ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election Results 2023) ಮೇ 10ರಂದು ನಡೆದಿದೆ. ಈ ಚುನಾವಣೆಯ ಫಲಿತಾಂಶದ (Karnataka Election Results) ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿದೆ. ಬಿಜೆಪಿ ಪ್ರತಿಪಕ್ಷವಾಗಿದೆ. ಜೆಡಿಎಸ್ ಈ ಸಲ ಕಿಂಗ್ ಮೇಕರ್ ಆಗುವ ಭಾಗ್ಯವನ್ನು ಕಳೆದುಕೊಂಡಿದೆ. ಈ ಸಲದ ಚುನಾವಣೆಯಲ್ಲಿ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆ ಕಾಣಿಸುತ್ತಿದೆ. ಇಂದು ಬೆಳಗ್ಗೆಯಿಂದ ನಡೆದ ಮತ ಎಣಿಕೆಯ ಸಮಗ್ರ ಮಾಹಿತಿ ಇಲ್ಲಿದೆ.
ಚಿತ್ರದುರ್ಗದಲ್ಲಿ ಕೈ ಅಭ್ಯರ್ಥಿ ಮುನ್ನಡೆ ಸಾಧಿಸಿದ ವಿಷಯ ತಿಳಿದ ವ್ಯಕ್ತಿಗೆ ಹೃದಯಾಘಾತ
ಹೃದಯಾಘಾತದಿಂದ ಮೃತಪಟ್ಟ ಈರಣ್ಣ
ಹಿರಿಯೂರಿನ ಆಲಮರದಹಟ್ಟಿ ಗ್ರಾಮದ ಈರಣ್ಣ
ಐದು ಸಾವಿರ ಮತಗಳ ಅಂತರದಿಂದ ಹಿನ್ನಡೆ ಸಾಧಿಸಿರುವ ಕೆ ಪೂರ್ಣಿಮಾ
ಬಿಜೆಪಿ ಅಭ್ಯರ್ಥಿ ಕೆ ಪೂರ್ಣಿಮಾ ಶ್ರೀನಿವಾಸ್
ಹಿರಿಯೂರು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಕೆ ಪೂರ್ಣಿಮಾ ಶ್ರೀನಿವಾಸ್
ಕೈ ಅಭ್ಯರ್ಥಿ ಹಾಗೂ ಬಿಜೆಪಿ ಅಭ್ಯರ್ಥಿ ನಡುವೆ ಜಿದ್ದಾಜಿದ್ದಿ
ಕೈ ಅಭ್ಯರ್ಥಿ ಮುನ್ನಡೆ ಸಾಧಿಸಿದ ವಿಷಯ ತಿಳಿದ ವ್ಯಕ್ತಿಗೆ ಹೃದಯಾಘಾತ
ಚನ್ನಪಟ್ಟಣದಲ್ಲಿ ಎಚ್.ಡಿ.ಕುಮಾರಸ್ವಾಮಿಗೆ ಮುನ್ನಡೆ
ಬಿಜೆಪಿ ಸಿ.ಪಿ.ಯೋಗೇಶ್ವರ್-17,591
ಜೆಡಿಎಸ್ ಎಚ್.ಡಿ.ಕುಮಾರಸ್ವಾಮಿ-19, 398
1,807ಮತಗಳ ಮುನ್ನಡೆ
ಕೊರಟಗೆರೆಯಲ್ಲಿ ಜಿ.ಪರಮೇಶ್ವರ್ಗೆ ಮುನ್ನಡೆ
ತುಮಕೂರಿನ ಕೊರಟಗೆರೆ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಡಿಸಿಎಂ ಜಿ.ಪರಮೇಶ್ವರ್ ಅವರು 13152 ಮತಗಳಿಂದ ಮುನ್ನಡೆ ಸಾಧಿಸಿದ್ದಾರೆ. ಜೆಡಿಎಸ್ನ ಸುಧಾಕರ್ ಲಾಲ್ 9615, ಬಿಜೆಪಿಯ ಬಿಎಚ್ ಅನಿಲ್ ಕುಮಾರ್ 4511 ಮತಗಳನ್ನು ಪಡೆದಿದ್ದಾರೆ.
4ನೇ ಸುತ್ತಿನಲ್ಲೂ ಎಂ.ಬಿ. ಪಾಟೀಲ್‌ಗೆ ಮುನ್ನಡೆ
ವಿಜಯಪುರ ಜಿಲ್ಲೆಯ ಹೈವೋಲ್ಟೇಜ್ ಮತಕ್ಷೇತ್ರ ಬಬಲೇಶ್ವರ
ಕೆಪಿಸಿಸಿ ಪ್ರಚಾರ ಸಮೀತಿ ಅಧ್ಯಕ್ಷ ಎಂ.ಬಿ.ಪಾಟೀಲ್‌ಗೆ 20,746 ಮತ
ಬಿಜೆಪಿ ಪಕ್ಷದ ಅಭ್ಯರ್ಥಿ ವಿಜಯಗೌಡ ಪಾಟೀಲ್‌ಗೆ 16,873 ಮತ
4ನೇ ಸುತ್ತಿನಲ್ಲಿ 3,873 ಮತಗಳ ಮುನ್ನಡೆ ಸಾಧಿಸಿದ ಎಂ.ಬಿ.ಪಾಟೀಲ್
ರಾಮನಗರ ವಿಧಾನಸಭಾ ಕ್ಷೇತ್ರ
ರಾಮನಗರ ವಿಧಾನಸಭಾ ಕ್ಷೇತ್ರದಲ್ಲಿ 7ನೇ ಸುತ್ತಿನ ಮತ ಎಣಿಕೆ ಮುಕ್ತಾಯವಾಗಿದ್ದು, ನಿಖಿಲ್ ಕುಮಾರಸ್ವಾಮಿ 25,921 ಮತಗಳನ್ನು ಪಡೆದು ಹಿನ್ನಡೆಯಲ್ಲಿದ್ದಾರೆ. ಕಾಂಗ್ರೆಸ್ನ ಇಕ್ಬಾಲ್ ಹುಸೇನ್-30,029ಮತಗಳಿಂದ ಮುಂದಿದ್ದಾರೆ ಮತ್ತು ಬಿಜೆಪಿಯ ಗೌತಮ್ ಗೌಡಗೆ ಕೇವಲ 4435 ಮತಗಳು ಬಿದ್ದಿವೆ.