ಬೆಂಗಳೂರು: ಬೆಂಗಳೂರು ಮೂಲದ ಇನ್ಫೋಸಿಸ್ 2022-23ರ ಸಾಲಿನಲ್ಲಿ ಪ್ರತಿ ಷೇರಿಗೆ 16.50 ರೂ. ಡಿವಿಡೆಂಡ್ ಅನ್ನು ಪ್ರಕಟಿಸಿದೆ. ಹೀಗಾಗಿ ಷೇರುದಾರರಲ್ಲಿ ಒಬ್ಬರಾಗಿರುವ, ಬ್ರಿಟನ್ ಪ್ರಧಾನಿ (Rishi Sunak) ರಿಷಿ ಸುನಕ್ ಪತ್ನಿ ಅಕ್ಷತಾ ಮೂರ್ತಿ ಅವರಿಗೆ ಕೂಡ ಡಿವಿಡೆಂಡ್ ಸಿಗಲಿದೆ.
ನವೆಂಬರ್ 10ರಂದು ಅಕ್ಷತಾ ಮೂರ್ತಿಯವರಿಗೆ 64.27 ಕೋಟಿ ರೂ. ಡಿವಿಡೆಂಡ್ ಸಿಗಲಿದೆ. ಅಕ್ಷತಾ ಮೂರ್ತಿ ಅವರು 3,89,57,096 ಷೇರುಗಳನ್ನು ಹೊಂದಿದ್ದಾರೆ. ಇದರ ಮೌಲ್ಯ 64,27,92,084 ರೂ. ( 64.27 ಕೋಟಿ ರೂ.) ಆಗಿದೆ.
ಇನ್ಫೋಸಿಸ್ ಸ್ಥಾಪಕ ನಾರಾಯಣ ಮೂರ್ತಿ ಅವರ ಪುತ್ರಿ ಅಕ್ಷತಾ ಮೂರ್ತಿ 2009ರಲ್ಲಿ ರಿಷಿ ಸುನಕ್ ಅವರನ್ನು ವಿವಾಹವಾಗಿದ್ದರು. 2021-22ರ ಬಾಬ್ತು 126 ಕೋಟಿ ರೂ. ಡಿವಿಡೆಂಡ್ ಅನ್ನು ಅಕ್ಷತಾ ಮೂರ್ತಿ ಗಳಿಸಿದ್ದರು.