Edited By: Pragati Bhandari

ಶುಂಠಿ  ಇದರ ಬ್ಯಾಕ್ಟೀರಿಯ ನಿರೋಧಕ ಗುಣಗಳು ಗಂಟಲು ನೋವನ್ನು ಉಪಶಮನ ಮಾಡುತ್ತವೆ. ಇದನ್ನು ಚಹಾ ಅಥವಾ ಕಷಾಯ ಮಾಡಿ ಕುಡಿಯುವುದು ಸೂಕ್ತ        

 ಕಾಳು ಮೆಣಸು  ಗಂಟಲಿನ ತೊಂದರೆಗಳಿಗೆ ಇದರ ಕಷಾಯ ಸೂಕ್ತ. ಬೆಲ್ಲದೊಂದಿಗೆ ಕಾಳು ಮೆಣಸು ಜಗಿಯುವವರೂ ಇದ್ದಾರೆ.

ಬೆಳ್ಳುಳ್ಳಿ ಗಂಟಲಿನ ತೊಂದರೆಗಳಿಗೆ ಬೆಳ್ಳುಳ್ಳಿ ರಾಮಬಾಣದಂತೆ. ಇದರ ಕಷಾಯ ಒಳ್ಳೆಯದು ಅಥವಾ ಹಸಿಯಾಗಿ ತಿನ್ನಲಾದರೆ ಇನ್ನೂ ಒಳ್ಳೆಯದು

ಬಿಸಿ ನೀರ ಆವಿ  ಶೀತ, ಕೆಮ್ಮು, ಗಂಟಲಿನ ಯಾವುದೇ ತೊಂದರೆಗಳಿಗೆ ಇದು ಬಹಳ ಉಪಯುಕ್ತ

ಅರಿಶಿನ ಹಾಲು ಹವಾಮಾನ ಬದಲಾವಣೆಯ ಕಿರಿಕಿರಿಗಳನ್ನು ಶಮನ ಮಾಡುವುದಷ್ಟೇ ಅಲ್ಲ, ಪ್ರತಿರೋಧಕ ಶಕ್ತಿಯನ್ನೂ ಹೆಚ್ಚಿಸುತ್ತದೆ

ಅತಿಮಧುರ ಜೇಷ್ಠಮಧು ಎಂದೂ ಕರೆಯಲಾಗುವ ಇದರ ಬೇರನ್ನು ಸುಮ್ಮನೆ ಬಾಯಲ್ಲಿಟ್ಟು ಚೀಪಿದರೂ ಸಾಕು. ಕಷಾಯವೂ ಆದೀತು

 ಮೆಂತೆ ಇದರ ಕಷಾಯದ ಸೇವನೆಯಿಂದ ಗಂಟಲಿನ ಕಿರಿಕಿರಿ ಕಡಿಮೆಯಾಗುತ್ತದೆ