ಬೆಂಗಳೂರು: ಕೂಲ್ ಸಿಟಿ (Cool city Bengaluru) ಎಂದು ಕರೆಸಿಕೊಳ್ಳುವ ಬೆಂಗಳೂರು ಹಾಟ್ ಸಿಟಿಯಾಗಿ (Bengaluru temperature) ಬದಲಾಗುತ್ತಿದೆ. ಬೆಂಗಳೂರಿನಲ್ಲೀಗ ದಾಖಲೆಯಲ್ಲಿ ಹೆಚ್ಚುತ್ತಿರುವ ತಾಪಮಾನದಿಂದ (Temperature Warning) ಸಿಟಿ ಜನರು ತತ್ತರಿಸಿ ಹೋಗಿದ್ದಾರೆ. ಬಿಸಿಲನಾಡು ಎಂದು ಕರೆಸಿಕೊಳ್ಳುವ ಉತ್ತರ ಒಳನಾಡಿನ ಜಿಲ್ಲೆಗಳಿಗೂ ರಾಜಧಾನಿ ಬೆಂಗಳೂರು ಅಕ್ಷರಶಃ ಸೆಡ್ಡು ಹೊಡೆಯುತ್ತಿದೆ. ಮಾರ್ಚ್ ಬಳಿಕ ಏಪ್ರಿಲ್ ಮೊದಲ ವಾರದಲ್ಲೇ ಬೆಂಗಳೂರಿನಲ್ಲಿ ದಾಖಲೆಯ ಮಟ್ಟದಲ್ಲಿ ಗರಿಷ್ಠ ತಾಪಮಾನವು (Bengaluru heatwave) ದಾಖಲಾಗಿದೆ. ಬಿಸಿಲ ಬೇಗೆಗೆ ತೇವಾಂಶದ ಕೊರತೆಯಿಂದಾಗಿ ಒಣ ಹವೆ (Bengaluru heat) ಮುಂದುವರಿದಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಹಗಲಿನಲ್ಲಿ ತಾಪಮಾನ 38 ಡಿಗ್ರಿ ಸೆಲ್ಸಿಯಸ್‌ಗೆ ಏರಿಕೆ ಕಂಡಿದೆ.
ಕಳೆದ ಕೆಲವು ದಿನಗಳಿಂದ ಬೆಂಗಳೂರು ನಗರದಲ್ಲಿ ಹಗಲಿನ ತಾಪಮಾನವು 38 ಡಿಗ್ರಿ ಸೆಲ್ಸಿಯಸ್‌ಗೆ ಏರಿದೆ. ನಿನ್ನೆ ಶನಿವಾರ ಬೆಂಗಳೂರಲ್ಲಿ ಗರಿಷ್ಠ ತಾಪಮಾನವು 37.6 ಡಿ.ಸೆ ದಾಖಲಾಗಿತ್ತು. ಇದು ಕಳೆದ ಏಪ್ರಿಲ್ 2009 ಮತ್ತು 2016ರಲ್ಲಿ ದಾಖಲಾದ ಗರಿಷ್ಠ ತಾಪಮಾನ 39.2 ಡಿಗ್ರಿ ಸೆಲ್ಸಿಯಸ್‌ಗೆ ಹತ್ತಿರದಲ್ಲಿತ್ತು. ಪ್ರಸ್ತುತ ಬೆಂಗಳೂರಿನಲ್ಲಿ ಏಪ್ರಿಲ್ ತಿಂಗಳಲ್ಲಿ ಸಾಮಾನ್ಯಕ್ಕಿಂತ ಮೂರು ಡಿಗ್ರಿ ಸೆಲ್ಸಿಯಸ್ ಹೆಚ್ಚಾಗುವ ಸಾಧ್ಯತೆ ಇದೆ.
ಹವಾಮಾನ ತಜ್ಞರು ಹೇಳುವ ಪ್ರಕಾರ, ಕಳೆದ ವರ್ಷ ಈಶಾನ್ಯ ಮಾನ್ಸೂನ್‌ನಿಂದ ಬೆಂಗಳೂರಿನಲ್ಲಿ ಕಡಿಮೆ ಮಳೆಯಾಗಿದೆ. ಹವಾಮಾನ ವೈಪರಿತ್ಯದಿಂದಾಗಿ ಚಳಿಗಾಲದಲ್ಲಿ ಸುರಿಯಬೇಕಿದ್ದ ಮಳೆಯು ಬಂದಿಲ್ಲ ಎಂದಿದ್ದಾರೆ. ಬೆಂಗಳೂರಲ್ಲಿ ನಿನ್ನೆ ಕನಿಷ್ಠ ಉಷ್ಣಾಂಶವು 23 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ದೆಹಲಿ ಮತ್ತು ಗುರುಗ್ರಾಮ್‌ಗಿಂತಲೂ ಮೀರಿದೆ.
