Edited By: Pragati Bhandari

Edited By: Pragati Bhandari

ವಿಟಮಿನ್‌ ಬಿ12 (vitamin B12) ನಮ್ಮ ಜೀರ್ಣಾಂಗಗಳನ್ನು ದಾಟಿ ಹೊರಬೀಳದೆ, ಕರಗಿ ನಮ್ಮ ರಕ್ತವನ್ನು ಸೇರುತ್ತದೆ. ಈ ಜೀವಸತ್ವವನ್ನು ನಮ್ಮ ದೇಹ ವರ್ಷಾನುಗಟ್ಟಲೆ ಶೇಖರಿಸಿ ಇಟ್ಟುಕೊಳ್ಳಬಲ್ಲದು. ಹಾಗೂ ಹೆಚ್ಚಾದರೆ ಮೂತ್ರಪಿಂಡಗಳ ಮೂಲಕ ಹೊರಹೋಗುತ್ತದೆ.

ಯಾಕೆ ಬೇಕು?:  ನಮ್ಮ ಮೆದುಳು ಮತ್ತು ನರಮಂಡಲ ಸಮರ್ಪಕವಾಗಿ ಕಾರ್ಯನಿರ್ವಹಿಸಲು, ಯೋಚಿಸುವ ಸಾಮರ್ಥ್ಯ ಉಳಿಸಿಕೊಳ್ಳಲು, ಕೆಂಪು ರಕ್ತ ಕಣಗಳ ಉತ್ಪತ್ತಿಗೆ, ವಂಶವಾಹಿಗಳ ಸೂಕ್ತ ನಿರ್ವಹಣೆಗೆ, ಕಣ್ಣುಗಳ ರಕ್ಷಣೆಗೆ ಮತ್ತು ದೇಹಕ್ಕೆ ಬೇಕಾಗುವ ಶಕ್ತಿ ಉತ್ಪಾದನೆಗೆ- ಇಂಥ ಕೆಲವು ಅತಿ ಮುಖ್ಯ ಕೆಲಸಗಳಿಗೆ ಬಿ12 ಜೀವಸತ್ವ ನಮಗೆ ಬೇಕು.

ಕೊರತೆಯಾದರೆ?  ಸಾಕಷ್ಟು ಕೆಂಪು ರಕ್ತಕಣಗಳು ಉತ್ಪತ್ತಿಯಾಗದಿದ್ದರೆ ರಕ್ತದಲ್ಲಿ ಆಮ್ಲಜನಕದ ಮಟ್ಟವೂ ಕಡಿಮೆಯಾಗುತ್ತದೆ. ಶಿಶುಗಳಲ್ಲಿ ತೂಕ ಏರದಿರುವುದು, ಕಿರಿಕಿರಿ, ವಾಂತಿ, ಬೆಳವಣಿಗೆಯ ಸಮಸ್ಯೆಗಳು ತೋರಬಹುದು. ವಯಸ್ಕರಲ್ಲಿ ಸುಸ್ತು, ಆಯಾಸ, ತಲೆನೋವು, ಖಿನ್ನತೆ, ತೂಕ ಇಳಿಕೆ, ಜೀರ್ಣಾಂಗದ ಸಮಸ್ಯೆಗಳು, ಮುಟ್ಟಿನ ತೊಂದರೆಗಳಾಗುತ್ತವೆ.

ಹೇಗೆ ದೊರೆಯುತ್ತದೆ?  ಇದು ಹೆಚ್ಚಾಗಿ ದೊರೆಯುವುದು ಪ್ರಾಣಿಜನ್ಯ ಆಹಾರಗಳಿಂದ. ಪ್ರಾಣಿಗಳ ಯಕೃತ್ತಿನಲ್ಲಿ ಈ ಅಂಶ ವಿಫುಲವಾಗಿ ದೊರೆಯುತ್ತದೆ. ಹಲವು ಜಾತಿಯ ಮೀನುಗಳು (ಭೂತಾಯಿ, ಗೆದರೆ ಇತ್ಯಾದಿ), ಬೆಳಚು ಮುಂತಾದ ಸಾಗರೋತ್ಪನ್ನಗಳಲ್ಲಿ ಇವು ತೀರಾ ಸಾಂದ್ರವಾಗಿರುತ್ತವೆ. ಚಿಕನ್‌ ಮತ್ತು ಮೊಟ್ಟೆಯಿಂದಲೂ ಈ ಸತ್ವ ದೊರೆಯುತ್ತದೆ. 

