Vitamin B12: ಕೆಂಪು ರಕ್ತಕಣಗಳನ್ನು ಹೆಚ್ಚಿಸುವ ವಿಟಮಿನ್‌ ಬಿ12, ಇದು ಆರೋಗ್ಯದ ಜೀವಸತ್ವ - Vistara News

ಆರೋಗ್ಯ

Vitamin B12: ಕೆಂಪು ರಕ್ತಕಣಗಳನ್ನು ಹೆಚ್ಚಿಸುವ ವಿಟಮಿನ್‌ ಬಿ12, ಇದು ಆರೋಗ್ಯದ ಜೀವಸತ್ವ

ವಿಟಮಿನ್‌ ಬಿ12 (vitamin B12) ನಮ್ಮ ಜೀರ್ಣಾಂಗಗಳನ್ನು ದಾಟಿ ಹೊರಬೀಳದೆ, ಕರಗಿ ನಮ್ಮ ರಕ್ತವನ್ನು ಸೇರುತ್ತದೆ. ಈ ಜೀವಸತ್ವವನ್ನು ನಮ್ಮ ದೇಹ ವರ್ಷಾನುಗಟ್ಟಲೆ ಶೇಖರಿಸಿ ಇಟ್ಟುಕೊಳ್ಳಬಲ್ಲದು. ಹಾಗೂ ಹೆಚ್ಚಾದರೆ ಮೂತ್ರಪಿಂಡಗಳ ಮೂಲಕ ಹೊರಹೋಗುತ್ತದೆ.

VISTARANEWS.COM


on

Vitamin B12
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಕೆಲವು ಸೂಕ್ಷ್ಮ ಪೋಷಕಾಂಶಗಳು ನಮ್ಮ ದೇಹ ಸೇರುವುದು ನಮಗೆ ತಿಳಿಯುವುದೇ ಅವುಗಳ ಕೊರತೆಯಾದಾಗ! ಉದಾಹರಣೆಗೆ, ಬಿ12 ಜೀವಸತ್ವವನ್ನೇ (vitamin B12) ತೆಗೆದುಕೊಳ್ಳಿ. ಅದು ಯಾಕೆ ಬೇಕು, ಯಾವುದರಿಂದ ನಮಗೆ ದೊರೆಯುತ್ತದೆ ಇಂಥವೆಲ್ಲಾ ಬಹುಪಾಲು ತಿಳಿದಿರುವುದಿಲ್ಲ. ಈ ಬಗ್ಗೆ ನಾವು ಕೇಳುವುದೇ ಈ ಸತ್ವದ ಕೊರತೆಯೆಂದು ವೈದ್ಯರು ಮಾತ್ರೆ ಚೀಟಿ ಬರೆದಾಗ. ಏನಿದು ಮತ್ತು ನಮಗೆ ಯಾಕಾಗಿ ಬೇಕು? ಅದಿಲ್ಲದಿದ್ದರೆ ಏನಾಗುತ್ತದೆ? ಯಾವೆಲ್ಲಾ ಆಹಾರಗಳಿಂದ ದೊರೆಯುತ್ತದೆ ಎಂಬ ಬಗ್ಗೆ ಒಂದಿಷ್ಟು ಮಾಹಿತಿಯಿದು.

ಬಿ12 ಎಂಬುದು ಕರಗಬಲ್ಲ ವಿಟಮಿನ್‌ಗಳಲ್ಲಿ (vitamin B12) ಒಂದು. ಅಂದರೆ ಇದು ನಮ್ಮ ಜೀರ್ಣಾಂಗಗಳನ್ನು ದಾಟಿ ಹೊರಬೀಳದೆ, ಕರಗಿ ನಮ್ಮ ರಕ್ತವನ್ನು ಸೇರುತ್ತದೆ. ಈ ಜೀವಸತ್ವವನ್ನು ನಮ್ಮ ದೇಹ ವರ್ಷಾನುಗಟ್ಟಲೆ ಶೇಖರಿಸಿ ಇಟ್ಟುಕೊಳ್ಳಬಲ್ಲದು. ಹಾಗೂ ಹೆಚ್ಚಾದರೆ ಮೂತ್ರಪಿಂಡಗಳ ಮೂಲಕ ಹೊರಹೋಗುತ್ತದೆ. ಇದು ಸಾಮಾನ್ಯವಾಗಿ ಪ್ರಾಣಿಜನ್ಯ ಆಹಾರದಿಂದ ದೊರೆಯುವಂಥದ್ದು. ಸಸ್ಯಜನ್ಯ ಆಹಾರಗಳ ಮೂಲಕ ಇದರ ಲಭ್ಯತೆ ಅತೀ ಕಡಿಮೆ. ಆದರೆ ಇದನ್ನು ಕೃತಕವಾಗಿ ಸಿದ್ಧ ಮಾಡಬಹುದಾದ್ದರಿಂದ, ಪೂರಕಗಳ ಮೂಲಕ ದೇಹಕ್ಕೆ ನೀಡಬಹುದು.

