ಡಾ. ಶಾಂತಾ ನಾಗರಾಜ್
ಪ್ರತಿ ಶಾಲೆ, ಕಾಲೇಜುಗಳಲ್ಲಿ ಹೆಣ್ಣುಮಕ್ಕಳಿಗೇ ಪ್ರತ್ಯೇಕವಾದ ಮತ್ತು ನೀರಿನ ಅನುಕೂಲವಿದ್ದು ಶುಚಿತ್ವವನ್ನು ಕಾಪಾಡುವ ಶೌಚಾಲಯದ ನಿರ್ವಹಣೆಯನ್ನು ಏರ್ಪಡಿಸುವ ಹೊಣೆಯನ್ನು ಪ್ರತಿವಿದ್ಯಾ ಸಂಸ್ಥೆ ಹೊತ್ತುಕೊಳ್ಳಬೇಕಲ್ಲವೇ?
ಪ್ರತಿ ಶಾಲೆಯಲ್ಲಿಯೂ ಒಬ್ಬರು ಆಪ್ತ ಸಮಾಲೋಚಕರಿರುವ ಅಗತ್ಯವನ್ನು ನಿಮ್ಹಾನ್ಸ್ ಹೇಳುತ್ತಲೇ ಬಂದಿದೆ. ಕೆಲವು ಖಾಸಗಿ ಶಾಲಾ ಕಾಲೇಜುಗಳಲ್ಲಿ ಶಿಕ್ಷಕರಿಗೇ ಇಂಥಾ ತರಬೇತಿ ಕೊಡಲಾಗಿದೆ. ಹೆಣ್ಣುಮಕ್ಕಳು ತಮ್ಮ ಋುತುಕಾಲದಲ್ಲಿ ಹೆಚ್ಚು ಹೆಚ್ಚು ಮಾನಸಿಕ ಒತ್ತಡವನ್ನು ಅನುಭವಿಸುತ್ತಾರೆ. ಅವರಿಗೆ ಸಾಂತ್ವನ ಹೇಳುವ ವ್ಯವಸ್ಥೆ ಶಾಲಾ ಕಾಲೇಜುಗಳಲ್ಲಿ ತಿಂಗಳಿಗೊಮ್ಮೆಯಾದರೂ ಸಿಗಬೇಕು.
ಈ ಎಲ್ಲಾ ಕಾರಣಗಳಿಂದ ಈ ಮೂರುದಿನ ರಜೆ ಯಾವ ರೀತಿಯಲ್ಲಿ ಜಾರಿಗೆ ತರಬೇಕೆನ್ನುವ ನಿರ್ಧಾರ ಸರಿಯಾದ ಕ್ರಮದಲ್ಲಿ ಮಾಡಿದರೆ ಮಕ್ಕಳ ದೃಷ್ಟಿಯಿಂದ ಒಳಿತು. ಇಲ್ಲದಿದ್ದರೆ ಈ ಅನುಕೂಲ ದುರುಪಯೋಗವೂ ಆಗಬಹುದು.