Site icon Vistara News

Women’s Day 2023 : ಯಾವ್ಯಾವುದಕ್ಕೋ ರಜೆ ಕೊಡ್ತಾರೆ, ಇದಕ್ಕೇಕೆ ರಜೆ ಕೊಡಬಾರದು?

If you give leave to anything, why not give leave to this?

#image_title

ಕೌಸ್ತುಭಾ ಭಾರತಿಪುರಂ, ವಕೀಲೆ

ತಿಂಗಳ ಮುಟ್ಟು (Menustrial Cycle) ಯೌವ್ವನದಲ್ಲಿರುವ ಹೆಣ್ಣಿನ ಸ್ವಾಸ್ಥ್ಯ ದ ಸಂಕೇತವಾಗಿರುತ್ತದೆ. ಒಬ್ಬ ಮಹಿಳೆ ತನ್ನ ಜೀವಿತಾವಧಿಯಲ್ಲಿ ಒಟ್ಟು 250ರಿಂದ 550 ಬಾರಿ ಮುಟ್ಟಾಗಬಹುದಂತೆ!

ಈ ತಿಂಗಳ ಮುಟ್ಟಿಗೆ ಮುಟ್ಟು ಎಂದೇ ಯಾಕೆ ಕರೆಯಲಾಗುತ್ತದೆ? ಮುಟ್ಟಿ ಹಿಂಸಿಸಬಾರದ ಸ್ಥಿತಿಯೊಂದಕ್ಕೆ Sarcastic ಆಗಿ ಹೇಳಿದ್ದು ಮುಟ್ಟಾ? ಹಿಂದಿನವರು ಹೆಣ್ಣಿಗೆ ಅಗತ್ಯವಾಗಿ ಬೇಕಿರುವ ಆ ದಿನಗಳ ವಿಶ್ರಾಂತಿಗಾಗಿ ಮಾಡಿದ ಕಟ್ಟುಪಾಡುಗಳು ಬರಬರುತ್ತಾ ಕ್ರೌರ್ಯಕ್ಕೆ ತಿರುಗಿದವಾ? ಆ ನೆಪದಲ್ಲಿ ಹೆಣ್ಣನ್ನು ಶೋಷಿಸುತ್ತಿದ್ದುದು ಅಮಾನವೀಯತೆಯೇ ಆದರೂ ಹೆಣ್ಣಿಗೆ ಆ ದಿನಗಳಲ್ಲಿ ತನ್ನಪಾಡಿಗೆ ತಾನು ಇರಬೇಕಾದ ಔಚಿತ್ಯ ಎಷ್ಟಿದೆ ಗೊತ್ತಾ?

ಇದನ್ನೂ ಓದಿ : WPL 2023: ಮಹಿಳಾ ದಿನಾಚರಣೆಯ ಪ್ರಯುಕ್ತ ಕ್ರಿಕೆಟ್​ ಪ್ರಿಯರಿಗೆ ಉಚಿತ ಟಿಕೆಟ್​ ಆಫರ್ ನೀಡಿದ ಬಿಸಿಸಿಐ

ಔಷಧಗಳಿಂದಲೋ ಮತ್ಯಾವುದೋ ವೈಪರೀತ್ಯವನ್ನು ಹೊರತುಪಡಿಸಿ ಯಾಕೆ ಈ Cycle ಸಾಮಾನ್ಯವಾಗಿ 28 ದಿನವೇ ಆಗಿರುತ್ತದೆ. ನಾವು ಸಣ್ಣ ವಯಸ್ಸಿನಲ್ಲಿದ್ದಾಗ ನೋಡುತ್ತಿದ್ದ ಸಾಮಾನ್ಯ ದೃಶ್ಯವದು! ಹಿಂದಿನ ಕಾಲದವರು ಮುಟ್ಟಾದವರನ್ನು ಸರಿಯಾಗಿ ಸಂಭಾಳಿಸಿಕೊಳ್ಳುತ್ತಿರಲಿಲ್ಲ. ಮನೆಯ ಹೊರಗೆ ನಾಯಿಗೂಡಿನಲ್ಲಿ ಮುಟ್ಟಾದ ಸೊಸೆಯನ್ನು ಮಲಗಿಸುತ್ತಿದ್ದ ದೃಶ್ಯ ಇನ್ನೂ ನನ್ನ ಕಣ್ಣಮುಂದೆಯೇ ಇದೆ. ರಜಸ್ವಲೆಯಾದ ಹೆಣ್ಣು ಮಕ್ಕಳನ್ನು ಯಾರಾದ್ರು ಹೀಗೆ ತುಚ್ಛವಾಗಿ ಕಂಡರೆ ಅವರು ಮನುಷ್ಯ ವೇಷದ ಕ್ರೂರಮೃಗಗಳೇ ಸರಿ! ಅವರಿಗೆ ನಮ್ಮ ಧಿಕ್ಕಾರವಿದ್ದೇ ಇರುತ್ತದೆ.
ಮುಟ್ಟಾದ ಹೆಣ್ಣು ಮೊದಲ ದಿನ ಹೊಲತಿಯಾಗಿರ್ತಾಳೆ, ಎರಡನೇ ದಿನ ಇನ್ನೊಂದು ಆಗಿರ್ತಾಳೆ ಅನ್ನೋದನ್ನೆಲ್ಲಾ ವೈಜ್ಞಾನಿಕವಾಗಿ ಒರೆಹಚ್ಚೋದಕ್ ಆಗದೇ ಇರೋವಂಥದ್ದು! ಇದಕ್ಕೂ ವಯಕ್ತಿಕವಾಗಿ ನನ್ನ ಪ್ರತಿರೋಧವಿದ್ದೇ ಇದೆ.
ಆದರೆ…
ಈ ತಿಂಗಳ ಮೂರು-ನಾಲ್ಕು ದಿನ ಋತುಸ್ರಾವದ ಸಮಯದಲ್ಲಿ ಅವಳು ಅನುಭವಿಸುವ ಮನೋ ದೈಹಿಕ ಏರಿಳಿತವಿದೆಯಲ್ಲಾ… ಕೆಲವರಿಗೆ ಮುಟ್ಟಾದಾಗ ಸಂಭವಿಸುವ ಹೊಟ್ಟೆನೋವು, ಮೈಗ್ರೇನ್‌, ಕೀಳರಿಮೆ, ದುಃಖ , ಆತಂಕ ಮುಂತಾದವುಗಳು. ಅದಕ್ಕಾಗಿ ಅವಳಿಗೊಂದು ವಿಶ್ರಾಂತಿ, ತನ್ನ ಪಾಡಿಗೆ ತಾನಿದ್ದು ಸುಧಾರಿಸಿಕೊಳ್ಳಲೊಂದು ಅವಕಾಶವನ್ನು ಕೊಡಬೇಕು ಅಲ್ವಾ?