Vitamin B12 ಯಾಕೆ ಬೇಕು?

ನಮ್ಮ ಮೆದುಳು ಮತ್ತು ನರಮಂಡಲ ಸಮರ್ಪಕವಾಗಿ ಕಾರ್ಯನಿರ್ವಹಿಸಲು, ಯೋಚಿಸುವ ಸಾಮರ್ಥ್ಯ ಉಳಿಸಿಕೊಳ್ಳಲು, ಕೆಂಪು ರಕ್ತ ಕಣಗಳ ಉತ್ಪತ್ತಿಗೆ, ವಂಶವಾಹಿಗಳ ಸೂಕ್ತ ನಿರ್ವಹಣೆಗೆ, ಕಣ್ಣುಗಳ ರಕ್ಷಣೆಗೆ ಮತ್ತು ದೇಹಕ್ಕೆ ಬೇಕಾಗುವ ಶಕ್ತಿ ಉತ್ಪಾದನೆಗೆ- ಇಂಥ ಕೆಲವು ಅತಿ ಮುಖ್ಯ ಕೆಲಸಗಳಿಗೆ ಬಿ12 ಜೀವಸತ್ವ ನಮಗೆ ಬೇಕು.

Vitamin B12 ಕೊರತೆಯಾದರೆ…?

ನಮ್ಮ ರಕ್ತದ ಗುಣಮಟ್ಟ ಸಮರ್ಪಕವಾಗಿ ಇರದು. ಅಂದರೆ ಸಾಕಷ್ಟು ಕೆಂಪು ರಕ್ತಕಣಗಳು ಉತ್ಪತ್ತಿಯಾಗದಿದ್ದರೆ ರಕ್ತದಲ್ಲಿ ಆಮ್ಲಜನಕದ ಮಟ್ಟವೂ ಕಡಿಮೆಯಾಗುತ್ತದೆ. ಒಬ್ಬೊಬ್ಬರಿಗೆ ಒಂದೊಂದು ರೀತಿಯಲ್ಲಿ ಈ ಸಮಸ್ಯೆಯ ಲಕ್ಷಣಗಳು ಕಾಣಿಸಿಕೊಳ್ಳಬಹುದು. ಶಿಶುಗಳಲ್ಲಿ ತೂಕ ಏರದಿರುವುದು, ಕಿರಿಕಿರಿ, ವಾಂತಿ, ಬೆಳವಣಿಗೆಯ ಸಮಸ್ಯೆಗಳು ತೋರಬಹುದು. ವಯಸ್ಕರಲ್ಲಿ ಸುಸ್ತು, ಆಯಾಸ, ತಲೆನೋವು, ಖಿನ್ನತೆ, ತೂಕ ಇಳಿಕೆ, ಜೀರ್ಣಾಂಗದ ಸಮಸ್ಯೆಗಳು, ಮುಟ್ಟಿನ ತೊಂದರೆಗಳು- ಹೀಗೆ ಹಲವು ರೀತಿಯಲ್ಲಿ ಬಿ12 ಜೀವಸತ್ವದ ಕೊರತೆಯ ಲಕ್ಷಣಗಳು ಗೋಚರಿಸಬಹುದು.

Vitamin B12 ಎಷ್ಟು ಬೇಕು?

ವರ್ಷದೊಳಗಿನ ಶಿಶುಗಳಿಗೆ ದಿನಕ್ಕೆ ೦.೫ ಮೈಕ್ರೊ ಗ್ರಾಂ ಸಾಕಾಗುತ್ತದೆ. 1-3 ವರ್ಷದ ಮಕ್ಕಳಿಗೆ 0.9 ಮೈಕ್ರೊ ಗ್ರಾಂ, 4-8 ವರ್ಷದ ಮಕ್ಕಳಿಗೆ 1.2 ಮೈಕ್ರೊ ಗ್ರಾಂ, 9-13ರ ಮಕ್ಕಳಿಗೆ 1.8 ಮೈಕ್ರೊ ಗ್ರಾಂ, 14ರ ನಂತರ ಎಲ್ಲರಿಗೂ 2.4 ಮೈಕ್ರೊ ಗ್ರಾಂ, ಗರ್ಭಿಣಿ ಮತ್ತು ಹಾಲುಣಿಸುವ ತಾಯಂದಿರಿಗೆ ಕ್ರಮವಾಗಿ 2.6 ಮತ್ತು 2.8 ಮೈಕ್ರೊ ಗ್ರಾಂಗಳಷ್ಟು ವಿಟಮಿನ್‌ ಬಿ12 ಬೇಕಾಗುತ್ತದೆ. ಅರೆ! ಉಳಿದೆಲ್ಲಾ ಸತ್ವಗಳನ್ನು ನಾವು ಗ್ರಾಂಗಳ ಲೆಕ್ಕದಲ್ಲಿ ಸೇವಿಸುವಾಗ ಇದು ಬರೀ ಮೈಕ್ರೊ ಗ್ರಾಂ ಲೆಕ್ಕದಲ್ಲಿ ಎಂದು ಹುಬ್ಬೇರಿಸಿದರೆ… ದೇಹಕ್ಕೆ ಬೇಕಾಗಿದ್ದು ಇಷ್ಟೇ ಪ್ರಮಾಣ. ಆದರೆ ಇದೂ ಕೆಲವೊಮ್ಮೆ ಕೊರತೆಯಾಗುತ್ತದಲ್ಲ!

