Site icon Vistara News

VISTARA TOP 10 NEWS : ಡಿಕೆಶಿ ಸಿಬಿಐ ಕುಣಿಕೆ ತಪ್ಪಿಸಲು ಸಂಪುಟ ಸರ್ಕಸ್; ರಾಹುಲ್‌ ಗಾಂಧಿಗೆ ನೋಟಿಸ್‌

Vistara Top 10 Newss

1. ಡಿ.ಕೆ. ಶಿವಕುಮಾರ್‌ ಮೇಲಿನ ಸಿಬಿಐ ಕೇಸ್‌ ವಾಪಸ್‌; ಕ್ಯಾಬಿನೆಟ್‌ ಮಹತ್ವದ ನಿರ್ಣಯ
ಆದಾಯ ಮೂಲಕ್ಕಿಂತ 200 ಕೋಟಿ ಹೆಚ್ಚು ಅಕ್ರಮ ಸಂಪಾದನೆ (Illegal editing) ಮಾಡಿದ್ದರು ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಕೆಪಿಸಿಸಿ ಅಧ್ಯಕ್ಷ, ಡಿಸಿಎಂ ಡಿ.ಕೆ. ಶಿವಕುಮಾರ್‌ (DK Shivakumar) ವಿರುದ್ಧದ ಸಿಬಿಐ ಕೇಸ್‌ (CBI Case) ಅದನ್ನು ವಾಪಸ್‌ ಪಡೆದು ರಾಜ್ಯ ತನಿಖಾ ಸಂಸ್ಥೆಗೆ ನೀಡುವ ಮಹತ್ವದ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ (Cabinet Meeting) ಸಭೆ ತೆಗೆದುಕೊಂಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

2. ಜಾತಿ ಗಣತಿ ವರದಿ ಬಗ್ಗೆ ಊಹೆ ಮಾಡ್ಬೇಡಿ, ನಾವೇಕೆ ಸಮಾಜ ಒಡೆಯುತ್ತೇವೆ? ಸಿಎಂ ಖಡಕ್‌ ಪ್ರಶ್ನೆ
ಜಾತಿ ಜನಗಣತಿ ವರದಿ (Caste Census) ಸಲ್ಲಿಸುವ ಮುನ್ನವೇ ಚರ್ಚೆ ಶುರುವಾಗಿದೆ. ವರದಿಯಲ್ಲೇ ಏನಿದೆ ಎಂದು ಅದನ್ನು ಬೇಡ ಎನ್ನುವವರಿಗೂ ಗೊತ್ತಿಲ್ಲ. ಇನ್ನು ನಮ್ಮ ಮೇಲೆ ಸಮಾಜ ಒಡೆಯುವ ಆರೋಪವನ್ನು ಮಾಡಲಾಗುತ್ತಿದೆ. ನಾವು ಏಕೆ ಸಮಾಜವನ್ನು ಒಡೆಯುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಪ್ರಶ್ನೆ ಮಾಡಿದರು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ: ಜಾತಿ ಗಣತಿ ವರದಿ ಬರೆಸಿದರೇ ಸಿಎಂ? ತನಿಖೆ ನಡೆಸಲು ಆರ್‌ ಅಶೋಕ್‌ ಸವಾಲು
ಈ ಸುದ್ದಿಯನ್ನೂ ಓದಿ: ಜಾತಿ ಗಣತಿ ವರದಿ ಅವೈಜ್ಞಾನಿಕ ಅನ್ನೋದು ತಪ್ಪೆಂದ ಕಾಂತರಾಜು! ಬಿಜೆಪಿ ಮೇಲೆ ಕೆಂಡ

