Site icon Vistara News

Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಡಬಲ್​ ಎಂಜಿನ್​​ನ ಕೊಂಡಿ ಕಳಚಿದ ‘ಕೈ’

election result live

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election Results 2023) ಮೇ 10ರಂದು ನಡೆದಿದೆ. ಈ ಚುನಾವಣೆಯ ಫಲಿತಾಂಶದ (Karnataka Election Results) ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಕಾಂಗ್ರೆಸ್​ ಸ್ಪಷ್ಟ ಬಹುಮತಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿದೆ. ಬಿಜೆಪಿ ಪ್ರತಿಪಕ್ಷವಾಗಿದೆ. ಜೆಡಿಎಸ್​ ಈ ಸಲ ಕಿಂಗ್​ ಮೇಕರ್ ಆಗುವ ಭಾಗ್ಯವನ್ನು ಕಳೆದುಕೊಂಡಿದೆ. ಈ ಸಲದ ಚುನಾವಣೆಯಲ್ಲಿ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆ ಕಾಣಿಸುತ್ತಿದೆ. ಇಂದು ಬೆಳಗ್ಗೆಯಿಂದ ನಡೆದ ಮತ ಎಣಿಕೆಯ ಸಮಗ್ರ ಮಾಹಿತಿ ಇಲ್ಲಿದೆ.

B Somashekhar

ಫಲಿತಾಂಶದ ಬಗ್ಗೆ ಖರ್ಗೆ ಮೊದಲ ಪ್ರತಿಕ್ರಿಯೆ

ಇದು ಜನತಾ ಜನಾರ್ದನರು ನೀಡಿದ ಫಲಿತಾಂಶ

ರಾಜ್ಯದಲ್ಲಿ ಮೋದಿ ಅಲೆ ವರ್ಕೌಟ್‌ ಆಗಿಲ್ಲ

ಮೋದಿ, ಶಾ ಕ್ಯಾಂಪ್‌ ಬಂದು ತಂತ್ರ ರೂಪಿಸಿದರೂ ಜನ ಮೋಸ ಹೋಗಿಲ್ಲ ಎಂದ ಖರ್ಗೆ

B Somashekhar

ಬೆಂಗಳೂರಿನ ರಾಜಾಜಿನಗರ ಕ್ಷೇತ್ರದಲ್ಲಿ ಮತ್ತೆ ಗೆಲುವಿನ ನಗೆ ಬೀರಿದ ಬಿಜೆಪಿಯ ಸುರೇಶ್‌ ಕುಮಾರ್‌

Lakshmi Hegde

ಗದಗ ವಿಧಾನಸಭಾ ಕ್ಷೇತ್ರದಲ್ಲಿ ಅಭ್ಯರ್ಥಿ ಎಚ್​.ಕೆ.ಪಾಟೀಲ್ ಅವರು 88,986 ಮತಗಳನ್ನು ಪಡೆದು ಗೆದ್ದಿದ್ದಾರೆ. ಬಿಜೆಪಿ ಅಭ್ಯರ್ಥಿ ಅನಿಲ್ ಮೆಣಸಿನಕಾಯಿ 73,820 ಮತಗಳನ್ನು ಪಡೆದು ಸೋತಿದ್ದಾರೆ.

B Somashekhar

ಚಿಕ್ಕಬಳ್ಳಾಪುರದಲ್ಲಿ ಡಾ.ಕೆ.ಸುಧಾಕರ್‌ಗೆ ಮುಖಭಂಗ

ಕಾಂಗ್ರೆಸ್‌ ಅಭ್ಯರ್ಥಿ ಪ್ರದೀಪ್‌ ಈಶ್ವರ್‌ಗೆ ಭರ್ಜರಿ ಜಯ

12 ಸಾವಿರ ಮತಗಳ ಅಂತರದಲ್ಲಿ ಗೆದ್ದು ಬೀಗಿದ ಪ್ರದೀಪ್‌ ಈಶ್ವರ್

Lakshmi Hegde

ವಿಶ್ವೇಶ್ವರ ಹೆಗಡೆ ಕಾಗೇರಿಗೆ ಸೋಲು!

ಶಿರಸಿ: ಸೋಲಿಲ್ಲದ ಸರದಾರ ಬಿಜೆಪಿ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿಗೆ ಭರ್ಜರಿ ಶಾಕ್​ ಎದುರಾಗಿದೆ. ಇಲ್ಲಿ ಕಾಂಗ್ರೆಸ್​ ಅಭ್ಯರ್ಥಿಯಾಗಿದ್ದ ಭೀಮಣ್ಣ ನಾಯ್ಕ್​ ಅವರು 5800 ಮತಗಳ ಅಂತರದಿಂದ ಗೆದ್ದಿದ್ದಾರೆ.

Exit mobile version