ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election Results 2023) ಮೇ 10ರಂದು ನಡೆದಿದೆ. ಈ ಚುನಾವಣೆಯ ಫಲಿತಾಂಶದ (Karnataka Election Results) ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿದೆ. ಬಿಜೆಪಿ ಪ್ರತಿಪಕ್ಷವಾಗಿದೆ. ಜೆಡಿಎಸ್ ಈ ಸಲ ಕಿಂಗ್ ಮೇಕರ್ ಆಗುವ ಭಾಗ್ಯವನ್ನು ಕಳೆದುಕೊಂಡಿದೆ. ಈ ಸಲದ ಚುನಾವಣೆಯಲ್ಲಿ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆ ಕಾಣಿಸುತ್ತಿದೆ. ಇಂದು ಬೆಳಗ್ಗೆಯಿಂದ ನಡೆದ ಮತ ಎಣಿಕೆಯ ಸಮಗ್ರ ಮಾಹಿತಿ ಇಲ್ಲಿದೆ.
ಕಲಬುರಗಿ ಜಿಲ್ಲೆಯಲ್ಲಿ ಯಾರಿಗೆ ಮುನ್ನಡೆ? ಯಾರಿಗೆ ಹಿನ್ನಡೆ?
ಆಳಂದ
ಬಿಜೆಪಿ ಸುಭಾಷ್ ಗುತ್ತೇದಾರ್ ಮುನ್ನಡೆ
ಕಾಂಗ್ರೆಸ್ ಅಭ್ಯರ್ಥಿ – ಬಿಆರ್ ಪಾಟೀಲ್ ಹಿನ್ನಡೆ
ಚಿತ್ತಾಪುರ
ಕಾಂಗ್ರೆಸ್ ಅಭ್ಯರ್ಥಿ – ಪ್ರಿಯಾಂಕ್ ಖರ್ಗೆ ಮುನ್ನಡೆ
ಬಿಜೆಪಿ ಅಭ್ಯರ್ಥಿ – ಮಣಿಕಂಠ ರಾಠೋಡ್ ಹಿನ್ನಡೆ
ಚಿಂಚೋಳಿ
ಬಿಜೆಪಿ ಅಭ್ಯರ್ಥಿ ಅವಿನಾಶ್ ಜಾಧವ್ ಮುನ್ನಡೆ
ಕಾಂಗ್ರೆಸ್ ಅಭ್ಯರ್ಥಿ – ಸುಭಾಷ್ ರಾಠೋಡ್ ಗೆ ಹಿನ್ನಡೆ
ಜೇವರ್ಗಿ
ಕಾಂಗ್ರೆಸ್ ಅಭ್ಯರ್ಥಿ ಡಾ. ಅಜಯಸಿಂಗ್ ಮುನ್ನಡೆ
ಜೆಡಿಎಸ್ ಅಭ್ಯರ್ಥಿ ದೊಡ್ಡಪ್ಪಗೌಡ ಪಾಟೀಲ್ ಹಿನ್ನಡೆ
ಅಫಜಲಪುರ
ಪಕ್ಷೇತರ ಅಭ್ಯರ್ಥಿ – ನೀತಿನ್ ಗುತ್ತೇದಾರ್ ಮುನ್ನಡೆ
ಬಿಜೆಪಿ ಅಭ್ಯರ್ಥಿ- ಮಾಲಿಕಯ್ಯ ಗುತ್ತೇದಾರ್ ಗೆ ಹಿನ್ನಡೆ
ಸೇಡಂ
ಕಾಂಗ್ರೆಸ್ ಅಭ್ಯರ್ಥಿ – ಡಾ. ಶರಣಪ್ರಕಾಶ್ ಪಾಟೀಲ್ ಮುನ್ನಡೆ
ಬಿಜೆಪಿ ಅಭ್ಯರ್ಥಿ ರಾಜಕುಮಾರ್ ತೇಲ್ಕೂರ್ ಹಿನ್ನಡೆ
ಕಲಬುರಗಿ ಉತ್ತರ
ಬಿಜೆಪಿ ಅಭ್ಯರ್ಥಿ ಚಂದು ಪಾಟೀಲ್ ಮುನ್ನಡೆ
