Site icon Vistara News

Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಡಬಲ್​ ಎಂಜಿನ್​​ನ ಕೊಂಡಿ ಕಳಚಿದ ‘ಕೈ’

election result live

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election Results 2023) ಮೇ 10ರಂದು ನಡೆದಿದೆ. ಈ ಚುನಾವಣೆಯ ಫಲಿತಾಂಶದ (Karnataka Election Results) ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಕಾಂಗ್ರೆಸ್​ ಸ್ಪಷ್ಟ ಬಹುಮತಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿದೆ. ಬಿಜೆಪಿ ಪ್ರತಿಪಕ್ಷವಾಗಿದೆ. ಜೆಡಿಎಸ್​ ಈ ಸಲ ಕಿಂಗ್​ ಮೇಕರ್ ಆಗುವ ಭಾಗ್ಯವನ್ನು ಕಳೆದುಕೊಂಡಿದೆ. ಈ ಸಲದ ಚುನಾವಣೆಯಲ್ಲಿ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆ ಕಾಣಿಸುತ್ತಿದೆ. ಇಂದು ಬೆಳಗ್ಗೆಯಿಂದ ನಡೆದ ಮತ ಎಣಿಕೆಯ ಸಮಗ್ರ ಮಾಹಿತಿ ಇಲ್ಲಿದೆ.

Lakshmi Hegde

ತುಮಕೂರು ನಗರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಜ್ಯೋತಿ ಗಣೇಶ್ ಅವರು ಗೆಲುವು ಸಾಧಿಸಿದ್ದಾರೆ. ಕಾರ್ಕಳದಲ್ಲಿ ಬಿಜೆಪಿ ಅಭ್ಯರ್ಥಿ ಸುನೀಲ್ ಕುಮಾರ್ ಗೆಲುವು ಸಾಧಿಸಿದ್ದಾರೆ.

B Somashekhar

ಯಶವಂತಪುರದಲ್ಲಿ ಬಿಜೆಪಿಯ ಎಸ್‌.ಟಿ.ಸೋಮಶೇಖರ್‌ಗೆ ಜಯ

ಬೆಂಗಳೂರಿನಲ್ಲಿ ಗೆಲುವಿನ ಆಸೆ ಹೊಂದಿದ್ದ ಯಶವಂತಪುರ ಕ್ಷೇತ್ರದಲ್ಲಿ ಜೆಡಿಎಸ್‌ಗೆ ಸೋಲು

ಸತತವಾಗಿ ಸೋಲು ಕಂಡ ಜವರಾಯಿಗೌಡ

ಯಶವಂತಪುರ ಕ್ಷೇತ್ರದಲ್ಲಿ ನೆಕ್ ಟು ನೆಕ್ ಫೈಟ್ ‌ನೀಡಿದ್ದ ಜವರಾಯಿಗೌಡ

ಕೊನೆಹಂತದಲ್ಲಿ ಸೋಲು ಕಂಡ‌ ಜವರಾಯಿಗೌಡ

ವರ್ಕೌಟ್ ಆಗದ ಅನುಕಂಪದ ಅಲೆ

Lakshmi Hegde

ರಾಮನಗರದಲ್ಲಿ ಜೆಡಿಎಸ್​ನ ನಿಖಿಲ್​ ಕುಮಾರಸ್ವಾಮಿಗೆ ಸೋಲು. ಅಲ್ಲಿ ಕಾಂಗ್ರೆಸ್ ಅಭ್ಯರ್ಥಿ ಇಕ್ಬಾಲ್ ಹುಸೇನ್ ಅವರು ಗೆದ್ದು ಬೀಗಿದ್ದಾರೆ. ಹಾಗೇ, ಬೆಳಗಾವಿ ಗ್ರಾಮೀಣದಲ್ಲಿ ಕಾಂಗ್ರೆಸ್​ನ ಲಕ್ಷ್ಮೀ ಹೆಬ್ಬಾಳ್ಕರ್​, ಗೋಕಾಕ್​ ನಲ್ಲಿ ಬಿಜೆಪಿ ಅಭ್ಯರ್ಥಿ ರಮೇಶ್ ಜಾರಕಿಹೊಳಿ ಅವರು ಗೆದ್ದಿದ್ದಾರೆ.

B Somashekhar

ಬಿಜೆಪಿಯ ಮತ್ತೊಬ್ಬ ಸಚಿವ ಮುರುಗೇಶ್‌ ನಿರಾಣಿಗೆ ಸೋಲು

ಬೀಳಗಿಯಲ್ಲಿ ಸೋಲುಂಡ ಮುರುಗೇಶ್‌ ನಿರಾಣಿ

ಕಾಂಗ್ರೆಸ್‌ನ ಜೆ.ಟಿ.ಪಾಟೀಲ್‌ಗೆ ಭರ್ಜರಿ ಜಯ

Lakshmi Hegde

ಬೈಂದೂರಿನಲ್ಲಿ ಗುರುರಾಜ್ ಶೆಟ್ಟಿಗೆ ಭಾರಿ ಮುನ್ನಡೆ

ಉಡುಪಿ: ಬೈಂದೂರಿನಲ್ಲಿ ಬಿಜೆಪಿ ಅಭ್ಯರ್ಥಿ ಗುರುರಾಜ್​ ಶೆಟ್ಟಿ ಗಂಟಿಹೊಳೆ ಅವರು 9000 ಮತಗಳ ಅಂತರದಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ಬೈಂದೂರಲ್ಲಿ ಒಬ್ಬ ಸಾಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ನೀಡುವ ಮೂಲಕ ಬಿಜೆಪಿ ಪ್ರಯೋಗ ಮಾಡಿತ್ತು. ಆ ಪ್ರಯೋಗ ಯಶಸ್ವಿಯಾಗುವ ಎಲ್ಲ ಲಕ್ಷಣಗಳೂ ಕಾಣಿಸುತ್ತಿವೆ.

Exit mobile version