Vitamin B12 ಹೇಗೆ ದೊರೆಯುತ್ತದೆ?

ಇದನ್ನು ನಮ್ಮ ಆಹಾರದ ಮೂಲಕವೇ ನಾವು ಪೂರೈಕೆ ಮಾಡಬೇಕು. ಇದು ಹೆಚ್ಚಾಗಿ ದೊರೆಯುವುದು ಪ್ರಾಣಿಜನ್ಯ ಆಹಾರಗಳಿಂದ. ಸಸ್ಯಜನ್ಯ ಆಹಾರಗಳಲ್ಲಿ ಇದರ ಲಭ್ಯತೆ ತೀರಾ ಕಡಿಮೆ. ಪ್ರಾಣಿಗಳ ಯಕೃತ್ತಿನಲ್ಲಿ ಈ ಅಂಶ ವಿಫುಲವಾಗಿ ದೊರೆಯುತ್ತದೆ. ಹಲವು ಜಾತಿಯ ಮೀನುಗಳು (ಭೂತಾಯಿ, ಗೆದರೆ ಇತ್ಯಾದಿ), ಬೆಳಚು ಮುಂತಾದ ಸಾಗರೋತ್ಪನ್ನಗಳಲ್ಲಿ ಇವು ತೀರಾ ಸಾಂದ್ರವಾಗಿರುತ್ತವೆ. ಚಿಕನ್‌ ಮತ್ತು ಮೊಟ್ಟೆಯಿಂದಲೂ ಈ ಸತ್ವ ದೊರೆಯುತ್ತದೆ. ಕೆಲವು ಬಗೆಯ ಯೀಸ್ಟ್‌ಗಳಿಂದ ಇದು ದೊರೆಯಬಹುದು, ಹಾಲು, ಮೊಸರು ಮತ್ತು ಚೀಸ್‌ನಿಂದಲೂ ಬಿ12 ಜೀವಸತ್ವ ದೇಹ ಸೇರುತ್ತದೆ. ಬಹಳಷ್ಟು ಸೀರಿಯಲ್‌ ಮತ್ತು ಜ್ಯೂಸ್‌ಗಳಲ್ಲಿ ಬಿ12 ಜೀವಸತ್ವವನ್ನು ಪೂರಕವಾಗಿ ಸೇರಿಸಲಾಗುತ್ತದೆ.

ಈ ಸುದ್ದಿಯನ್ನೂ ಓದಿ: Monsoon Health Tips: ಮಳೆಗಾಲದಲ್ಲಿ ಹರಡುವ ಕಾಯಿಲೆಗಳಿಂದ ದೂರವಿರಲು ಸುಲಭ ಸೂತ್ರಗಳು!

Vitamin B12 ಕೊರತೆ ಹೇಗೆ ಉಂಟಾಗುತ್ತದೆ?

ಸಾಮಾನ್ಯವಾಗಿ ವೇಗನ್‌ಗಳು ಮತ್ತು ಸಸ್ಯಾಹಾರಿಗಳಿಗೆ ಇದರ ಕೊರತೆ ಎದುರಾಗುತ್ತದೆ. ಕಾರಣ, ವಿಟಮಿನ್‌ ಬಿ12 ಸಾಂದ್ರವಾಗಿ ದೊರೆಯುವುದು ಪ್ರಾಣಿಜನ್ಯ ಆಹಾರಗಳಿಂದ. ಸಸ್ಯಾಹಾರಿಗಳಿಗೆ ಇದರ ಲಭ್ಯತೆ ಕಡಿಮೆಯೇ. ಬಾಳೆಹಣ್ಣು, ಸೇಬು, ಕಿತ್ತಳೆ ಮತ್ತು ಬ್ಲೂಬೆರಿಗಳಲ್ಲಿ ಅತ್ಯಲ್ಪ ಪ್ರಮಾಣದಲ್ಲಿ ದೊರೆಯುತ್ತದೆ. ತರಕಾರಿಗಳ ಪಟ್ಟಿ ನೋಡಿದರೆ ಕೆಲವು ಬಗೆಯ ಅಣಬೆಗಳು ಮತ್ತು ಬೀಟ್‌ರೂಟ್‌ನಲ್ಲಿ ಅಲ್ಪ ಪ್ರಮಾಣದಲ್ಲಿ ವಿಟಮಿನ್‌ ಬಿ12 ದೊರೆಯುತ್ತದೆ. ಹಾಗಾಗಿ ಗರ್ಭಿಣಿಯರು ಮತ್ತು ಹಾಲುಣಿಸುವ ತಾಯಂದಿರಿಗೆ, ಬಿ12 ಜೀವಸತ್ವವನ್ನು ಹೀರಿಕೊಳ್ಳಲಾರದಂಥ ಸಮಸ್ಯೆ ಇದ್ದವರಿಗೆ ಪೂರಕ ಮಾತ್ರೆಗಳ ಮುಖಾಂತರ ಇದನ್ನು ನೀಡಲಾಗುತ್ತದೆ.