ಇದನ್ನೂ ಓದಿ: Elephants Death: ಉರಿ ಬಿಸಿಲು ತಾಳಲಾರದೆ, ನೀರು ಸಿಗದೆ ನಿತ್ರಾಣಗೊಂಡಿದ್ದ ಕಾಡಾನೆಗಳ ಸಾವು
ರಾತ್ರಿ ಬೆಚ್ಚನೆಯ ವಾತಾವರಣ
ಬೆಂಗಳೂರು ಸೇರಿದಂತೆ ಉತ್ತರ ಒಳನಾಡಿನ ಹಲವು ಭಾಗಗಳಲ್ಲಿ ರಾತ್ರಿ ಹೊತ್ತು ಬೆಚ್ಚಗಿನ ವಾತವಾರಣವಿದೆ. ಬಿಸಿ ಗಾಳಿಯೂ ಬೀಸುತ್ತಿದ್ದು, ಧಗೆಯು ಹೆಚ್ಚಾಗುತ್ತಿದೆ. ಕೂಲ್ ಸಿಟಿ ಎಂದು ಹೆಸರುವಾಸಿಯಾದ ಬೆಂಗಳೂರಿನಲ್ಲಿ ಹೀಟ್ ವೇವ್ ಜತೆಗೆ ನೀರಿನ ಬಿಕ್ಕಟ್ಟು ಸೇರಿ ಜನರು ಡಬಲ್ ಹೊಡೆತ ಅನುಭವಿಸುತ್ತಿದ್ದಾರೆ.
ಏಪ್ರಿಲ್ 3ನೇ ವಾರದಿಂದ ಮಳೆ ನಿರೀಕ್ಷೆ
ಐಟಿ ಹಬ್ ಆಗಿರುವ ಬೆಂಗಳೂರಿನಲ್ಲಿ ಏಪ್ರಿಲ್ 3ನೇ ವಾರದಿಂದ ಬೇಸಿಗೆ ಮಳೆಯಾಗುವ ನಿರೀಕ್ಷೆಇದೆ. ಇದು ಬಿಸಿಲಿನ ತಾಪವು ಕಡಿಮೆ ಮಾಡುವ ಸಾಧ್ಯತೆ ಇದೆ. ಅಲ್ಲಿವರೆಗೂ ಜನರು ಬಿಸಿಲಿನ ತಾಪದಲ್ಲಿ ಒದ್ದಾಡುವಂತಾಗಿದೆ.
ಮಧ್ಯಾಹ್ನದ ಚುನಾವಣಾ ಪ್ರಚಾರದಿಂದ ದೂರ ಉಳಿದ ಕಾರ್ಯಕರ್ತರು
ಬಿಸಿಲಿನ ಧಗೆಗೆ ಲೋಕಸಭಾ ಚುನಾವಣಾ ಪ್ರಚಾರವು ತಣ್ಣಗಾಗಿದೆ. ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನವು 37ರಿಂದ38 ಡಿ.ಸೆ ದಾಖಲಾಗಿದೆ. ಈ ಬಿಸಿಲಿಗೆ ಕಂಗಲಾಗಿರುವ ಕಾರ್ಯಕರ್ತರು ಚುನಾವಣಾ ಪ್ರಚಾರದಿಂದ ದೂರ ಉಳಿದಿದ್ದಾರೆ ಎನ್ನಲಾಗಿದೆ. ಪ್ರಚಾರಕ್ಕೆ ಬರುವವರಿಗೆ 2 ಸಾವಿರ ರೂ. ಹಣ ಹಾಗೂ ಊಟ, ಪೆಟ್ರೋಲ್ ಖರ್ಚು ಕೊಡುತ್ತೇವೆ ಎಂದು ಬರುತ್ತಿಲ್ಲವಂತೆ. ಹೀಗಾಗಿ ಬೆಳಗ್ಗೆ 11ಗಂಟೆಗೆ ನಡೆಯುತ್ತಿದ್ದ ಪ್ರಚಾರ ಕಾರ್ಯವೆಲ್ಲ ಸಂಜೆ ಹೊತ್ತಿಗೆ ಶಿಫ್ಟ್ ಆಗಿದೆ. ಸಂಜೆ 6 ರಿಂದ ರಾತ್ರಿ 9ರವರಗೆ ಅಭ್ಯರ್ಥಿಗಳಿಂದ ಮತಬೇಟೆ ನಡೆಯುತ್ತಿದೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