಹೆಚ್ಚುತ್ತದೆ. ಇದರಿಂದ ನೋವು ಮತ್ತು ಕಿರಿಕಿರಿ ಇನ್ನಷ್ಟು ಏರುತ್ತದೆ. ಒತ್ತಡಕ್ಕೂ ಕುತ್ತಿಗೆಗೂ…: ಸಂಬಂಧ ಇದೆ ಎನ್ನುವುದನ್ನು ಅಧ್ಯಯನಗಳು ದೃಢಪಡಿಸಿವೆ. ನಮ್ಮ ದೇಹದಲ್ಲಿ ಒತ್ತಡ ಹೆಚ್ಚಾದಷ್ಟಕ್ಕೂ ಶರೀರ ಫೈಟ್‌-ಫ್ಲೈಟ್‌ ಎನ್ನುವ ಅವಸ್ಥೆಗೆ ತಲುಪುತ್ತದೆ. ಹೀಗಿರುವಾಗ ಸ್ನಾಯುಗಳ ಮೇಲಿನ ಒತ್ತಡ ಏರುತ್ತದೆ. ದೀರ್ಘ ಕಾಲ ಒತ್ತಡ ಶಮನಕ್ಕೆ ಯಾವುದೇ ಮಾರ್ಗವನ್ನು ಅನುಸರಿಸದಿದ್ದರೆ, ತಡೆಯಲಾರದಂಥ ಕುತ್ತಿಗೆ ನೋವು ಕಾಡುತ್ತದೆ. ಮಾತ್ರವಲ್ಲ, ಒತ್ತಡ ಹೆಚ್ಚಿದಾಗ ನಿದ್ದೆಗೆಡುವುದು, ಉರಿಯೂತ ಹೆಚ್ಚುವಂಥ ಆಹಾರಗಳನ್ನು ತಿನ್ನುವುದು, ಯಾವ್ಯಾವುದೋ ಭಂಗಿಗಳಲ್ಲಿ ಕುಳಿತುಕೊಳ್ಳುವುದು ಸಹ ಹೆಚ್ಚಾಗುತ್ತದೆ. ಇವೆಲ್ಲವುಗಳ ಕೃಪೆಯಿಂದ ಕುತ್ತಿಗೆ ನೋವು ಅಸಹನೀಯ ಎನ್ನುವಷ್ಟಾಗುತ್ತದೆ. ಇದಕ್ಕೆ ಮದ್ದುಂಟೇ?

ಭಂಗಿ

ಮೊದಲಿಗೆ ಕುಳಿತುಕೊಳ್ಳುವ, ಮಲಗುವ ಭಂಗಿಗಳ ಬಗ್ಗೆ ಗಮನ ಕೊಡಿ. ದಿನವಿಡೀ ಕಂಪ್ಯೂಟರ್‌ನಲ್ಲಿ ಕೆಲಸ ಮಾಡುವವರಾಗಿದ್ದರೆ ಕಣ್ಣಿನ ಮಟ್ಟಕ್ಕೇ ಪರದೆ ಇರಿಸಿಕೊಳ್ಳಿ. ಭುಜಗಳನ್ನು ನಿರಾಳವಾಗಿ ಇರಿಸಿಕೊಳ್ಳಿ. ಕೂರುವ ಕುರ್ಚಿ ನಿಮ್ಮ ಎತ್ತರಕ್ಕೆ ಸರಿಯಾಗಿರಲಿ. ಮಲಗುವಾಗಲೂ ಸರಿಯಾಗ ಭಂಗಿಗಳು ಅಗತ್ಯ. ಬೆನ್ನು, ಕುತ್ತಿಗೆ ನೋವಿನ ಸಂದರ್ಭಗಳಲ್ಲಿ ಸೂಕ್ತ ಎತ್ತರದ ದಿಂಬುಗಳಿರಲಿ.

ಸ್ಟ್ರೆಚ್‌ ಮಾಡಿ

ತಾಸುಗಟ್ಟಲೆ ಒಂದೇ ಭಂಗಿಯಲ್ಲಿ ಕುಳಿತುಕೊಳ್ಳುವುದು ಅಥವಾ ನಿಲ್ಲುವುದು ಸರಿಯಲ್ಲ. ಇದರಿಂದ ಸ್ನಾಯುಗಳ ಮೇಲಿನ ಒತ್ತಡ ದ್ವಿಗುಣಗೊಳ್ಳುತ್ತದೆ. ಸದಾ ಒಂದೇ ಭಂಗಿಯಲ್ಲಿ ಕೂರುವ ಬದಲು ತಾಸಿಗೊಮ್ಮೆ ಕೆಲವು ನಿಮಿಷಗಳ ವಿರಾಮ ತೆಗೆದುಕೊಳ್ಳಿ. ಬೆನ್ನು, ಕುತ್ತಿಗೆ ಮತ್ತು ತೋಳುಗಳನ್ನು ಚೆನ್ನಾಗಿ ಸ್ಟ್ರೆಚ್‌ ಮಾಡಿ. ಇದರಿಂದ ನೋವು ಹೆಚ್ಚಾಗುವುದನ್ನು ತಡೆಯಬಹುದು.

ತೂಕ ಎತ್ತದಿರಿ

ದೇಹದಲ್ಲಿ ಯಾವುದೇ ಭಾಗದಲ್ಲಿ ನೋವಿದ್ದರೆ, ತೂಕ ಎತ್ತುವ ಸಾಹಸಕ್ಕೆ ಕೈ ಹಾಕಬೇಡಿ. ಹೀಗೆಂದರೆ ಜಿಮ್‌ಗೆ ಹೋಗಿ ತೂಕ ಎತ್ತುವವರಿಗೆ ಮಾತ್ರವೇ ಇದು ಅನ್ವಯಿಸುತ್ತದೆ ಎಂದು ಭಾವಿಸುವಂತಿಲ್ಲ. ಮನೆಯಲ್ಲೇ ಗ್ರೈಂಡರ್‌ ಎತ್ತುವುದು, ಮಂಚ, ಕುರ್ಚಿ-ಮೇಜುಗಳನ್ನು ಜರುಗಿಸುವುದು- ಇಂಥವೆಲ್ಲ ಬೆನ್ನು ಮತ್ತು ಕುತ್ತಿಗೆಯ ಮೇಲೆ ಒತ್ತಡ ಹೆಚ್ಚಿಸುತ್ತವೆ.

ದಿಂಬು

ಮಲಗುವಾಗ ಹಾಕುವ ದಿಂಬಿನ ಎತ್ತರದ ಬಗ್ಗೆ ಗಮನ ನೀಡಿ. ತೀರಾ ಎತ್ತರದ ದಿಂಬು ಮತ್ತು ದಿಂಬೇ ಇಲ್ಲದಿರುವುದು- ಈ ಎರಡೂ ವಿಷಯಗಳು ಕುತ್ತಿಗೆ ನೋವನ್ನು ಹೆಚ್ಚಿಸುತ್ತವೆ. ಮೆಮರಿ ಫೋಮ್‌ ದಿಂಬುಗಳು ಕುತ್ತಿಗೆ ನೋವಿನ ತೀವ್ರತೆಯನ್ನು ಗಣನೀಯವಾಗಿ ತಗ್ಗಿಸುತ್ತವೆ. ಖರೀದಿಸುವಾಗ ದುಬಾರಿ ಎನಿಸಿದರೂ, ನಿಮ್ಮ ಕುತ್ತಿಗೆಯ ಆರೋಗ್ಯಕ್ಕಾಗಿ ಇದೇನು ದೊಡ್ಡದೆನಿಸದು.

ಫಿಸಿಯೊಥೆರಪಿ

ಕುತ್ತಿಗೆ ನೋವಿಗೆ ಫಿಸಿಯೊಥೆರಪಿ ಉತ್ತಮ ಮದ್ದಾಗಬಲ್ಲದು. ಈ ಬಗ್ಗೆ ವೈದ್ಯರ ಸಲಹೆ ಕೇಳಿ ಮುಂದುವರಿಯುವುದು ಒಳ್ಳೆಯದು. ನೋವಿಗೆ ಕಾರಣವೇನೆಂದು ಪತ್ತೆ ಮಾಡಿ, ಅದಕ್ಕೆ ಸರಿ ಹೊಂದುವ ಚಿಕಿತ್ಸೆಗಳನ್ನು ನೀಡಲಾಗುತ್ತದೆ. ಜೊತೆಗೆ ವ್ಯಾಯಾಮ, ಮಸಾಜ್‌ ಮುಂತಾದವು ಬಿಗಿದ ಸ್ನಾಯುಗಳನ್ನು ಸಡಿಲ ಮಾಡುತ್ತದೆ.

#image_title

ಬಿಸಿ-ತಣ್ಣಗಿನ ಪ್ಯಾಕ್‌

ಕುತ್ತಿಗೆಯ ಸ್ನಾಯುಗಳ ಬಿಗಿತ ಅಥವಾ ಉರಿಯೂತವನ್ನು ಶಮನ ಮಾಡುವುದಕ್ಕೆ ಬಿಸಿ ಇಲ್ಲವೇ ತಣ್ಣಗಿನ ಪ್ಯಾಕ್‌ಗಳು ಸಹಾಯ ಮಾಡುತ್ತವೆ. ಹೀಟಿಂಗ್‌ ಪ್ಯಾಡ್‌, ಬಿಸಿ ನೀರಿನ ಬಟ್ಟೆ ಮುಂತಾದವು ೧೫ ನಿಮಿಷಗಳ ಕುತ್ತಿಗೆಯ ಮೇಲಿದ್ದರೆ ಆರಾಮ ನೀಡಬಲ್ಲವು. ಪ್ರತಿಯಾಗಿ, ತಣ್ಣನೆಯ ಪ್ಯಾಡ್‌ ಅಥವಾ ತಣ್ಣೀರು ಬಟ್ಟೆಯೂ ಅನುಕೂಲವಾಗುತ್ತದೆ.

ಒತ್ತಡ ನಿರ್ವಹಣೆ

ಇದು ಎಲ್ಲಕ್ಕಿಂತ ಅತ್ಯಂತ ಮಹತ್ವದ್ದು. ಯೋಗ, ಪ್ರಾಣಾಯಾಮ, ದೀರ್ಘ ಉಸಿರಾಟ, ಧ್ಯಾನ, ಸಂಗೀತ ಕೇಳುವುದು ಅಥವಾ ಇನ್ಯಾವುದೇ ರೀತಿಯ ಒತ್ತಡ ನಿರ್ವಹಣೆಯ ತಂತ್ರಗಳು ನೋವಿನಿಂದ ಮುಕ್ತಿ ನೀಡಬಲ್ಲವು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version