FAQ

ಸಸ್ಯಾಹಾರಿಗಳಿಗೆ ವಿಟಮಿನ್‌ ಬಿ12 ಹೇಗೆ ದೊರೆಯುತ್ತದೆ?

ಹಾಲು, ಮೊಸರು, ಚೀಸ್‌ಗಳು ಸಸ್ಯಾಹಾರಿಗಳಿಗೆ ಮುಖ್ಯವಾದ ವಿಟಮಿನ್‌ ಬಿ12 ಆಹಾರ. ಮೊಟ್ಟೆ ತಿನ್ನುವವರಿಗೆ ಅದರಿಂದಲೂ ದೊರೆಯುತ್ತದೆ. ಪೂರಕಗಳು ಅಗತ್ಯವಾದರೆ ವೈದ್ಯರನ್ನು ಕೇಳಬೇಕು.

ವೇಗನ್‌ಗಳಿಗೆ ಬಿ12 ಜೀವಸತ್ವ ಹೇಗೆ ದೊರೆಯುತ್ತದೆ?

ಬಾಳೆ, ಸೇಬು, ಕಿತ್ತಲೆ, ಕೆಲವು ಅಣಬೆಗಳು, ಬೀಟ್‌ರೂಟ್‌ ಮುಂತಾದ ಸಸ್ಯಾದಿಗಳಲ್ಲಿ ಬಿ12 ಜೀವಸತ್ವವಿದೆ. ವೇಗನ್‌ಗಳಿಗಾಗಿ ತಯಾರಿಸುವ ಸಸ್ಯಗಳ ಹಾಲಿನಲ್ಲಿ ಸಾಮಾನ್ಯವಾಗಿ ಬಿ12 ಜೀವಸತ್ವವನ್ನು ಸೇರಿಸಲಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

Latest

ದೇಶಾದ್ಯಂತ ಇಂದು ಮೆಡಿಕಲ್‌ ಸ್ಟೋರ್‌ ಬಂದ್‌

VISTARANEWS.COM


on

ಇ-ಫಾರ್ಮಸಿ ಹಾಗೂ ಆನ್‌ಲೈನ್‌ ಮೂಲಕ ಔಷಧ ಮಾರಾಟ ನಿಲ್ಲಿಸುವಂತೆ ಆಗ್ರಹಿಸಿ ಕರ್ನಾಟಕ ಸೇರಿದಂತೆ ದೇಶಾದ್ಯಂತ ಇಂದು ಮೆಡಿಕಲ್‌ ಸ್ಟೋರ್‌ಗಳು ಬಂದ್‌ ಆಗಿವೆ. ಅಖಿಲ ಭಾರತ ಔಷಧ ವ್ಯಾಪಾರಿಗಳ ಸಂಘದ ಕರೆ ಮೇರೆಗೆ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲಾ ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಮೆಡಿಕಲ್‌ ಸ್ಟೋರ್‌ ಮಾಲೀಕರು ಪ್ರತಿಭಟನೆ ನಡೆಸುತ್ತಿದ್ದಾರೆ.

ಆನ್‌ಲೈನ್‌ ಔಷಧ ವ್ಯಾಪಾರಕ್ಕೆ ಕಟ್ಟುನಿಟ್ಟಾದ ನಿಯಮ ಜಾರಿಗೊಳಿಸಬೇಕು, ಕಾರ್ಪೊರೇಟ್‌ ಸಂಸ್ಥೆಗಳ ಭಾರಿ ರಿಯಾಯಿತಿ ದರ ಸಮರಕ್ಕೆ ಬ್ರೇಕ್‌ ಹಾಕಬೇಕು ಹಾಗೂ ಎಲ್ಲಾ ವ್ಯಾಪಾರಿಗಳಿಗೆ ಸಮಾನ ಮುಕ್ತ ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಬೇಕು ಎಂಬ ಬೇಡಿಕೆಗಳನ್ನು ಅಖಿಲ ಭಾರತ ಕೆಮಿಸ್ಟ್‌ ಮತ್ತು ಡ್ರಗ್ಗಿಸ್ಟ್‌ ಸಂಘ ಮುಂದಿಟ್ಟಿದೆ.

ಈ ಬಂದ್‌ನಿಂದ ಅನೇಕ ಕಡೆಗಳಲ್ಲಿ ಔಷಧ ಖರೀದಿಗೆ ಸಾರ್ವಜನಿಕರು ತೊಂದರೆ ಅನುಭವಿಸುತ್ತಿದ್ದಾರೆ. ಆದರೆ ತುರ್ತು ಸೇವೆಗಳಿಗಾಗಿ ಕೆಲವು ಮೆಡಿಕಲ್‌ ಸ್ಟೋರ್‌ಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ.