ಕಾಂಗ್ರೆಸ್ ಅಭ್ಯರ್ಥಿ ಖನಿಜಾ ಫಾತಿಮಾಗೆ ಹಿನ್ನಡೆ
ಕಲಬುರಗಿ ಗ್ರಾಮೀಣ
ಬಿಜೆಪಿ ಅಭ್ಯರ್ಥಿ ಬಸವರಾಜ್ ಮತ್ತಿಮೂಡ್ ಮುನ್ನಡೆ
ಕಾಂಗ್ರೆಸ್ ಅಭ್ಯರ್ಥಿ ರೇವು ನಾಯಕ ಬೆಳಮಗಿಗೆ ಹಿನ್ನಡೆ
ಕಲಬುರಗಿ ದಕ್ಷಿಣ
ಕಾಂಗ್ರೆಸ್ ಅಭ್ಯರ್ಥಿ ಅಲ್ಲಂ ಪ್ರಭು ಪಾಟೀಲ್ ಗೆ ಮುನ್ನಡೆ
ಬಿಜೆಪಿ ಅಭ್ಯರ್ಥಿ – ದತ್ತಾತ್ರೇಯ ಪಾಟೀಲ್ ರೇವೂರ್ ಗೆ ಹಿನ್ನಡೆ
ಶಿರಾದಲ್ಲಿ ಮಾಜಿ ಸಚಿವ ಜಯಚಂದ್ರ ಭಾರಿ ಮುನ್ನಡೆ
ಟಿ.ಬಿ ಜಯಚಂದ್ರ 6,493 ಮತಗಳ ಮುನ್ನಡೆ.
ಟಿ.ಬಿ.ಜಯಚಂದ್ರ – ಕಾಂಗ್ರೆಸ್ 21,798
ಉಗ್ರೇಶ್ – ಜೆಡಿಎಸ್- 15,305
ರಾಜೇಶ್ – ಬಿಜೆಪಿ 8,611
ಸೋಮಣ್ಣ ಔಟ್!
ಮೈಸೂರಿನ ಹೈವೋಲ್ಟೇಜ್ ಕ್ಷೇತ್ರ ವರುಣಾದಲ್ಲಿ ಸಿದ್ದರಾಮಯ್ಯ ಭರ್ಜರಿ ಮುನ್ನಡೆ ಸಾಧಿಸಿದ್ದಾರೆ. ವಿ.ಸೋಮಣ್ಣಗೆ ಅಲ್ಲಿ ಸೋಲಿನ ಸುಳಿವು ಕಾಣಿಸುತ್ತಿದೆ. ಹೀಗಾಗಿ ಕೌಂಟಿಂಗ್ ಕೇಂದ್ರದಿಂದ ಸೋಮಣ್ಣನವರು ಹೊರಗೆ ನಡೆದಿದ್ದಾರೆ. ಇಷ್ಟು ಹೊತ್ತು ತಮ್ಮ ನಿವಾಸದಲ್ಲಿ ಇದ್ದ ಸಿದ್ದರಾಮಯ್ಯ ಈಗ ವರುಣಾ ಕೌಂಟಿಂಗ್ ಕೇಂದ್ರದತ್ತ ಹೋಗುತ್ತಿದ್ದಾರೆ.
ನಾಳೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
ಬೆಂಗಳೂರಿನ ಖಾಸಗಿ ಹೋಟೆಲ್ನಲ್ಲಿ ಮೇ 14ರಂದು ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿ ಸಭೆ ನಡೆಯಲಿದೆ. ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸುರ್ಜೇವಾಲಾ, ವೇಣುಗೋಪಾಲ್ ಮತ್ತಿತರರು ಇದ್ದಾರೆ.
ಚನ್ನಪಟ್ಟಣದಲ್ಲಿ ಎಚ್‌ಡಿ ಕುಮಾರಸ್ವಾಮಿ ಮುನ್ನಡೆ
ಎಚ್‌ಡಿಕೆ – 14,400
ಸಿಪಿ ಯೋಗೇಶ್ವರ್ – 13,074
1,326 ಮತಗಳಿಂದ ಎಚ್‌ಡಿಕೆಗೆ ಮುನ್ನಡೆ