3. ಉಗ್ರರ ಜತೆ ಕದನ; ಮಂಗಳೂರಿನ ಕ್ಯಾ. ಪ್ರಾಂಜಲ್‌ ಸೇರಿ ನಾಲ್ವರು ಹುತಾತ್ಮ
ಜಮ್ಮು ಮತ್ತು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಬುಧವಾರ ಸೇನಾಪಡೆ ಮತ್ತು ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ‌ (Rajouri Encounter) ಹುತಾತ್ಮರಾದ ನಾಲ್ವರು ವೀರ ಯೋಧರಲ್ಲಿ ಮಂಗಳೂರು ಮೂಲದ ಕ್ಯಾಪ್ಟನ್‌ ಎಂ.ಪಿ. ಪ್ರಾಂಜಲ್‌ (Captain MV Pranjal) ಎಂದು ತಿಳಿದುಬಂದಿದೆ. ಈ ಘಟನೆಯಲ್ಲಿ ಇಬ್ಬರು ಕ್ಯಾಪ್ಟನ್‌ಗಳು ಮತ್ತು ಇಬ್ಬರು ಸೈನಿಕರು ಮೃತಪಟ್ಟಿದ್ದಾರೆ. ಇಬ್ಬರಿಗೆ ಗಾಯಗಳಾಗಿವೆ. ಪೀರ್‌ ಪಂಜಾಲ್‌ ಎಂಬ ಪ್ರದೇಶದಲ್ಲಿ ಇನ್ನೂ ಎನ್‌ಕೌಂಟರ್‌ ಮುಂದುವರಿದಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಈ ಸುದ್ದಿಯನ್ನೂ ಓದಿ: ಇಬ್ಬರು ಉಗ್ರರ ದಮನ; ಒಬ್ಬ IED ತಜ್ಞ, ಇನ್ನೊಬ್ಬ ನುರಿತ ಸ್ನೈಪರ್‌

4. ರಾಜ್ಯಕ್ಕೆ ಮತ್ತೆ ಕಾವೇರಿ ಆಘಾತ; ವರ್ಷಾಂತ್ಯದವರೆಗೂ ನೀರು ಬಿಡಲು ಆರ್ಡರ್‌
ಕಾವೇರಿ ಜಲ ವಿವಾದದಲ್ಲಿ (Cauvery Dispute) ರಾಜ್ಯಕ್ಕೆ ಮತ್ತೆ ಹಿನ್ನಡೆಯಾಗಿದೆ. ಕಳೆದ ಆಗಸ್ಟ್‌ 26ರಿಂದ ಪ್ರತಿ 15 ದಿನಕ್ಕೊಮ್ಮೆ ಸಭೆ ನಡೆಸುತ್ತಿರುವ ಕಾವೇರಿ ನೀರು ನಿಯಂತ್ರಣ ಸಮಿತಿಯು (Cauvery Water regulation Committee) ಪ್ರತಿ ಬಾರಿಯೂ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವಂತೆ ಆದೇಶ ನೀಡುತ್ತಿದೆ. ಗುರುವಾರ (ನವೆಂಬರ್‌ 23)ರಂದು ನಡೆದ ಸಭೆಯಲ್ಲೂ ಇದೇ ಚಾಳಿಯನ್ನು ಮುಂದುವರಿಸಲಾಗಿದೆ. ಈ ಬಾರಿ ಪ್ರತಿ ದಿನ 2700 ಕ್ಯೂಸೆಕ್‌ ನೀರು ಬಿಡುವಂತೆ ಆದೇಶ ನೀಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5.