Continue Reading

Latest

ನಾಳೆ ದೇಶಾದ್ಯಂತ ಮೆಡಿಕಲ್ ಶಾಪ್‌ ಬಂದ್‌

VISTARANEWS.COM


on

ಆನ್‌ಲೈನ್‌ನಲ್ಲಿ ಔಷಧ ಮಾರಾಟವನ್ನು ವಿರೋಧಿಸಿ ನಾಳೆ ದೇಶಾದ್ಯಂತ ಮೆಡಿಕಲ್ ಶಾಪ್‌ಗಳ ಬಂದ್‌ಗೆ ಕರೆ ನೀಡಲಾಗಿದೆ. ದೇಶದಾದ್ಯಂತ ಸುಮಾರು 9 ಲಕ್ಷ ಔಷಧ ಅಂಗಡಿಗಳು ಪ್ರತಿಭಟನೆಯಲ್ಲಿ ಭಾಗವಹಿಸುವ ಸಾಧ್ಯತೆ ಇದೆ.
ಕರ್ನಾಟಕದಲ್ಲೂ ಸುಮಾರು 26 ಸಾವಿರಕ್ಕೂ ಹೆಚ್ಚು ಮೆಡಿಕಲ್ ಶಾಪ್‌ಗಳು ಬಂದ್ ಆಗುವ ಸಾಧ್ಯತೆ ಇದ್ದು, ಗ್ರಾಹಕರು ಅಗತ್ಯ ಔಷಧಿಗಳನ್ನು ಮುಂಚಿತವಾಗಿ ಖರೀದಿಸಿಕೊಳ್ಳುವಂತೆ ಸಂಘಟನೆಗಳು ಮನವಿ ಮಾಡಿವೆ.

ಇ-ಫಾರ್ಮಸಿ ವೇದಿಕೆಗಳ ಮೂಲಕ ಭಾರಿ ರಿಯಾಯಿತಿಯಲ್ಲಿ ಔಷಧ ಮಾರಾಟವಾಗುತ್ತಿರುವುದು ಸಣ್ಣ ಹಾಗೂ ಮಧ್ಯಮ ಮಟ್ಟದ ಮೆಡಿಕಲ್ ಅಂಗಡಿಗಳಿಗೆ ಹೊಡೆತ ನೀಡುತ್ತಿದೆ ಎಂದು ವ್ಯಾಪಾರಿಗಳು ಆರೋಪಿಸಿದ್ದಾರೆ. ಜೊತೆಗೆ ಆನ್‌ಲೈನ್ ಮೂಲಕ ನಿಯಂತ್ರಣವಿಲ್ಲದೆ ಔಷಧ ವಿತರಣೆ ನಡೆಯುತ್ತಿರುವುದರಿಂದ ರೋಗಿಗಳ ಆರೋಗ್ಯಕ್ಕೂ ಅಪಾಯ ಉಂಟಾಗಬಹುದು ಎಂದು ಎಚ್ಚರಿಸಿದ್ದಾರೆ.
ಆನ್‌ಲೈನ್ ಮೂಲಕ ಔಷಧ ಖರೀದಿ ವ್ಯವಸ್ಥೆಯನ್ನು ನಿಯಂತ್ರಿಸುವುದು ಹಾಗೂ ಇ-ಫಾರ್ಮಸಿ ಕಂಪನಿಗಳ ವಿರುದ್ಧ ಕಠಿಣ ನಿಯಮ ಜಾರಿಗೊಳಿಸುವಂತೆ ಕೇಂದ್ರ ಸರ್ಕಾರಕ್ಕೆ ಆಗ್ರಹಿಸಲಾಗಿದೆ.

Continue Reading

ಪ್ರಮುಖ ಸುದ್ದಿ

ಹಡಗಿನಲ್ಲಿ ಹ್ಯಾಂಟವೈರಸ್‌ ದಾಂಗುಡಿ, ಕೊರೋನಾವನ್ನೂ ಮೀರಿಸುತ್ತಾ ಈ ಪಿಡುಗು?

