Site icon Vistara News

Women’s Day 2023: ರಜೆ ಮುಗಿದ ಮೇಲೆ ಸ್ವಲ್ಪ ಹೆಚ್ಚು ಕೆಲಸ ಮಾಡಿಸಬಹುದು

Can work a little more after vacation

#image_title

ಸರಳ ಪ್ರಕಾಶ್, ಬ್ಯಾಂಕ್ ಉದ್ಯೋಗಿ

ನನಗೆ ಮುಟ್ಟು ನಿಂತು ದಶಕವೇ ಕಳೆದಿದ್ದರೂ ಆ ದಿನಗಳ ನೆನಪು ಇನ್ನೂ ಮಾಸಿಲ್ಲ. ಮೊದಮೊದಲ ಎರಡು ದಿನಗಳು ವಿಪರೀತ ಕಾಲು ಸೆಳೆತ ಮತ್ತು ನೋವಿರುತ್ತಿತ್ತು. ಮಲಗಿಯೇ ಇರಬೇಕೇನಿಸುತ್ತಿತ್ತು. ಆ ದಿನಗಳಲ್ಲಿ ಕಾಲೇಜು, ಕೆಲಸ ತಪ್ಪಿಸುತ್ತಿದ್ದೆ. ನಂತರ ಕ್ಯಾಚ್ ಅಪ್ ಮಾಡಿಕೊಂಡು ನಿಭಾಯಿಸುತ್ತಿದ್ದೆ.

ಈಗ ಹೆಚ್ಚು ಜನಕ್ಕೆ ಮುಟ್ಟಿನ ದಿನಗಳ ಬಗ್ಗೆ ಅರಿವಿದೆ ಮತ್ತು ತಕ್ಕ ಮಟ್ಟಿಗೆ ನೋವು ನಿವಾರಣೆಗೆ ವೈದ್ಯಕೀಯ ಸಹಾಯವೂ ಇದೆ, ಆ ದಿನಗಳ ನಿರ್ವಹಣೆ ಕೂಡ ಹೆಚ್ಚು ಸುಗಮವಾಗಿದೆ. ಆದರೂ ಕೆಲವರಿಗೆ ತೀರಾ ನೋವು ಬಳಲಿಕೆ ಆಯಾಸ ಇದ್ದೇ ಇದೆ.

ಕೇಸ್ ಟು ಕೇಸ್ ಬೇಸಿಸ್ ಮೇಲೆ ರಜಾ ಕೊಟ್ಟರೆ ಅಂತಹವರಿಗೆ ಅನುಕೂಲವಾಗಬಹುದು ಮತ್ತು ಈ ರಜೆ ಮುಗಿದ ಮೇಲೆ ಕೆಲಸವನ್ನ ಹೆಚ್ಚು ಸಮಯ ಕೊಟ್ಟು ಮುಗಿಸುವ ಮನೋಧರ್ಮವೂ ಇದ್ದರೆ ಈ ಸೌಲತ್ತಿನ ದುರುಪಯೋಗ ಆಗದಿರಬಹುದು. ಕೆಲಸದ ವಾತಾವರಣ, ಯಾವ ರೀತಿಯ ಕೆಲಸ, ಕೆಲಸದ ತುರ್ತು ಮುಂತಾದ ಅಂಶಗಳನ್ನೂ ಸಹ ಗಮನದಲ್ಲಿ ಇಟ್ಟುಕೊಂಡು ಲೀವ್ ಪಾಲಿಸಿ ಮಾಡಬೇಕಾಗತ್ತೆ. ಮ್ಯಾನೇಜರ್ ರೋಲ್ ನಲ್ಲಿ ಇರುವವರಿಗೆ ಇದೂ ಒಂದು ಚ್ಯಾಲೇಂಜ್ ಅನಿಸಬಹುದು. ಈ ರಜೆಯ ದುರುಪಯೋಗದ ತನಿಖೆ ಕೂಡ ಕಷ್ಟ.

Finally it depends on the individual to not misuse and the manager to trust and provide help when required. ರಜೆ ಕೊಡಬಹುದು – paid or unpaid depending on other factors.

Exit mobile version