ಮೋದಿ ಅಪಶಕುನ, ಜೇಬುಗಳ್ಳ ಎಂದ ರಾಹುಲ್‌ಗೆ ಚುನಾವಣಾ ಆಯೋಗ ನೋಟಿಸ್‌
ರಾಜಸ್ಥಾನದ (Rajasthan Election) ಚುನಾವಣಾ ಪ್ರಚಾರಸಭೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಜೇಬುಗಳ್ಳ ಮತ್ತು ಅಶಕುನ ಎಂದು ಕರೆದಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ (Rahul Gandhi) ಅವರಿಗೆ ಚುನಾವಣಾ ಆಯೋಗವು ಕಾರಣ ಕೇಳಿ ನೋಟಿಸ್ ಜಾರಿ ಮಾಡಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ರೋಹಿತ್‌, ಕೊಹ್ಲಿ ಟಿ 20 ಕ್ರಿಕೆಟ್‌ ಯುಗಾಂತ್ಯ?; ಬಿಸಿಸಿಐ ನಿಲುವೇನು?
ಬಿಸಿಸಿಐ ಮುಂದಿನ ಟಿ20 ವಿಶ್ವಕಪ್ ಸಿದ್ದತೆ ಮಾಡಲು ಆರಂಭಿಸಿದೆ. ಆಸ್ಟ್ರೇಲಿಯಾ ವಿರುದ್ಧದ ಐದು ಪಂದ್ಯಗಳ ಟಿ20 ಸರಣಿಯಿಂದಲೇ ಈ ಸಿದ್ಧತೆ ಆರಂಭವಾಗಿದೆ. ಹಿರಿಯ ಆಟಗಾರರಿಗೆ ವಿಶ್ರಾಂತಿ ನೀಡಿ ಯುವ ಮುಖಗಳಿಗೆ ಈ ಸರಣಿಯಲ್ಲಿ ಮಣೆ ಹಾಕಲಾಗಿದೆ. ಇದೀಗ ರೋಹಿತ್​ ಶರ್ಮಾ(Rohit Sharma) ಮತ್ತು ವಿರಾಟ್​ ಕೊಹ್ಲಿ(Virat Kohli) ಅವರು ಮುಂದಿನ ಟಿ20 ಕ್ರಿಕೆಟ್​ ಆಡುವುದಿಲ್ಲ, ಅವರ ಟಿ20 ಕ್ರಿಕೆಟ್​ ಭವಿಷ್ಯ ಬಹುತೇಕ ಅಂತ್ಯ ಕಾಣಲಿದೆ ಎಂಬ ಟಾಕ್​ ಕ್ರಿಕೆಟ್​ ವಲಯದಲ್ಲಿ ಬಾರಿ ಸದ್ದು ಮಾಡುತ್ತಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

