ಹೊಟ್ಟೆಯ ಫ್ಲೂಗೆ ವೈದ್ಯರು ಹೇಳಿದ ಔಷಧಗಳ ಜೊತೆಗೆ ಚೆನ್ನಾಗಿ ನೀರು ಕುಡಿಯಿರಿ

ಹೊಟ್ಟೆ ನೋವು ಕಡಿಮೆ ಆಗುವವರೆಗೆ ಮಸಾಲೆ, ಎಣ್ಣೆ ರಹಿತವಾದ ಸೌಮ್ಯ ಆಹಾರವನ್ನೇ ಸೇವಿಸಿ

ಕುದಿಸಿದ ನೀರು ಕುಡಿಯಿರಿ ಮತ್ತು ಆಹಾರವನ್ನು ಬಿಸಿಯಾಗಿರುವಾಗಲೇ ಸೇವಿಸಿ 

ಹಾಲು, ಕಾಫಿ, ಚಹಾ, ಸೋಡಾಗಳನ್ನು ದೂರ  ಇರಿಸಿ. ಇವುಗಳಿಂದ  ಸಮಸ್ಯೆ ಹೆಚ್ಚುತ್ತದೆ 

ಮೊಸಂಬಿ, ದಾಳಿಂಬೆ ಮುಂತಾದ ಹಣ್ಣಿನ ರಸಗಳನ್ನು ಸಕ್ಕರೆ ಹಾಕದೆ ಸೇವಿಸಿ. ಹೆಚ್ಚುವರಿ ಸಕ್ಕರೆಯೂ ತೊಂದರೆ ಕೊಡುತ್ತದೆ 

ಮೊಸರು, ಮಜ್ಜಿಗೆಗಳನ್ನು ಧಾರಾಳವಾಗಿ ಸೇವಿಸಿ. ಹೊಟ್ಟೆಯ ಆರೋಗ್ಯ ರಕ್ಷಣೆಗೆ ಪ್ರೊಬಯಾಟಿಕ್‌ ಬೇಕು

ಕೈಗಳನ್ನು ತೊಳೆದುಕೊಂಡು, ವೈಯಕ್ತಿಕ ಶುಚಿತ್ವ ಕಾಪಾಡಿಕೊಳ್ಳಿ 

ಪೂರ್ತಿ ಗುಣವಾಗುವವರೆಗೆ ದೈಹಿಕ ಶ್ರಮ ವಹಿಸದೆ, ವಿಶ್ರಾಂತಿ ತೆಗೆದುಕೊಳ್ಳಿ