Site icon Vistara News

Karnataka Election Results Live Updates: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ; ಡಬಲ್​ ಎಂಜಿನ್​​ನ ಕೊಂಡಿ ಕಳಚಿದ ‘ಕೈ’

election result live

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election Results 2023) ಮೇ 10ರಂದು ನಡೆದಿದೆ. ಈ ಚುನಾವಣೆಯ ಫಲಿತಾಂಶದ (Karnataka Election Results) ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಕಾಂಗ್ರೆಸ್​ ಸ್ಪಷ್ಟ ಬಹುಮತಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿದೆ. ಬಿಜೆಪಿ ಪ್ರತಿಪಕ್ಷವಾಗಿದೆ. ಜೆಡಿಎಸ್​ ಈ ಸಲ ಕಿಂಗ್​ ಮೇಕರ್ ಆಗುವ ಭಾಗ್ಯವನ್ನು ಕಳೆದುಕೊಂಡಿದೆ. ಈ ಸಲದ ಚುನಾವಣೆಯಲ್ಲಿ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆ ಕಾಣಿಸುತ್ತಿದೆ. ಇಂದು ಬೆಳಗ್ಗೆಯಿಂದ ನಡೆದ ಮತ ಎಣಿಕೆಯ ಸಮಗ್ರ ಮಾಹಿತಿ ಇಲ್ಲಿದೆ.

Lakshmi Hegde

ರೇಣುಕಾಚಾರ್ಯ ನೋವಿನ ಪೋಸ್ಟ್​

ದಾವಣಗೆರೆಯ ಹೊನ್ನಾಳಿ ಕ್ಷೇತ್ರದಲ್ಲಿ ಸೋತ ಬಿಜೆಪಿ ಅಭ್ಯರ್ಥಿ ಎಂ.ಪಿ.ರೇಣುಕಾಚಾರ್ಯ ಅವರು ನೋವಿನಿಂದ ಫೇಸ್‌ಬುಕ್‌ ಪೋಸ್ಟ್ ಹಾಕಿದ್ದಾರೆ. ನನ್ನ ಗೆಲುವಿಗಾಗಿ ಹಗಲಿರುಳು ಶ್ರಮಿಸಿದ ನಮ್ಮ ಪಕ್ಷದ ಅಧ್ಯಕ್ಷರು, ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರುಗಳಿಗೆ ಧನ್ಯವಾದಗಳು. ಕೋವಿಡ್ ಸಂಧರ್ಭದಲ್ಲಿ ಕ್ಷೇತ್ರದ ಜನತೆಗಾಗಿ ಪ್ರಾಣ ಒತ್ತೆ ಇಟ್ಟು ಮಾಡಿರುವ ಜನಸೇವೆಗೆ ಹಾಗೂ ಕ್ಷೇತ್ರದ ಅಭಿವೃದ್ಧಿಗೆ ಹಗಲಿರುಳು ಶ್ರಮಿಸಿದ ನನ್ನ ನಿಸ್ವಾರ್ಥ ಜನಸೇವೆಗೆ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಜನತೆ ನೀಡಿವ ಜನಾದೇಶಕ್ಕೆ ತಲೆಬಾಗುವೆ.

Lakshmi Hegde

ಕೊಪ್ಪಳ ಜಿಲ್ಲೆಯ 5ಕ್ಷೇತ್ರಗಳ ಫಲಿತಾಂಶ

ಕೊಪ್ಪಳ ಜಿಲ್ಲೆಯ ಐದೂ ವಿಧಾನಸಭಾ ಕ್ಷೇತ್ರಗಳ ಅಂತಿಮ ಫಲಿತಾಂಶ

ಗಂಗಾವತಿ ಕ್ಷೇತ್ರದಲ್ಲಿ ಕೆಆರ್​ಪಿಪಿಯ ಗಾಲಿ ಜನಾರ್ದನ ರೆಡ್ಡಿ ಗೆಲುವು

ಗಾಲಿ ಜನಾರ್ದನರೆಡ್ಡಿ -66213

ಇಕ್ಬಾಲ್ ಅನ್ಸಾರಿ (ಕಾಂಗ್ರೆಸ್) -57941

ಪರಣ್ಣ ಮುನವಳ್ಳಿ (ಬಿಜೆಪಿ) -29160

ಗೆಲುವಿನ ಅಂತರ:- 8266

ಕನಕಗಿರಿ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಶಿವರಾಜ ತಂಗಡಗಿ ಗೆಲುವು

ಶಿವರಾಜ ತಂಗಡಗಿ (ಕಾಂಗ್ರೆಸ್) 105491

ಬಸವರಾಜ ದಡೇಸೂಗೂರು (ಬಿಜೆಪಿ) 63214

ಗೆಲುವಿನ ಅಂತರ: 42277

ಕೊಪ್ಪಳ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ. ರಾಘವೇಂದ್ರ ಹಿಟ್ನಾಳ್ ಗೆಲುವು

