ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election Results 2023) ಮೇ 10ರಂದು ನಡೆದಿದೆ. ಈ ಚುನಾವಣೆಯ ಫಲಿತಾಂಶದ (Karnataka Election Results) ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿದೆ. ಬಿಜೆಪಿ ಪ್ರತಿಪಕ್ಷವಾಗಿದೆ. ಜೆಡಿಎಸ್ ಈ ಸಲ ಕಿಂಗ್ ಮೇಕರ್ ಆಗುವ ಭಾಗ್ಯವನ್ನು ಕಳೆದುಕೊಂಡಿದೆ. ಈ ಸಲದ ಚುನಾವಣೆಯಲ್ಲಿ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆ ಕಾಣಿಸುತ್ತಿದೆ. ಇಂದು ಬೆಳಗ್ಗೆಯಿಂದ ನಡೆದ ಮತ ಎಣಿಕೆಯ ಸಮಗ್ರ ಮಾಹಿತಿ ಇಲ್ಲಿದೆ.
ಡಿ.ಕೆ.ಶಿವಕುಮಾರ್ ಮನೆಯಲ್ಲಿ ಸಂಭ್ರಮ
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದಲ್ಲಿ ಈಗಲೇ ಭರ್ಜರಿ ಸಂಭ್ರಮ ಶುರುವಾಗಿದೆ. ರಾಜ್ಯದ ಅನೇಕ ವಿಧಾನಸಭೆ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಮುನ್ನಡೆ ಸಾಧಿಸಿದ್ದು, ಬಹುಮತ ಬರುವ ಲಕ್ಷಣಗಳು ದಟ್ಟವಾಗಿ ಗೋಚರಿಸುತ್ತವೆ. ಹೀಗಾಗಿ ಈಗಾಗಲೇ ಡಿಕೆಶಿ ಮನೆಯಲ್ಲಿ ಕಾರ್ಯಕರ್ತರು ಸೇರಿದ್ದಾರೆ. ಸಿಹಿ ಹಂಚಿ ಸಂಭ್ರಮಿಸುತ್ತಿದ್ದಾರೆ.
ವರುಣದಲ್ಲಿ ಸಿದ್ದರಾಮಯ್ಯ ಮುನ್ನಡೆ
ಕಾಂಗ್ರೆಸ್‌ನ ಸಿದ್ದರಾಮಯ್ಯ – ,12759
ಬಿಜೆಪಿಯ ವಿ. ಸೋಮಣ್ಣ – 7471
ಕಾಂಗ್ರೆಸ್ 5,288 ಮುನ್ನಡೆ
ಕಾರ್ಕಳದಲ್ಲಿ ಬಿಜೆಪಿಯ ಸುನೀಲ್ ಕುಮಾರ್‌ಗೆ ಮುನ್ನಡೆ
ಸುನೀಲ್ ಕುಮಾರ್ ಪಡೆದ ಮತ- 35,808
ಕಾಂಗ್ರೆಸ್‌ನ ಉದಯ್ ಕುಮಾರ್ ಶೆಟ್ಟಿ ಪಡೆದ ಮತ- 33,164
ಮುನ್ನಡೆ- 2,644
ವಿಜಯಪುರ ಜಿಲ್ಲೆ ಯಾರಿಗೆ ಮುನ್ನಡೆ, ಯಾರಿಗೆ ಹಿನ್ನಡೆ?
ಮುದ್ದೇಬಿಹಾಳ – 6ನೇ ಸುತ್ತು – ಕಾಂಗ್ರೆಸ್ ಮುನ್ನಡೆ – 976
ದೇವರಹಿಪ್ಪರಗಿ – 7ನೇ ಸುತ್ತು – ಜೆಡಿಎಸ್ ಮುನ್ನಡೆ – 6596
ಬಸವನಬಾಗೇವಾಡಿ – 4ನೇ ಸುತ್ತು – ಜೆಡಿಎಸ್ ಮುನ್ನಡೆ – 288
ಬಬಲೇಶ್ವರ – 6ನೇ ಸುತ್ತು – ಕಾಂಗ್ರೆಸ್ ಮುನ್ನಡೆ – 6082
ವಿಜಯಪುರ ನಗರ – 3ನೇ ಸುತ್ತು – ಬಿಜೆಪಿ ಮುನ್ನಡೆ – 9948
ನಾಗಠಾಣ – 4ನೇ ಸುತ್ತು – ಕಾಂಗ್ರೆಸ್ ಮುನ್ನಡೆ – 8687
ಇಂಡಿ – 7ನೇ ಸುತ್ತು – ಕಾಂಗ್ರೆಸ್ ಮುನ್ನಡೆ – 6876
ಸಿಂದಗಿ – 7ನೇ ಸುತ್ತು – ಬಿಜೆಪಿ ಮುನ್ನಡೆ – 121
ಖರ್ಗೆ ವಿವಾಹ ವಾರ್ಷಿಕೋತ್ಸವ ಸಂಭ್ರಮ
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ ಅವರು ಸದಾಶಿವ ನಗರದಲ್ಲಿರುವ ತಮ್ಮ ಮನೆಯಲ್ಲಿ 58ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ.