Site icon Vistara News

Rain News : ಮಳೆಗಾಗಿ ಹೂತಿರುವ ಶವವನ್ನೇ ಹೊರತೆಗೆದ ಗ್ರಾಮಸ್ಥರು!

The villagers pulled out the body buried in the mud as it was not raining

ಕೊಪ್ಪಳ: ಮಳೆಯಿಲ್ಲದೆ ನೀರಿಗಾಗಿ (Rain News) ಎಲ್ಲಿಲ್ಲದ ಸಂಕಷ್ಟ ಎದುರಾಗುತ್ತಿದೆ. ಕೆಲವೊಂದು ಕಡೆ ಮಳೆಗಾಗಿ ಜನರು ದೇವರ ಮೊರೆ ಹೋಗುತ್ತಿದ್ದಾರೆ. ಈ ನಿಟ್ಟಿನಲ್ಲಿ ಒಂದೊಂದು ಕಡೆ ಒಂದೊಂದು ಸಂಪ್ರದಾಯಗಳೂ ಚಾಲ್ತಿಯಲ್ಲಿವೆ. ಕೆಲವು ಕಡೆ ಚಿಕನ್ ತಿನ್ನುವಂತಿಲ್ಲ, ಮಟನ್ ಮುಟ್ಟುವಂತಿಲ್ಲ, ‌ಮನೆಯಲ್ಲಿ ರೊಟ್ಟಿ ತಟ್ಟಂಗಿಲ್ಲ, ಒಗ್ಗರಣೆಯಂತೂ ಹಾಕುವಂತಿಲ್ಲ. ಕಪ್ಪೆ, ಕತ್ತೆ ಮದುವೆ ಸೇರಿ ಬಾಲಕರಿಗೆ ಹುಡುಗಿ ವೇಷ ಹಾಕಿಸಿ ಮದುವೆ ಮಾಡಿದ್ದು ಕೂಡ ಆಗಿದೆ. ಸದ್ಯ ಕೊಪ್ಪಳದಲ್ಲಿ ವಿಚಿತ್ರ ಸಂಪ್ರದಾಯವೊಂದನ್ನು ನಡೆಸಿದ್ದಾರೆ.

ಮಳೆಯಾಗದ ಹಿನ್ನೆಲೆಯಲ್ಲಿ ಮಣ್ಣಲ್ಲಿ ಹೂತಿರುವ ಶವವನ್ನು ಹೊರತೆಗೆದು ಸುಟ್ಟು ಹಾಕಿರುವ ಘಟನೆ ಕೊಪ್ಪಳ ತಾಲೂಕಿನ ದನಕನದೊಡ್ಡಿಯಲ್ಲಿ ನಡೆದಿದೆ. ಕಳೆದ ಮೂರು ದಿನಗಳ ಹಿಂದೆ ನಡೆದಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಗ್ರಾಮದ ಮರ್ದಾನಬಿ ಎಂಬ 80 ವರ್ಷದ ವೃದ್ಧೆ ಮೃತಪಟ್ಟಿದ್ದರು. ವೃದ್ದೆಗೆ ಬಿಳಿ ತೊನ್ನು ರೋಗವಿತ್ತು.

The villagers pulled out the body buried in the mud as it was not raining

ಬಿಳಿ ತೊನ್ನು ರೋಗ ಇರುವವರು ಸತ್ತಾಗ ಅವರನ್ನು ಮಣ್ಣಲ್ಲಿ ಹೂತಿಟ್ಟರೆ ಮಳೆಯಾಗುವುದಿಲ್ಲ ಎಂಬ ನಂಬಿಕೆ ಇದೆ. ವೃದ್ದೆಯನ್ನು ಹೂತಿರುವ ಕಾರಣಕ್ಕೆ ಗ್ರಾಮದಲ್ಲಿ ಮಳೆಯಾಗುತ್ತಿಲ್ಲ ಎಂಬ ಮೂಢನಂಬಿಕೆ ಗ್ರಾಮಸ್ಥರಲ್ಲಿದೆ. ಈ ಮೂಢನಂಬಿಕೆಗೆ ಜೋತು ಬಿದ್ದು, ಕಳೆದ ಮೂರು ದಿನಗಳ ಹಿಂದೆ ಶವವನ್ನು ಹೊರತೆಗೆದು ಸುಟ್ಟು ಹಾಕಿದ್ದಾರೆ. ಬಳಿಕ ಬೂದಿಯನ್ನು ಗೋರಿ ಮಾಡಿದ್ದಾರೆ.

ಇನ್ನು ಇದು ಧಾರ್ಮಿಕ ಹಾಗೂ ಕಾನೂನಾತ್ಮಕವಾಗಿ ವಿರೋಧವಾಗಿದೆ. ಈ ಘಟನೆಯ ಬಗ್ಗೆ ಪೊಲೀಸರು ಕ್ರಮ ಕೈಗೊಳ್ಳಬೇಕು. ಘಟನೆಯಲ್ಲಿ ಭಾಗಿಯಾದವರ ಮೇಲೆ ಕ್ರಮ ಕೈಗೊಳ್ಳುವಂತೆ ಮುಸ್ಲಿಂ ಜನಾಂಗದವರು ಮನವಿ ನೀಡಿದ್ದಾರೆ. ಘಟನೆ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಲು ಗ್ರಾಮಸ್ಥರು ಹಾಗೂ ಕುಟುಂಬದವರು ನಿರಾಕರಿಸಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version