ಕೆ. ರಾಘವೇಂದ್ರ ಹಿಟ್ನಾಳ್ – 90430

ಮಂಜುಳಾ ಕರಡಿ (ಬಿಜೆಪಿ) – 54170

ಸಿವಿ ಚಂದ್ರಶೇಖರ್ (ಜೆಡಿಎಸ್) – 45061

ಗೆಲುವಿನ ಅಂತರ : 36260

ಯಲಬುರ್ಗಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಬಸವರಾಜ ರಾಯರಡ್ಡಿ ಗೆಲುವು

ಬಸವರಾಜ ರಾಯರಡ್ಡಿ – 94,330

ಹಾಲಪ್ಪ ಬಸಪ್ಪ ಆಚಾರ (ಬಿಜೆಪಿ) 77,149

ಗೆಲುವಿನ ಅಂತರ: 17,181

ಕುಷ್ಟಗಿ ಕ್ಷೇತ್ರದಲ್ಲಿ ಅಭ್ಯರ್ಥಿ ದೊಡ್ಡನಗೌಡ ಪಾಟೀಲ್ ಗೆಲುವು

ದೊಡ್ಡನಗೌಡ ಪಾಟೀಲ್ (ಬಿಜೆಪಿ) – 92915

ಅಮರೇಗೌಡ ಪಾಟೀಲ್ ಬಯ್ಯಾಪುರ (ಕಾಂಗ್ರೆಸ್) – 83269

ಗೆಲುವಿನ ಅಂತರ 9646

Lakshmi Hegde

ಪುತ್ತೂರಿನ ಅರುಣ್​ ಪುತ್ತಿಲ ಪ್ರತಿಕ್ರಿಯೆ

ಮಂಗಳೂರು:ಪುತ್ತೂರಿನಲ್ಲಿ ಪಕ್ಷೇತರವಾಗಿ ಸ್ಪರ್ಧಿಸಿ, ತೀವ್ರ ಪೈಪೋಟಿ ಕೊಟ್ಟು ಸೋತ ಅರುಣ್ ಪುತ್ತಿಲ ಅವರು ಮಾಧ್ಯಮಗಳೊಂದಿಗೆ ಮಾತನಾಡಿದ್ದಾರೆ. ‘ಚುನಾವಣೆ ಏನು ಎಂಬುದನ್ನು ಕಾರ್ಯಕರ್ತರು ತೋರಿಸಿಕೊಟ್ಟಿದ್ದಾರೆ. ಯಾವುದೇ ಪ್ರತಿಫಲಾಪೇಕ್ಷೆ ಇಲ್ಲದೆ ಬೂತ್​ ಮಟ್ಟದಲ್ಲಿ ಕೆಲಸ ಮಾಡಿದ್ದಾರೆ. ಹಿಂದುತ್ವ, ರಾಷ್ಟ್ರೀಯತೆ ನಿಲುವಿನೊಂದಿಗೆ ನಮ್ಮ ಹೋರಾಟ ಮುಂದುವರಿಯುತ್ತದೆ.ಮುಂದಿನ ನಿರ್ಧಾರ ಏನು ಎಂಬುದನ್ನು ಇನ್ನು ಒಂದು ವಾರದಲ್ಲಿ ತೆಗೆದುಕೊಳ್ಳುತ್ತೇವೆ ಎಂದು ಹೇಳಿದ್ದಾರೆ.

