ವಾತಾವರಣದ ವ್ಯತ್ಯಾಸಗಳಿಗೆ ದೇಹ ಸ್ಪಂದಿಸಿದಾಗ ನೋವು ಹೆಚ್ಚುವುದು ಸ್ವಾಭಾವಿಕ 

ಮಳೆ, ಚಳಿಯಲ್ಲಿ ವಾಕಿಂಗ್‌ ಅಥವಾ ವ್ಯಾಯಾಮ ತಪ್ಪಿದರೆ ಆರ್ಥರೈಟಿಸ್‌ನಂಥ ನೋವುಗಳು ಹೆಚ್ಚುತ್ತವೆ

ದೇಹದ ಚಟುವಟಿಕೆ ಕಡಿಮೆಯಾದಂತೆ ಸ್ನಾಯುಗಳು ದುರ್ಬಲಗೊಂಡು, ಕೀಲುಗಳು ಬಿಗಿಯುತ್ತವೆ

ಹೊರಗೆ ಮಳೆ ಸುರಿಯುತ್ತಿದ್ದರೆ ಒಳಗೆ ವ್ಯಾಯಾಮ ತಪ್ಪಿಸಬೇಡಿ

 ದೇಹದ ತೂಕ  ಹೆಚ್ಚದಂತೆ ಎಚ್ಚರವಹಿಸಿ

ದೇಹವನ್ನೂ ಆದಷ್ಟು ಬೆಚ್ಚಗಿರಿಸಿ, ಮಳೆಯಲ್ಲಿ ನೆನೆದರೆ ಬೇಗನೇ ವಸ್ತ್ರ ಬದಲಾಯಿಸಿ

ಬಿಸಿನೀರಿನ ಶಾಖ ಅಥವಾ ಉಪ್ಪಿನ ಶಾಖಗಳು ನೋವು-ಊತ ಶಮನ ಮಾಡುತ್ತವೆ

ಈಗಾಗಲೇ ತೆಗೆದುಕೊಳ್ಳುತ್ತಿರುವ ಚಿಕಿತ್ಸೆಯನ್ನು ಮುಂದುವರಿಸಿ