ಶೋಭಾ ಶ್ರೀನಿವಾಸ್, ಶಿಕ್ಷಕಿ
ಮುಟ್ಟು ಇಂದಿನ ದಿನಗಳಲ್ಲಿ ಗುಟ್ಟಾಗಿ ಇಲ್ಲ. ಅದು ಸಹಜ ಪ್ರಕ್ರಿಯೆ ಹೌದು. ಆದರೂ ಇನ್ನೂ ಕೆಲವು ಮನೆಗಳಲ್ಲಿ ಇದೊಂದು ಅಂಟು ರೋಗವೆಂಬಂತೆ ವರ್ತಿಸುತ್ತಾರೆ ಎಂಬುದು ಅರಿಯಬೇಕಿದೆ. ಅದಕ್ಕಾಗಿ ರಜೆ ನೀಡಬೇಕು ಅನ್ನೋದಾದರೆ ರಜೆ ಅವಶ್ಯಕತೆ ಇರುವರು ಪಡೆಯಬೇಕು. ಇತ್ತೀಚಿನ ದಿನಗಳಲ್ಲಿ ಹೆಣ್ಣುಮಕ್ಕಳು ಅಪೌಷ್ಟಿಕ ಆಹಾರದಿಂದ ಶಕ್ತಿಹೀನರಾಗುತ್ತಿರುವುದು ಮುಟ್ಟಿನ ಸಮಯದಲ್ಲಿ ಹೊಟ್ಟೆನೋವು, ಸೊಂಟನೋವು, ಆಯಾಸಗಳು ಇರುತ್ತವೆ. ಆದರೆ ಎಲ್ಲ ಹೆಣ್ಣು ಮಕ್ಕಳಿಗೂ ಇರುವುದಿಲ್ಲ. ಅತಿ ಹೆಚ್ಚಿನ ಮಕ್ಕಳಲ್ಲಿ ಇರುವುದಕ್ಕೆ ಕಾರಣ ಅಪೌಷ್ಟಿಕತೆ. ಮಕ್ಕಳನ್ನು ಗಟ್ಟಿಮುಟ್ಟಾಗಿಸಲು ಯೋಜನೆಗಳೂ ಬರಬೇಕು. ಸಮಸ್ಯೆಯ ಮೂಲಕ್ಕೆ ಪರಿಹಾರ ಹುಡುಕಬೇಕು. ರಜೆ ನೀಡಿದರೆ ಸರಿಯಾಗಿ ಬಳಕೆಯಾಗಬೇಕು.