Site icon Vistara News

Women’s Day 2023: ಮುಟ್ಟಿನ ರಜೆ ಆಯ್ಕೆಯಾಗಿರುವುದು ಸೂಕ್ತ

Menstrual leave is an option

#image_title

ಪ್ರತೀಕ್ಷಾ ಹೊಸಪಟ್ಟಣಕರ, ಮ್ಯಾನಿಫೆಸ್ಟೇಷನ್ ಕೋಚ್

ಸಮಾಜದ ವಿಷಯ ಬಂದಾಗ ಸಮಾನತೆ ಬಗ್ಗೆ ಮಾತನಾಡಬಹುದು, ವೈಯಕ್ತಿಕ ವಿಷಯಕ್ಕೆ ಬಂದಾಗ ಒಂದೇ ರೀತಿಯದ್ದನ್ನು ನಿರೀಕ್ಷಿಸಲಾಗದು. ಏಕೆಂದರೆ ಸಂಸ್ಕಾರ, ಆಹಾರ ಕ್ರಮ, ರೀತಿ ನೀತಿ, ಜೀವನಶೈಲಿ ಎಲ್ಲವೂ ವಿಭಿನ್ನ.

ಇದೇ ನಿಟ್ಟಿನಲ್ಲಿ ಪ್ರತಿಯೊಂದು ಮಹಿಳೆಯ ದೇಹ ಮತ್ತು ಆರೋಗ್ಯ ಕೂಡ ವಿಭಿನ್ನ. ಹೀಗಿರುವಾಗ ಎಲ್ಲರಿಗೂ ಒಂದೇ ರೀತಿಯ ಸಮಸ್ಯೆ ಇದೆ ಅಥವಾ ಇಲ್ಲಾ ಎಂದು ಭಾವಿಸಿ ಬೇಕೇ ಬೇಕು, ಬೇಡವೇ ಬೇಡ ಎನ್ನುವ ವಾದ ಮುಂದಿಡಲು ಸಾಧ್ಯವೇ ಇಲ್ಲಾ. ಹಾಗೆ ಒಂದು ಪಕ್ಷ ಮಾಡಿದಲ್ಲಿ ಒಂದಾ ನರಳುವ ಮಹಿಳೆಗೆ ಅನ್ಯಾಯವಾಗುವ ಇಲ್ಲವೇ ಕೊಟ್ಟ ಸೌಲಭ್ಯ ನಿರರ್ಥಕವಾಗಿಸುವ ಸಾಧ್ಯತೆ ಇದೆ.

ಹೀಗಾಗಿ ಮುಟ್ಟಿನ ರಜೆಯನ್ನು ಮಹಿಳೆಯರಿಗೆ ಒಂದು ಆಯ್ಕೆಯಾಗಿ ನೀಡುವುದೇ ಸೂಕ್ತ. ಆಗ ಅವಶ್ಯಕತೆ ಇರುವವರು ಉಪಯೋಗಿಸಬಹುದು. ಇಲ್ಲವಾದವರು ದಿನನಿತ್ಯದಂತೆ ಕೆಲಸ ಮಾಡಿಕೊಂಡು ಹೋಗಬಹುದು.

ಇದು ವಯಕ್ತಿಕ ಸ್ವಾತಂತ್ರ್ಯಕ್ಕೆ ಕೂಡ ಸಮರ್ಥನೆ ನೀಡುವ ಕಾರಣ ಯಾರಿಗೂ ಒತ್ತಾಯಪೂರ್ವಕವಾಗಿ ಹೇರಿದಂತೆ ಆಗುವುದಿಲ್ಲ, ನರಳುವಂತೆಯೂ ಮಾಡುವುದಿಲ್ಲ.

ಇದನ್ನೂ ಓದಿ : International Women’s Day 2023: ಮಹಿಳಾ ದಿನಾಚರಣೆ ಪ್ರಯುಕ್ತ ಮಾ.8ರಂದು ಬಿಎಂಟಿಸಿ ಬಸ್‌ನಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ

ನನಗೆ ಕಾಡುತ್ತಿರುವ ಚಿಂತೆಯೆಂದರೆ ಈಗಾಗಲೇ ಹೆಣ್ಣು ಮಕ್ಕಳ ಮದುವೆ, ಮಕ್ಕಳುಗಳ ವಿಚಾರ ಮಾಡಿ ಕೆಲಸ ನೀಡಲು ಹಿಂದೇಟು ಹಾಕುತ್ತಿರುವ ಕಂಪನಿಗಳು ಈಗ ಇದಕ್ಕೂ ರಜೆ ಕಡ್ಡಾಯ ಮಾಡಿದರೆ ಹೆಣ್ಣು ಮಕ್ಕಳನ್ನು ಸೇರಿಸಿಕೊಳ್ಳಲು ಮತ್ತಿಷ್ಟು ಹಿಂದೇಟು ಹಾಕುವ ಸಾಧ್ಯತೆ ಜಾಸ್ತಿ ಇದೆ.

ಅದಕ್ಕಾಗಿ ಕಡ್ಡಾಯವಾಗಿ ಬೇಕು ಬೇಡ ಎನ್ನುವ ವಾದಕ್ಕಿಂತ ಹೆಣ್ಣುಮಕ್ಕಳಿಗೆ ಮುಟ್ಟಿನ ರಜೆಯನ್ನು ಆಯ್ಕೆಯಾಗಿ ನೀಡುವುದೇ ಸರಿಯೆಂದು ನನ್ನ ವಿಚಾರ.

Exit mobile version