ಬೆಂಗಳೂರು: ರಾಜ್ಯದ ಕರಾವಳಿಯ ಎಲ್ಲ ಜಿಲ್ಲೆಗಳು ಹಾಗೂ ಉತ್ತರ ಒಳನಾಡು ಹಾಗೂ ದಕ್ಷಿಣ ಒಳನಾಡಿನ ಅನೇಕ ಜಿಲ್ಲೆಗಳಲ್ಲಿ ಮುಂದಿನ 2-3 ದಿನ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಕಲಬುರಗಿಯಲ್ಲಿ ತಾಪಮಾನ ಒಂದೇ ದಿನ 6 ಡಿಗ್ರಿಗೆ ಕುಸಿದಿದೆ. ಈ ಬಗ್ಗೆ ರಾಜ್ಯ ಹವಾಮಾನ ಇಲಾಖೆ (Rain News) ಮುನ್ಸೂಚನೆ ನೀಡಿದೆ.
ಉತ್ತರ ಒಳನಾಡಿನ ಧಾರವಾಡ, ಹಾವೇರಿ, ಗದಗ, ಬೆಳಗಾವಿ, ಬಾಗಲಕೋಟೆ ಹಾಗೂ ದಕ್ಷಿಣ ಒಳನಾಡಿನ ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಮಳೆಯಾಗಲಿದೆ.
24 ತಾಸು ಅವಧಿಯಲ್ಲಿ ಬೆಳಗಾವಿಯ ಗೋಕಾಕ್‌ನಲ್ಲಿ 5 ಸೆಂ.ಮೀ ಮಳೆಯಾಗಿದೆ. ಉಳಿದಂತೆ ಬೆಳಗಾವಿಯ ಬೈಲಹೊಂಗಲ, ಬೀದರ್ ಔರಾದ್‌ನಲ್ಲಿ 4 ಸೆಂ.ಮೀ, ಉತ್ತರ ಕನ್ನಡದ ಮುಂಡಗೊಂಡ, ಗದಗದ ನರಗುಂದ, ಬೆಳಗಾವಿ ನಗರ, ಕಲಬುರಗಿಯ ವಿಜೂರಿ, ಬೀದರ್‌ನ ಹುಮನಾಬಾದ್, ಚಿಕ್ಕಮಗಳೂರಿನ ಶೃಂಗೇರಿಯಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ ಎಂದು ವರದಿಯಾಗಿದೆ