Site icon Vistara News

ಕಾಳಿದೇವಿಯ ಕೈಗೆ ಸಿಗರೇಟು ಕೊಟ್ಟ ನಿರ್ಮಾಪಕಿ ಲೀನಾ ಮಣಿಮೇಕಲೈ ವಿರುದ್ಧ ಬೆಂಗಳೂರು, ಲಖನೌನಲ್ಲಿ FIR

ಬೆಂಗಳೂರು/ಲಖನೌ: ಕಾಳಿಕಾ ಮಾತೆಯ ಸಿಗರೇಟು ಸೇದುವಂತೆ ಚಿತ್ರೀಕರಣ ಮಾಡಿ ಪೋಸ್ಟರ್‌ ಮತ್ತು ವಿಡಿಯೊ ಬಿಡುಗಡೆ ಮಾಡಿದ ನಿರ್ಮಾಪಕಿ, ನಟಿ ಲೀನಾ ಮಣಿಮೇಕಲೈ ವಿರುದ್ಧ ಬೆಂಗಳೂರು ಮತ್ತು ಉತ್ತರ ಪ್ರದೇಶದ ಲಖನೌನಲ್ಲಿ ಎಫ್‌ಐಆರ್‌ ದಾಖಲಾಗಿದೆ.

ಲೀನಾ ಇತ್ತೀಚೆಗೆ ತಮ್ಮ ಮುಂಬರುವ ಸಾಕ್ಷ್ಯಚಿತ್ರದ ಪೋಸ್ಟರನ್ನು ಜಾಲತಾಣದಲ್ಲಿ ಹಂಚಿಕೊಂಡಿದ್ದರು. ಆ ಪೋಸ್ಟರ್‌ನಲ್ಲಿ ಮಹಿಳೆಯೊಬ್ಬರು ಕಾಳಿ ಮಾತೆಯ ವೇಷ ಧರಿಸಿ ಸಿಗರೇಟು ಸೇದುತ್ತಿರುವ ದೃಶ್ಯವಿದೆ. ಇದನ್ನು ಡಿಲೀಟ್‌ ಮಾಡಬೇಕು. ಸಮಸ್ತ ಹಿಂದೂ ಜನತೆಯ ಮುಂದೆ ಲೀನಾ ಕ್ಷಮೆ ಕೇಳಬೇಕು ಎಂದು ಎಲ್ಲೆಡೆ ಕೂಗು ಕೇಳಿ ಬಂದಿದೆ.

ಪೋಸ್ಟರ್‌ ಅಲ್ಲಿ ಹಿಂದೂಗಳ ಆರಾಧ್ಯದೇವಿ ಕಾಳಿಗೆ ಅಪಮಾನ ಮಾಡಲಾಗಿದೆ ಎಂದು ದೂರು.

ಕಾಳಿ ಮಾತೆಯ ಕೈಯಲ್ಲಿ ಸಿಗರೇಟ್‌ ಕೊಟ್ಟು ಫೋಟೊ ತೆಗೆದಿದ್ದೇ ತಪ್ಪು. ಇಷ್ಟೆಲ್ಲ ವಿರೋಧ ವ್ಯಕ್ತವಾಗುತ್ತಿದ್ದರೂ ಡಿಲೀಟ್‌ ಮಾಡದೆ ಇರುವುದು ಇನ್ನೂ ದೊಡ್ಡ ತಪ್ಪು. ಹಿಂದು ಸಮುದಾಯದ ಭಾವನೆಗಳಿಗೆ ಧಕ್ಕೆ ತಂದ ಲೀನಾ ಮಣಿಮೇಕಲೈ ಅವರನ್ನು ಕೂಡಲೇ ಬಂಧಿಸಬೇಕು ಎಂದು ಸಾಮಾಜಿಕ ಹೋರಾಟಗಾರ ಪ್ರಶಾಂತ ಸಂಬರ್ಗಿ ದೂರು ನೀಡಿದ್ದಾರೆ. ಬೆಂಗಳೂರಿನ ಸಿ.ವಿ. ರಾಮನ್‌ ನಗರ ಪೋಲಿಸ್‌ ಠಾಣೆಯಲ್ಲಿ ನಿರ್ದೇಶಕಿ ಲೀನಾ ಮಣಿಮೇಕಲೈ ವಿರುದ್ದ ದೂರು ದಾಖಲಾಗಿದೆ.

ಬೆಂಗಳೂರಿನಲ್ಲಿ ದಾಖಲಾದ ದೂರು

ಬೆಂಗಳೂರು ಅಷ್ಟೇ ಅಲ್ಲದೆ ಪ್ರದೇಶ ಲಖನೌದ ಹಜರತ್‌ ಗಂಜ್‌ ಪೊಲೀಸ್ ಠಾಣೆಯಲ್ಲಿ ಸೋಮವಾರ ಸಿನಿಮಾ ನಿರ್ಮಾಪಕಿ ಲೀನಾ ಮಣಿಮೇಕಲೈ ಅಷ್ಟೇ ಅಲ್ಲದೆ, ಸಾಕ್ಷ್ಯಚಿತ್ರದ ಸಹಾಯಕ ನಿರ್ಮಾಪಕಿಯಾದ ಆಶಾ, ಹಾಗೂ ಸಂಪಾದಕ ಶ್ರವಣ್ ಒನಚನ್ ಅವರ ಮೇಲೆ ದೂರು ದಾಖಲಾಗಿದೆ.

ಇದನ್ನೂ ಓದಿ: ಸಿಗರೇಟ್‌ ಸೇದುತ್ತಿರುವ ಕಾಳಿ ಪೋಸ್ಟರ್‌! ನಿರ್ಮಾಪಕಿ ವಿರುದ್ಧ ದೂರು ದಾಖಲು

Exit mobile version