VISTARANEWS.COM


on

ನವದೆಹಲಿ: ಜಗತ್ತು ಈಗ ಮತ್ತೊಂದು ಮಾರಕ ರೋಗದ ಆತಂಕದಲ್ಲಿದೆ. ಈ ಆತಂಕಕ್ಕೆ ಕಾರಣವಾಗಿದ್ದು ಹ್ಯಾಂಟವೈರಸ್‌. ಇದನ್ನು ಕೊರೋನಾ ವೈರಸ್‌ ಸಹೋದರಿ ಎಂದೇ ಹೇಳಲಾಗುತ್ತಿದೆ.
ಡಚ್‌ ಪ್ರವಾಸಿ ಹಡಗು ಎಂವಿ ಹೊಂಡಿಯಸ್‌ನಲ್ಲಿ ಹ್ಯಾಂಟವೈರಸ್‌ ಹರಡಿರುವ ಸುದ್ದಿ ಜಗತ್ತನ್ನೇ ಆತಂಕಕ್ಕೆ ದೂಡಿದೆ. ೧೪೯ ಜನರಿದ್ದ ಈ ಹಡಗಿನಲ್ಲಿ ಮೂವರು ಹ್ಯಾಂಟವೈರಸ್‌ಗೆ ಬಲಿಯಾಗಿದ್ದಾರೆ. ಈ ಹಡಗಿನಲ್ಲಿ ಇಬ್ಬರು ಭಾರತೀಯರೂ ಪ್ರವಾಸ ಮಾಡುತಿದ್ದರು ಎಂದು ಕೆಲವು ವರದಿಗಳು ಹೇಳಿವೆ. ಸದ್ಯ ಈ ಹಡಗು ಆಫ್ರಿಕಾದ ಬಂದರಿನಲ್ಲಿ ಲಂಗರು ಹಾಕಿದೆ. ಅಸ್ವಸ್ಥ ಪ್ರಯಾಣಿರನ್ನು ಚಿಕಿತ್ಸೆಗೆ ರವಾನಿಸಲಾಗಿದೆ.
ಹ್ಯಾಂಟವೈರಸ್ ಅಂದರೇನು?
ಹ್ಯಾಂಟವೈರಸ್ ಒಂದು ಅಪರೂಪದ ಆದರೆ ಅಪಾಯಕಾರಿ ವೈರಸ್. ಇದು ಇಲಿಗಳ ಮೂತ್ರ, ಜೊಲ್ಲು ಅಥವಾ ಮಲದ ಮೂಲಕ ಹರಡುತ್ತದೆ. ಹ್ಯಾಂಟ ವೈರಸ್ ಗಾಳಿಯಲ್ಲಿ ಹರಡೋದಿಲ್ಲ. ಮನುಷ್ಯನಿಂದ ಮನುಷ್ಯನಿಗೆ ಹರಡುವ ಸಾಂಕ್ರಾಮಿಕವೂ ಇದಲ್ಲ. ಇಲಿ ಹಾಗೂ ಹೆಗ್ಗಣದ ಜಾತಿಯ ‘ದಂಶಕ’ಗಳಲ್ಲಿ ಈ ವೈರಸ್‌ ಕಾಣಿಸಿಕೊಳ್ಳುತ್ತೆ. ಈ ದಂಶಕಗಳ ಮಲ, ಮೂತ್ರ ಅಥವಾ ಜೊಲ್ಲು ರಸ ಮಾನವನ ಸಂಪರ್ಕಕ್ಕೆ ಬಂದಾಗ ಮಾನವನಿಗೂ ಹ್ಯಾಂಟ ವೈರಸ್ ಹರಡುತ್ತೆ. ಜ್ವರ, ತಲೆನೋವು, ಹೊಟ್ಟೆ ನೋವು, ಮೈ-ಕೈ ನೋವು, ವಾಂತಿ, ಭೇದಿ ಇತ್ಯಾದಿ ಈ ರೋಗದ ಲಕ್ಷಣಗಳು.

Continue Reading

ಬೆಂಗಳೂರು

Bengaluru News : 5 ವರ್ಷದಿಂದ ವ್ಯಕ್ತಿಯ ಹೊಟ್ಟೆಯೊಳಗಿತ್ತು ಮೀನಿನ ಮೂಳೆ!

ಐದು ವರ್ಷದಿಂದ ಹೊಟ್ಟೆಯಲ್ಲೇ ಇದ್ದ 2 ಸೆಂ.ಮೀ ಉದ್ದದ ಮೀನಿನ ಮೂಳೆಯನ್ನು ಯಶಸ್ವಿಯಾಗಿ ಹೊರತೆಗೆದ ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ

VISTARANEWS.COM


on

Doctors at Fortis Hospital remove fish bone from man's stomach for 5 years

ಬೆಂಗಳೂರು: ಕಳೆದ ಐದು ವರ್ಷದಿಂದ ಒಂದಿಲ್ಲೊಂದು ರೀತಿಯ ಹೊಟ್ಟೆ ನೋವಿನಿಂದ ಬಳಲುತ್ತಿದ್ದ 61 ವರ್ಷದ ವ್ಯಕ್ತಿಯ ಹೊಟ್ಟೆಯಿಂದ 2 ಸೆಂ.ಮೀ ಉದ್ದದ ಮೀನಿನ ಮೂಳೆಯನ್ನು ಬೆಂಗಳೂರಿನ (Bengaluru News) ಫೋರ್ಟಿಸ್‌ ಆಸ್ಪತ್ರೆ ವೈದ್ಯರ ತಂಡ ಯಶಸ್ವಿಯಾಗಿ ಹೊರತೆಗೆದಿದೆ.