ಇನ್ನೆಲ್ಲಿ ದೊರೆಯುತ್ತದೆ?  ಕೆಲವು ಬಗೆಯ ಯೀಸ್ಟ್‌ಗಳಿಂದ ದೊರೆಯಬಹುದು, ಹಾಲು, ಮೊಸರು ಮತ್ತು ಚೀಸ್‌ನಿಂದಲೂ ಬಿ12 ಜೀವಸತ್ವ ದೇಹ ಸೇರುತ್ತದೆ. ಬಹಳಷ್ಟು ಸೀರಿಯಲ್‌ ಮತ್ತು ಜ್ಯೂಸ್‌ಗಳಲ್ಲಿ ಬಿ12 ಜೀವಸತ್ವವನ್ನು ಪೂರಕವಾಗಿ ಸೇರಿಸಲಾಗುತ್ತದೆ.

ಕೊರತೆ ಹೇಗೆ ಉಂಟಾಗುತ್ತದೆ? ಸಸ್ಯಾಹಾರಿಗಳಿಗೆ ಇದರ ಕೊರತೆ ಎದುರಾಗುತ್ತದೆ. ಬಾಳೆಹಣ್ಣು, ಸೇಬು, ಕಿತ್ತಳೆ ಮತ್ತು ಬ್ಲೂಬೆರಿಗಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ದೊರೆಯುತ್ತದೆ. ಅಣಬೆಗಳು ಮತ್ತು ಬೀಟ್‌ರೂಟ್‌ನಲ್ಲಿ ಅಲ್ಪ ಪ್ರಮಾಣದಲ್ಲಿ ದೊರೆಯುತ್ತದೆ.

ಗರ್ಭಿಣಿಯರು, ಹಾಲುಣಿಸುವ ತಾಯಂದಿರಿಗೆ ಬಿ12 ಜೀವಸತ್ವವನ್ನು ಹೀರಿಕೊಳ್ಳಲಾರದಂಥ ಸಮಸ್ಯೆ ಇದ್ದವರಿಗೆ ವೈದ್ಯರ ಸಲಹೆ ಪಡೆದು ಪೂರಕ ಮಾತ್ರೆಗಳನ್ನು ನೀಡಲಾಗುತ್ತದೆ.

more info click here

Vitamin B12 ಕೆಂಪು ರಕ್ತಕಣಗಳನ್ನು ಹೆಚ್ಚಿಸುವ ವಿಟಮಿನ್‌ ಬಿ12, ಇದು ಆರೋಗ್ಯದ ಜೀವಸತ್ವ

ವೇಗನ್‌ಗಳಿಗೆ ಬಿ12 ಜೀವಸತ್ವ  ಹೇಗೆ ದೊರೆಯುತ್ತದೆ? ಬಾಳೆ, ಸೇಬು, ಕಿತ್ತಲೆ, ಕೆಲವು ಅಣಬೆಗಳು, ಬೀಟ್‌ರೂಟ್‌ ಮುಂತಾದ ಸಸ್ಯಾದಿಗಳಲ್ಲಿ ಬಿ12 ಜೀವಸತ್ವವಿದೆ. ವೇಗನ್‌ಗಳಿಗಾಗಿ ತಯಾರಿಸುವ ಸಸ್ಯಗಳ ಹಾಲಿನಲ್ಲಿ ಸಾಮಾನ್ಯವಾಗಿ ಬಿ12 ಜೀವಸತ್ವವನ್ನು ಸೇರಿಸಲಾಗುತ್ತದೆ.