Edited By: Pragati Bhandari

ಅವುಗಳನ್ನು ಹುರಿದು ತಿನ್ನಬಹುದು. ನೆನೆಸಿ ಮೊಳಕೆ ಬರಿಸಿ ತಿನ್ನುವವರೂ ಇದ್ದಾರೆ. 

ಪ್ರೊಟೀನ್‌, ಉತ್ತಮ ಕೊಬ್ಬು ಮತ್ತು ನಾನಾ ರೀತಿಯ ಸೂಕ್ಷ್ಮ ಪೋಷಕಾಂಶಗಳು ಇದರಲ್ಲಿದ್ದು, ದೇಹ ಸ್ವಾಸ್ಥ್ಯಕ್ಕೆ ಒಳ್ಳೆಯದು. 

 ಇದರಲ್ಲಿರುವ ಮೆಗ್ನೀಶಿಯಂ ರಕ್ತದೊತ್ತಡ ಕಡಿಮೆ ಮಾಡಲು ಉಪಯುಕ್ತವಾಗಿದ್ದು, ಹೃದಯದ ಆರೋಗ್ಯಕ್ಕಿದು ಬೇಕಾದದ್ದು. 

ಜಿಂಕ್‌ ಸತ್ವದಿಂದ ಶರೀರದ ಪ್ರತಿರೋಧಕ ಶಕ್ತಿಯು ಪ್ರಬಲವಾಗಿ, ಸೋಂಕುಗಳ ವಿರುದ್ಧ ಹೋರಾಡಲು ಸಾಧ್ಯ. 

ಇದರಲ್ಲಿರುವ ಟ್ರಿಪ್ಟೋಫ್ಯಾನ್‌ ಎಂಬ ಅಮೈನೊ ಆಮ್ಲಗಳು ಕಣ್ತುಂಬಾ ನಿದ್ದೆ ತರಿಸಲು ಸಹಾಯ ಮಾಡುತ್ತವೆ.

ನಾರಿನಂಶ ಹೇರಳವಾಗಿರುವುದರಿಂದ ಜೀರ್ಣಾಂಗಗಳ ಸಾಮರ್ಥ್ಯವನ್ನು ಹೆಚ್ಚಿಸಿ,  ತೂಕ ಇಳಿಸಲು ನೆರವಾಗುತ್ತದೆ.

ಮೆದುಳು, ಕಣ್ಣು, ಚರ್ಮದ ರಕ್ಷಣೆಗೆ ಅಗತ್ಯವಾದ ಒಮೆಗಾ 3 ಕೊಬ್ಬಿನಾಮ್ಲ ಈ ಬೀಜಗಳಲ್ಲಿದೆ.

ಇದರಲ್ಲಿರುವ ಫೈಟೊಈಸ್ಟ್ರೊಜೆನ್‌ಗಳು ರಜೋನಿವೃತ್ತಿಯ ಲಕ್ಷಣಗಳನ್ನು ತಗ್ಗಿಸುತ್ತವೆ.