ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election Results 2023) ಮೇ 10ರಂದು ನಡೆದಿದೆ. ಈ ಚುನಾವಣೆಯ ಫಲಿತಾಂಶದ (Karnataka Election Results) ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿದೆ. ಬಿಜೆಪಿ ಪ್ರತಿಪಕ್ಷವಾಗಿದೆ. ಜೆಡಿಎಸ್ ಈ ಸಲ ಕಿಂಗ್ ಮೇಕರ್ ಆಗುವ ಭಾಗ್ಯವನ್ನು ಕಳೆದುಕೊಂಡಿದೆ. ಈ ಸಲದ ಚುನಾವಣೆಯಲ್ಲಿ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆ ಕಾಣಿಸುತ್ತಿದೆ. ಇಂದು ಬೆಳಗ್ಗೆಯಿಂದ ನಡೆದ ಮತ ಎಣಿಕೆಯ ಸಮಗ್ರ ಮಾಹಿತಿ ಇಲ್ಲಿದೆ.
ಚಿತ್ರದುರ್ಗದಲ್ಲಿ ಖಾತೆ ತೆರೆದ ಕಾಂಗ್ರೆಸ್. ಕೈ ಅಭ್ಯರ್ಥಿ ವೀರೇಂದ್ರ ಪಪ್ಪಿಗೆ ಗೆಲುವು
ಜಗದೀಶ್ ಶೆಟ್ಟರ್ಗೆ ಸೋಲು ಖಚಿತ!
ಟಿಕೆಟ್ ಕೊಟ್ಟಿಲ್ಲ ಎಂಬ ಕಾರಣಕ್ಕೆ ಬಿಜೆಪಿ ತೊರೆದು ಕಾಂಗ್ರೆಸ್ಗೆ ಬಂದಿದ್ದ ಜಗದೀಶ್ ಶೆಟ್ಟರ್ಗೆ ನಿರಾಸೆಯಾಗುವ ಸಾಧ್ಯತೆ ಇದೆ. ಇಲ್ಲೀಗ ಅವರು ಬಿಜೆಪಿ ಅಭ್ಯರ್ಥಿ ಮಹೇಶ್ ಟೆಂಗಿನ್ಕಾಯಿ ಮತ್ತು ಜೆಡಿಎಸ್ ಅಭ್ಯರ್ಥಿ ಸಿದ್ದಲಿಂಗಗೌಡ ಮಹಂತೇಶ್ ವಡಿಯರ್ಗಿಂತಲೂ ಸಿಕ್ಕಾಪಟೆ ಹಿನ್ನಡೆಯಲ್ಲಿದ್ದಾರೆ.
ಬೆಂಗಳೂರಿನಲ್ಲಿ ಯಾರಿಗೆ ಮುನ್ನಡೆ, ಯಾರಿಗೆ ಹಿನ್ನಡೆ?
ಬಿಟಿಎಂ ಲೇಔಟ್ – 6 ನೇ ಸುತ್ತು ಮುಕ್ತಾಯ, ಕಾಂಗ್ರೆಸ್ 9,000 ಮತಗಳ ಮುನ್ನಡೆ
ಬಸವನಗುಡಿ- 8ನೇ ಸುತ್ತು ಮುಕ್ತಾಯಕ್ಕೆ 18,887 ಮತಗಳಿಂದ ಬಿಜೆಪಿ ಮುನ್ನಡೆ
ಬೊಮ್ಮನಹಳ್ಳಿ – 4ನೇ ಸುತ್ತು ಮುಕ್ತಾಯಕ್ಕೆ 8,500 ಮತಗಳಿಂದ ಬಿಜೆಪಿ ಮುನ್ನಡೆ
ಗೋವಿಂದ ರಾಜ್ ನಗರ- 5 ನೇ ಸುತ್ತು ಮುಕ್ತಾಯಕ್ಕೆ 5,242 ಮತಗಳಿಂದ ಕಾಂಗ್ರೆಸ್ ಮನ್ನಡೆ
ಜಯನಗರ – 4 ನೇ ಸುತ್ತು ಮುಕ್ತಾಯಕ್ಕೆ 3,659 ಕಾಂಗ್ರೆಸ್ ಮುನ್ನಡೆ
ಪದ್ಮನಾಭ ನಗರ- 5 ನೇ ಸುತ್ತು ಮುಕ್ತಾಯ ಬಿಜೆಪಿ 18,838 ಮತಗಳ ಮುನ್ನಡೆ
ವಿಜಯನಗರ – 5 ನೇ ಸುತ್ತು ಮುಕ್ತಾಯ ಬಿಜೆಪಿ 5,428 ಮತಗಳ ಮುನ್ನಡೆ
ಮಹಾಲಕ್ಷ್ಮಿ ಲೇಔಟ್ ವಿಧಾನಸಭಾ ಕ್ಷೇತ್ರ
ಸುತ್ತು – 6
ಗೋಪಾಲಯ್ಯ (ಬಿಜೆಪಿ) – 28,742
ಕೇಶವಮೂರ್ತಿ (ಕಾಂಗ್ರೆಸ್) – 16,427
ಮುನ್ನಡೆ – ಗೋಪಾಲಯ್ಯ
ಅಂತರ – 12,315
ನರಗುಂದ ಮತಕ್ಷೇತ್ರ 7ನೇ ಸುತ್ತು
ಬಿಜೆಪಿ ಸಿಸಿ ಪಾಟೀಲ್ -30,460
ಕಾಂಗ್ರೆಸ್ ಬಿ.ಆರ್.ಯಾವಗಲ್-30,375
85 ಮತಗಳಿಂದ ಬಿಜೆಪಿ ಮುನ್ನಡೆ