ದೇಹದೊಳಗಿನ ಹಾರ್ಮೋನುಗಳ ಬದಲಾವಣೆ ಮುಟ್ಟಿಗೆ ಕಾರಣವಾಗುತ್ತದೆ. ಅಂಡಾಶಯಗಳು ಈಸ್ಟ್ರೋಜಿನ್ ಮತ್ತು ಪ್ರೊಜೆಸ್ಟಾರಾನ್ ಹಾರ್ಮೋನುಗಳನ್ನು ಈ ಸಮಯದಲ್ಲಿ ಬಿಡುಗಡೆ ಮಾಡುತ್ತದಲ್ಲಾ…ಇದರ ಸಹಾಯದಿಂದಲೇ ಹೆಣ್ಣಿನ ಗರ್ಭಾಶಯವು ತನ್ನೊಳಗಿನ ಒಳ ಪದರವನ್ನು ನಿರ್ಮಿಸಿಕೊಳ್ಳುವುದು.

ಇದನ್ನೂ ಓದಿ : International Womens Day 2023: ಮಹಿಳಾ ದಿನಾಚರಣೆ ಅಂಗವಾಗಿ ಬೃಹತ್ ವಾಕಥಾನ್‌ಗೆ ನಟಿ ಅನುಪ್ರಭಾಕರ್‌ ಚಾಲನೆ

ಆ ಮೂರು ದಿನ ನಿಶ್ಚಿಂತತೆಯಿಂದ ಹೆಣ್ಣುಮಕ್ಕಳು ವಿಶ್ರಮಿಸಿಕೊಳ್ಳೋದನ್ನು ಗಂಡಸರು ವಿರೋಧಿಸೋದಿರಲಿ, ಸ್ವಯಂ ಹೆಂಗಸರೇ ವಿರೋಧಿಸುತ್ತಾರೆ! ಸ್ವಾತಂತ್ರ್ಯ ಹರಣವಾಗಿಬಿಡುತ್ತದೆ ಎಂದು ಊಳಿಡುತ್ತಿರುತ್ತಾರೆ. ನೀವೇನೇ ಹೇಳಿ , ಈ ದಿನಗಳಲ್ಲಿ ಸೂಕ್ತ ವಿಶ್ರಾಂತಿಗೆ ದಾರಜ ಸಿಗದೇ ಅದೊಂದು ಸಹಜ ಕ್ರಿಯೆಯಷ್ಟೇ ಎಂದು ದಿನಂಪ್ರತಿಯಂತೆ ಕೆಲಸಕ್ಕೆ ದೇಹವನ್ನೂ, ಮನಸ್ಸನ್ನೂ ಹಚ್ಚಿದರೆ ಹೆಣ್ಣಿಗೆ ಅದು ಕೊಡುವ ಬಾಧೆ ಉಗ್ರರೂಪದ್ದಾಗಿರುತ್ತದೆ.

ಕುಂಟು ನೆವಗಳಿಗೆಲ್ಲಾ ರಜೆಯನ್ನು ಘೋಷಿಸುವ ಸರಕಾರಗಳು ಸ್ವಯಂ ಪ್ರಜೆಗಳ ಹುಟ್ಟಿಗೆ ನಿಜಾರ್ಥದಲ್ಲಿ ಕಾರಣವಾಗುವ ಹೆಣ್ಣಿನ ಮುಟ್ಟಿಗೆ ಯಾಕೆ ಮೂರು ದಿನ ರಜೆಯನ್ನು ಘೋಷಿಸಬಾರದು?

Exit mobile version