ಈ ಕುರಿತು ಮಾತನಾಡಿದ ನಾಗರಭಾವಿ ಫೋರ್ಟಿಸ್ ಆಸ್ಪತ್ರೆಯ ಜೀರ್ಣಾಂಗವ್ಯೂಹದ ಶಸ್ತ್ರಚಿಕಿತ್ಸಾ ಸಮಾಲೋಚಕ ಡಾ. ಪ್ರಣವ್ ಹೊನ್ನಾವರ ಶ್ರೀನಿವಾಸನ್, 61 ವರ್ಷದ ರೋಗಿ ರಾಜೇಶ್ (ಹೆಸರು ಬದಲಾಯಿಸಲಾಗಿದೆ) ಎಂಬುವವರು ಐದು ವರ್ಷದ ಹಿಂದೆ ಮೀನು ಸೇವಿಸಿದ್ದರು. ಆಗ ಗಂಟಲಿನಲ್ಲಿ ಮೀನಿನ ಮೂಳೆ ಸಿಲುಕಿ, ಅದು ಹೊಟ್ಟೆ ಸೇರಿತ್ತು. ಬಳಿಕ ಅವರು ಖಾಸಗಿ ಆಸ್ಪತ್ರೆಯೊಂದರಲ್ಲಿ ಎಂಡೋಸ್ಕೋಪಿಕ್‌ ಕಾರ್ಯವಿಧಾನಕ್ಕೆ ಒಳಗಾಗುವ ಮೂಲಕ ಒಂದು ಮೂಳೆ ತೆಗೆಸಿಕೊಂಡಿದ್ದರು. ಮತ್ತೊಂದು ಮೂಳೆ ಇರುವುದು ಅವರಿಗೆ ತಿಳಿದಿರಲಿಲ್ಲ.

ಸಂಪೂರ್ಣ ಮೂಳೆ ತೆಗೆಯದ ಕಾರಣ, 2 ಸೆಂ.ಮೀ ಉದ್ದದ ಮೀನಿನ ಮೂಳೆ ಹೊಟ್ಟೆಯಲ್ಲೇ ಉಳಿದಿತ್ತು. ಇದು ಅವರ ಗಮನಕ್ಕೂ ಬಂದಿಲ್ಲ. ಇದಾಗಿ ಐದು ವರ್ಷ ಕಳೆದಿದೆ. ಐದು ವರ್ಷಗಳಿಂದಲೂ ಒಂದಲ್ಲ ಒಂದು ರೀತಿಯ ಹೊಟ್ಟೆನೋವು, ವಿವಿಧ ರೀತಿಯ ಅಸ್ವಸ್ಥತೆ ಅನುಭವಿಸುತ್ತಿದ್ದರು. ಆಸ್ಪತ್ರೆಗಳಿಗೆ ತೆರಳಿ ಪರೀಕ್ಷೆಗೆ ಒಳಗಾಗಿದ್ದರೂ ಈ ಮೂಳೆ ಕಾಣಿಸಿಕೊಂಡಿಲ್ಲ. ಈ ಮೂಳೆಯಿಂದ ಅವರ ಆರೋಗ್ಯ ಕ್ಷೀಣಿಸುತ್ತಾ ಹೊಟ್ಟೆ ನೋವು ಹೆಚ್ಚುತ್ತಲೇ ಹೋಗಿದೆ.

Doctors at Fortis Hospital remove fish bone from man's stomach for 5 years

ನಂತರ ಅವರು ಫೋರ್ಟಿಸ್‌ ಆಸ್ಪತ್ರೆಗೆ ದಾಖಲಾದರು. ಅವರ ಸಂಪೂರ್ಣ ತಪಾಸಣೆಯ ಬಳಿಕ ಓಮೆಂಟಮ್‌ನಲ್ಲಿ (ಕಿಬ್ಬೊಟ್ಟೆಯ ಅಂಗಗಳ ಸುತ್ತಲಿನ ಅಂಗಾಂಶದ ಪದರ) ಈ ಮೂಳೆ ಇರುವುದು ಕಂಡು ಬಂದಿತು. ಐದು ವರ್ಷಗಳ ಹಿಂದಿನಿಂದಲೂ ಈ ಮೂಳೆ ಒಂದಿಲ್ಲೊಂದು ರೀತಿಯಲ್ಲಿ ನೋವು ನೀಡುತ್ತಿರುವುದು ರೋಗಿಗೂ ಆಗಲೇ ತಿಳಿದಿದ್ದು. ಅವರಿಗೆ ಲ್ಯಾಪರೊಸ್ಕೋಪಿಕ್ ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ಮೂಳೆಯನ್ನು ತೆಗೆದು ಹಾಕಲಾಗಿದ್ದು, ರೋಗಿಯು ಚೇತರಿಸಿಕೊಳ್ಳುತ್ತಿದ್ದಾರೆ ಎಂದರು. ಈ ಶಸ್ತ್ರಚಿಕಿತ್ಸೆ ವೇಳೆ ಅವರಿಗೆ ಪಿತ್ತಕೋಶದ ಕಾಯಿಲೆ ಹಾಗೂ ಹೊಕ್ಕುಳಿನ ಅಂಡವಾಯು ಸಮಸ್ಯೆ ಇರುವುದು ತಿಳಿದು ಬಂತು. ಈ ಸಮಸ್ಯೆಗಳಿಗೂ ಚಿಕಿತ್ಸೆ ನೀಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

