Site icon Vistara News

Gold | ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ ಕೋವಿಡ್‌ ಪೂರ್ವ ಮಟ್ಟಕ್ಕೆ ಚಿನ್ನದ ಬೇಡಿಕೆ ಏರಿಕೆ

gold jewellery

ಬೆಂಗಳೂರು: ಭಾರತದಲ್ಲಿ 2022ರ ಮೂರನೇ ತ್ರೈಮಾಸಿಕದಲ್ಲಿ, ಅಂದರೆ ಜುಲೈ-ಸೆಪ್ಟೆಂಬರ್‌ ಅವಧಿಯಲ್ಲಿ 191 ಟನ್‌ ಬಂಗಾರಕ್ಕೆ (Gold) ಬೇಡಿಕೆ ಉಂಟಾಗಿತ್ತು. ಕಳೆದ 2021ರ ಇದೇ ಅವಧಿಯಲ್ಲಿ 168 ಟನ್‌ ಚಿನ್ನ ಮಾರಾಟವಾಗಿತ್ತು ಎಂದು ವರ್ಲ್ಡ್‌ ಗೋಲ್ಡ್‌ ಕೌನ್ಸಿಲ್‌ನ ವರದಿ ತಿಳಿಸಿದೆ.

191 ಟನ್‌ ಬಂಗಾರದ ಪೈಕಿ 146 ಟನ್‌ ಜ್ಯುವೆಲ್ಲರಿ ಹಾಗೂ 45 ಟನ್‌ ಹೂಡಿಕೆ ಕುರಿತ ಚಿನ್ನಕ್ಕೆ ಬೇಡಿಕೆ ಇತ್ತು.

ಮೌಲ್ಯದ ದೃಷ್ಟಿಯಿಂದ 2022ರ ಮೂರನೇ ತ್ರೈಮಾಸಿಕದಲ್ಲಿ 85,010 ಕೋಟಿ ರೂ.ಗಳ ಬಂಗಾರಕ್ಕೆ ಬೇಡಿಕೆ ಉಂಟಾಗಿತ್ತು. 2021ರ ಇದೇ ಅವಧಿಯಲ್ಲಿ 71,630 ಕೋಟಿ ರೂ. ಮೌಲ್ಯದ ಬಂಗಾರಕ್ಕೆ ಬೇಡಿಕೆ ಇತ್ತು. 64,860 ಕೋಟಿ ರೂ. ಮೌಲ್ಯದ ಜ್ಯುವೆಲ್ಲರಿ ಮಾರಾಟವಾಗಿತ್ತು.

ಕಳೆದ ವರ್ಷಕ್ಕೆ ಹೋಲಿಸಿದರೆ 2022ರ ಜುಲೈ-ಸೆಪ್ಟೆಂಬರ್‌ನಲ್ಲಿ ಭಾರತದ ಒಟ್ಟು ಬಂಗಾರದ ಬೇಡಿಕೆಯಲ್ಲಿ 14% ಹೆಚ್ಚಳವಾಗಿತ್ತು. ಇದರೊಂದಿಗೆ ಕೋವಿಡ್‌ ಪೂರ್ವ ಮಟ್ಟಕ್ಕೆ ಬೇಡಿಕೆ ಮರುಕಳಿಸಿದೆ.

ನಗರ ಪ್ರದೇಶಗಳಲ್ಲಿ ಬಂಗಾರದ ಜ್ಯುವೆಲ್ಲರಿಗೆ ಬೇಡಿಕೆ ಗಣನೀಯ ಚೇತರಿಸಿದೆ. ಹೀಗಿದ್ದರೂ, ಗ್ರಾಮೀಣ ಮಾರುಕಟ್ಟೆಯಲ್ಲಿ ಹಣದುಬ್ಬರ ಮತ್ತು ಮುಂಗಾರು ಪ್ರಭಾವ ಬೀರಿದೆ. ಇಡೀ ವರ್ಷದ ಬೇಡಿಕೆ ಕಳೆದ ವರ್ಷದ ಮಾದರಿಯಲ್ಲಿ 750-800 ಟನ್‌ ಇರಬಹುದು ಎಂದು ಅಂದಾಜಿಸಲಾಗಿದೆ.

Exit mobile version