ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆ (Karnataka Election Results 2023) ಮೇ 10ರಂದು ನಡೆದಿದೆ. ಈ ಚುನಾವಣೆಯ ಫಲಿತಾಂಶದ (Karnataka Election Results) ಕುತೂಹಲಕ್ಕೆ ಇಂದು ತೆರೆ ಬಿದ್ದಿದೆ. ಕಾಂಗ್ರೆಸ್ ಸ್ಪಷ್ಟ ಬಹುಮತಗಳನ್ನು ಗೆದ್ದಿದ್ದು, ಸರ್ಕಾರ ರಚನೆಗೆ ತುದಿಗಾಲಲ್ಲಿ ನಿಂತಿದೆ. ಬಿಜೆಪಿ ಪ್ರತಿಪಕ್ಷವಾಗಿದೆ. ಜೆಡಿಎಸ್ ಈ ಸಲ ಕಿಂಗ್ ಮೇಕರ್ ಆಗುವ ಭಾಗ್ಯವನ್ನು ಕಳೆದುಕೊಂಡಿದೆ. ಈ ಸಲದ ಚುನಾವಣೆಯಲ್ಲಿ ಸ್ಪಷ್ಟವಾಗಿ ಆಡಳಿತ ವಿರೋಧಿ ಅಲೆ ಕಾಣಿಸುತ್ತಿದೆ. ಇಂದು ಬೆಳಗ್ಗೆಯಿಂದ ನಡೆದ ಮತ ಎಣಿಕೆಯ ಸಮಗ್ರ ಮಾಹಿತಿ ಇಲ್ಲಿದೆ.
ಮೈಸೂರು -ಎಚ್.ಡಿ.ಕೋಟೆ
ಕಾಂಗ್ರೆಸ್- 4179 ಮತಗಳು
ಬಿಜೆಪಿ- 2707 ಮತಗಳು
ಜೆಡಿಎಸ್- 2586 ಮತಗಳು
ಬಿಜೆಪಿ ಅಭ್ಯರ್ಥಿ ಶ್ರೀಂಮತ ಪಾಟೀಲ 3833 ಮತಗಳು
ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ 4089 ಮತಗಳು
ಬೆಳಗಾವಿ ಕಾಗವಾಡ ಕಾಂಗ್ರೆಸ್ ಅಭ್ಯರ್ಥಿ ರಾಜು ಕಾಗೆ 256 ಮತಗಳಿಂದ ಮುನ್ನಡೆ
ಮದ್ದೂರು ಕ್ಷೇತ್ರ
ಕಾಂಗ್ರೆಸ್ (ಉದಯ್) – 3431
ಜೆಡಿಎಸ್ (ತಮ್ಮಣ್ಣ) – 3602
ಬಿಜೆಪಿ (ಸ್ವಾಮಿ) – 884
ಮುನ್ನಡೆ – ಜೆಡಿಎಸ್ ತಮ್ಮಣ್ಣ 171 ಮತಗಳ ಮುನ್ನಡೆ
ಸುಧಾಕರ್ ಸೇರಿ ಏಳು ಸಚಿವರಿಗೆ ಹಿನ್ನಡೆ
ಎಸ್.ಟಿ.ಸೋಮಶೇಖರ್, ಗೋವಿಂದ ಕಾರಜೋಳ, ವಿ. ಸೋಮಣ್ಣ, ಶ್ರೀರಾಮುಲು, ಸುಧಾಕರ್ ಸೇರಿ ಏಳು ಸಚಿವರಿಗೆ ಹಿನ್ನಡೆ
ಅಥಣಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್ ಸವದಿಗೆ, ಬಿಜೆಪಿಯ ಮಹೇಶ್ ಕುಮುಟಳ್ಳಿ ವಿರುದ್ಧ 2900ಕ್ಕೂ ಹೆಚ್ಚುಮತಗಳಿಂದ ಮುನ್ನಡೆ..