Lakshmi Hegde

ಚಿಕ್ಕಬಳ್ಳಾಪುರದಲ್ಲಿ ಸಚಿವನನ್ನು ಸೋಲಿಸಿದ ಪ್ರದೀಪ್ ಈಶ್ವರ್ ಅಬ್ಬರ

ಚಿಕ್ಕಬಳ್ಳಾಪುರದಲ್ಲಿ ಕೆ.ಸುಧಾಕರ್​ ಅವರನ್ನು ಸೋಲಿಸಿ, ಪ್ರಭಾವಿ ನಾಯಕ ಎನ್ನಿಸಿದ ಪತ್ರಕರ್ತ ಪ್ರದೀಪ್ ಈಶ್ವರ್​ ಅವರು ಅಲ್ಲಿ ಭರ್ಜರಿ ರೋಡ್ ಶೋ ನಡೆಸಿದ್ದಾರೆ. ಶಿಡ್ಲಘಟ್ಟ ನಗರದ ಅಂಬೇಡ್ಕರ್​ ವೃತ್ತದಲ್ಲಿ ಸಾವಿರಾರು ಯುವಕರು ಪ್ರದೀಪ್​ ಪರ ಹರ್ಷೋದ್ಘಾರ ಮಾಡಿದ್ದಾರೆ. ಜನ ಕಿಕ್ಕಿರಿದು ತುಂಬಿ, ಪ್ರದೀಪ್​ ಈಶ್ವರ್​ ಗೆಲುವನ್ನು ಸಂಭ್ರಮಿಸಿದ್ದಾರೆ. ಇನ್ನೊಂದೆಡೆ ಸಚಿವ ಕೆ.ಸುಧಾಕರ್​ ಮಾಧ್ಯಮಕ್ಕೆ ಕೂಡ ಪ್ರತಿಕ್ರಿಯೆ ನೀಡಿಲ್ಲ. ಬೆಳಗ್ಗೆಯಿಂದಲೂ ಕಾಣಿಸಿಕೊಂಡಿಲ್ಲ.

Lakshmi Hegde

ಶಿವಮೊಗ್ಗ ಜಿಲ್ಲೆಯ ಫಲಿತಾಂಶ

ಶಿವಮೊಗ್ಗ ಗ್ರಾಮಾಂತರ

ಶಾರದಾ ಪೂರ್ಯ ನಾಯ್ಕ – ಜೆಡಿಎಸ್ – 86340

ಕೆ.ಬಿ.ಅಶೋಕ್ ನಾಯ್ಕ್ – ಬಿಜೆಪಿ – 71198

ಅಂತರ – 15142

ಭದ್ರಾವತಿ

ಬಿ.ಕೆ. ಸಂಗಮೇಶ್ವರ – ಕಾಂಗ್ರೆಸ್ – 65883

ಶಾರದಾ ಅಪ್ಪಾಜಿ ಗೌಡ – ಜೆಡಿಎಸ್ – 63298

ಅಂತರ – 2585

ಶಿವಮೊಗ್ಗ

ಚನ್ನಬಸಪ್ಪ – ಬಿಜೆಪಿ – 95399

ಎಚ್.ಸಿ. ಯೋಗೀಶ್ – ಕಾಂಗ್ರೆಸ್ – 68071

ಅಂತರ – 27328

ತೀರ್ಥಹಳ್ಳಿ

ಆರಗ ಜ್ಞಾನೇಂದ್ರ – ಬಿಜೆಪಿ – 84563

ಕಿಮ್ಮನೆ ರತ್ನಾಕರ್ – ಕಾಂಗ್ರೆಸ್ – 72322

ಅಂತರ – 12241

ಶಿಕಾರಿಪುರ

ಬಿ.ವೈ.ವಿಜಯೇಂದ್ರ – ಬಿಜೆಪಿ – 81810

ನಾಗರಾಜ್ ಗೌಡ – ಪಕ್ಷೇತರ – 70802

ಅಂತರ – 11008

ಸೊರಬ

ಮಧು ಬಂಗಾರಪ್ಪ – ಕಾಂಗ್ರೆಸ್ – 98912

ಕುಮಾರ್ ಬಂಗಾರಪ್ಪ – ಬಿಜೆಪಿ – 54650

ಅಂತರ – 44262

ಸಾಗರ

ಬೇಳೂರು ಗೋಪಾಲಕೃಷ್ಣ – ಕಾಂಗ್ರೆಸ್ – 88179

ಹರತಾಳು ಹಾಲಪ್ಪ – ಬಿಜೆಪಿ – 72263

ಅಂತರ – 15916

Exit mobile version