Continue Reading
Advertisement
ಬಿಡದಿ ಟೌನ್‌ಶಿಪ್‌
Latest2 days ago

ಬಿಡದಿ ಟೌನ್‌ಶಿಪ್‌ ರೈತರ ವಿರೋಧ : ಜೂನ್ 22ರಂದು ‘ಭೈರಮಂಗಲ ಚಲೋ’

ಸಿಎಂ ಡಿಕೆಶಿ
Latest2 days ago

ಸರ್ಕಾರಿ ಕಚೇರಿಯಲ್ಲಿ ಲಂಚ ಕೇಳಿದ್ರೆ ಹುಷಾರ್‌: ಅಧಿಕಾರಿಗಳಿಗೆ ಸಿಎಂ ಡಿಕೆಶಿ ಖಡಕ್ ಸೂಚನೆ

ನೀಟ್ 2026 ಪರೀಕ್ಷೆ
Latest3 days ago

ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: NEET ಪರೀಕ್ಷೆಗೆ ಹೆಚ್ಚುವರಿ ಸಮಯ

ಜೋಸೆಫ್‌ ವಿಜಯ್‌
Latest3 days ago

ಎಂಜಿಆರ್‌, ಜಯಲಲಿತಾ ಹಾದಿಯಲ್ಲಿ ಜೋಸೆಫ್ ವಿಜಯ್‌: ಇಂದು ಕೊಲ್ಲೂರು ಮೂಕಾಂಬಿಕೆ ದರ್ಶನ

ರಾಜ್ಯಸಭೆ
Latest4 days ago

ರಾಜ್ಯಸಭೆ ಚುನಾವಣೆ: ಮಲ್ಲಿಕಾರ್ಜುನ ಖರ್ಗೆ ಸೇರಿ ನಾಲ್ವರು ಅಭ್ಯರ್ಥಿಗಳು ಅವಿರೋಧ ಆಯ್ಕೆ

ನರೇಂದ್ರ ಮೋದಿ
Latest4 days ago

ಪ್ರಧಾನಿ ನರೇಂದ್ರ ಮೋದಿಗೆ ಕಿಚ್ಚನ ಸೆಲ್ಯೂಟ್‌ : 12 ವರ್ಷಗಳ ನರೇಂದ್ರ ಮೋದಿ ಐತಿಹಾಸಿಕ ಆಡಳಿತಕ್ಕೆ ಶ್ಲಾಘನೆ

ರಾಜ್ಯಸಭೆ ಟಿಕೆಟ್‌
ಪ್ರಮುಖ ಸುದ್ದಿ5 days ago

ರಾಜ್ಯಸಭೆ ಟಿಕೆಟ್‌ ವಿಚಾರಕ್ಕೆ ಹೆಚ್‌ಡಿಡಿ ಸ್ಪಷ್ಟನೆ : ಎನ್‌ಡಿಎ ಜತೆ ಬಾಂಧವ್ಯ ಮುಂದುವರಿಯಲಿದೆ

ನರೇಂದ್ರ ಮೋದಿ
Latest5 days ago

ನೆಹರೂ ದಾಖಲೆ ಮುರಿದ ನರೇಂದ್ರ ಮೋದಿ: ಭಾರತದ ದೀರ್ಘಾವಧಿಯ ಚುನಾಯಿತ ಪ್ರಧಾನಿಯಾಗಿ ಹೊಸ ಇತಿಹಾಸ

ಆರೆಂಜ್ ಅಲರ್ಟ್‌
Latest5 days ago

ಮುಂಗಾರು ಅಬ್ಬರ ಹೆಚ್ಚಳ: ಇಂದು 11 ಜಿಲ್ಲೆಗಳಿಗೆ ಆರೆಂಜ್ ಅಲರ್ಟ್‌, 2 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

ಮೀನಾಕ್ಷಿ ನಟರಾಜನ್
Latest5 days ago

ರಾಜ್ಯಸಭೆ ಚುನಾವಣೆಗೂ ಮುನ್ನವೇ ಕಾಂಗ್ರೆಸ್‌ಗೆ ಬಿಗ್‌ ಶಾಕ್‌ : ಮೀನಾಕ್ಷಿ ನಟರಾಜನ್ ನಾಮಪತ್ರ ತಿರಸ್ಕೃತ – ʻಕೈ‌‌‌‌ʼ ಶಾಸಕರ ರೆಸಾರ್ಟ್‌ ರಾಜಕೀಯ ಕ್ಯಾನ್ಸಲ್

galipata neetu
ಕಿರುತೆರೆ3 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ3 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