7. ಕರಾವಳಿಯಿಂದ ಕೋಣಗಳ ಮೆರವಣಿಗೆ ಶುರು; ರಾಜಧಾನಿಯಲ್ಲಿ ಕುದಿ ಕಂಬಳ!
ಬೆಂಗಳೂರಿನ ಅರಮನೆ ಮೈದಾನದಲ್ಲಿ (Bangalore Palace Grounds) ನವೆಂಬರ್‌ 25 ಮತ್ತು 26ರಂದು ನಡೆಯಲಿರುವ ಬೆಂಗಳೂರು ಕಂಬಳದ (Bangalore Kambala) ಸಂಭ್ರಮ ಆಗಲೇ ಶುರುವಾಗಿದೆ. ಒಂದು ಕಡೆ ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿಯಿಂದ ಸುಮಾರು 150 ಜೋಡಿ ಕೋಣಗಳ (150 Pair of Buffallos) ವೈಭವದ ಮೆರವಣಿಗೆ ರಾಜಧಾನಿ ಕಡೆಗೆ ಶುರುವಾಗಿದ್ದರೆ, ಇತ್ತ ಬೆಂಗಳೂರಿನ ಮೈದಾನದಲ್ಲಿ ಗುರುವಾರ ಕುದಿ ಕಂಬಳ (Kudi Kambala) ನಡೆಯಿತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. 100 ಕೋಟಿ ರೂ. ಪೋಂಜಿ ಸ್ಕ್ಯಾಮ್‌, ನಟ ಪ್ರಕಾಶ್‌ರಾಜ್‌ಗೆ ಇಡಿ ಸಮನ್ಸ್‌
ದಕ್ಷಿಣ ಭಾರತದ (South India) ಖ್ಯಾತ ನಟ ಹಾಗೂ ಕನ್ನಡಿಗ ಪ್ರಕಾಶ್ ರಾಜ್ (Actor Prakash Raj) ಅವರು ಸಂಕಟಕ್ಕೆ ಸಿಲುಕಿದ್ದಾರೆ. ಆಭರಣ ವ್ಯಾಪ್ಯಾರ ಕಂಪನಿ ಎದುರಿಸುತ್ತಿರುವ 100 ಕೋಟಿ ರೂ. ಪೋಂಜಿ ಹಗರಣಕ್ಕೆ (Rs 100 Crore Ponzi Scam) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (Enforcement Directorate) ಸಮನ್ಸ್ ಜಾರಿ ಮಾಡಿದೆ. ಪ್ರಕಾಶ್ ರಾಜ್ ಬ್ರಾಂಡ್ ಅಂಬಾಸಿಡರ್ ಆಗಿದ್ದ ಪ್ರಣವ್ ಜ್ಯುವೆಲರ್ಸ್‌ ಹೂಡಿಕೆದಾರರಿಗೆ 100 ಕೋಟಿ ರೂ. ವಂಚಿಸಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಮೊಬೈಲ್‌ ಸಿಮ್‌ ಪಡೆಯಲು ಡಿ.1ರಿಂದ ಹೊಸ ನಿಯಮಗಳು; ಈ 5 ವಿಷಯ ತಿಳಿದಿರಲಿ
ಡಿಸೆಂಬರ್ 1ರಿಂದ ಹೊಸ ಸಿಮ್‌ ಕಾರ್ಡ್‌ ಪಡೆಯುವವರು ಹಾಗೂ ಮಾರಾಟ ಮಾಡುವವರು ಕೂಡ ಹೊಸ ನಿಯಮಗಳನ್ನು (SIM card rules) ಫಾಲೋ ಮಾಡಬೇಕಿದೆ. ದೂರಸಂಪರ್ಕ ಇಲಾಖೆ ಈ ಕುರಿತ ನಿಯಮಗಳನ್ನು ಪರಿಷ್ಕರಿಸಿದ್ದು, ಡಿ.1ರಿಂದ ಜಾರಿಗೆ ಬರಲಿವೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಕನ್ನಡದಲ್ಲಿ ಈ ವಾರ 5 ಸಿನಿಮಾ ಬಿಡುಗಡೆ; ತಾರೆಗಳ ನಡುವೆ ಭರ್ಜರಿ ಪೈಪೋಟಿ
ಈ ಶುಕ್ರವಾರ ಕನ್ನಡದಲ್ಲಿ ಐದು ಸಿನಿಮಾಗಳು (Upcoming Movies) ರಿಲೀಸ್ ಆಗುತ್ತಿವೆ. ದುನಿಯಾ ಸೂರಿ ನಿರ್ದೇಶನದ ‘ಬ್ಯಾಡ್ ಮ್ಯಾನರ್ಸ್’ ಹೆಚ್ಚು ಕುತೂಹಲ ಮೂಡಿಸಿದೆ. ಚಿತ್ರದಲ್ಲಿ ಅಭಿಷೇಕ್ ಅಂಬರೀಶ್ – ರಚಿತಾ ರಾಮ್ ಲೀಡ್ ರೋಲ್‌ಗಳಲ್ಲಿ ನಟಿಸಿದ್ದಾರೆ. ಡಾರ್ಲಿಂಗ್ ಕೃಷ್ಣ ನಟನೆಯ ‘ಶುಗರ್ ಫ್ಯಾಕ್ಟರಿ’, ರಾಜ್‌ ಬಿ. ಶೆಟ್ಟಿ ಸಾರಥ್ಯದ ‘ಸ್ವಾತಿಮುತ್ತಿನ ಮಳೆ ಹನಿಯೇ’ ಸಿನಿಮಾಗಳು ರಿಲೀಸ್‌ ಆಗುತ್ತಿವೆ. ಇವುಗಳ ಜೊತೆಗೆ ‘ಎಲೆಕ್ಟ್ರಾನಿಕ್ ಸಿಟಿ’ ಹಾಗೂ ‘ಸ್ಕೂಲ್ ಡೇಸ್’ ಎನ್ನುವ ಮತ್ತೆರಡು ಸಿನಿಮಾಗಳು ರಿಲೀಸ್‌ಗೆ ಸಜ್ಜಾಗಿವೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

Exit mobile version