ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಮತದಾನ
ಮೈಸೂರಿನ್ಲಿ ಕುವೆಂಪುನಗರದ ಜ್ಞಾನಂಗಂಗಾ (ಮತಗಟ್ಟೆ ಸಂಖ್ಯೆ 26)ಶಾಲೆಯಲ್ಲಿ ಸರತಿ ಸಾಲಿನಲ್ಲಿ ನಿಂತು 2023ರ ಚುನಾವಣಾ ರಾಯಬಾರಿ ಜಾವಗಲ್ ಶ್ರೀನಾಥ್ ಅವರು ಮತದಾನ ಮಾಡಿದ್ದಾರೆ.
ರಾಜ್ಯದಲ್ಲಿ ಶೇ. 20.99 ರಷ್ಟು ಮತದಾನ
ಮತದಾನ ಆರಂಭಗೊಂಡ ನಾಲ್ಕು ಗಂಟೆಗಳಲ್ಲಿ ರಾಜ್ಯದಲ್ಲಿ ಶೇ. 20.99 ರಷ್ಟು ಮತದಾನವಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ಕುಂದಾಪುರದಲ್ಲಿ ಶೇ. 32.14 ರಷ್ಟು ಮತದಾನವಾಗಿದ್ದರೆ ಕೊಳ್ಳೆಗಾಲದಲ್ಲಿ ಇನ್ನೂ ಶೇ.9.3 ರಷ್ಟು ಮತದಾನವಾಗಿದೆ.
ಎಚ್‌ಡಿಕೆ ಮತದಾನ
ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿ ಗ್ರಾಮದಲ್ಲಿ ಮಾಜಿ ಸಿಎಂ ಹೆಚ್ ಡಿ ಕುಮಾರಸ್ವಾಮಿ ಮತದಾನ ಮಾಡಿದ್ದಾರೆ.
ಶಾಸಕಿ ಅನಿತಾ ಕುಮಾರಸ್ವಾಮಿ, ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ರೇವತಿ ನಿಖಿಲ್ ಕೂಡ ಕುಮಾರಸ್ವಾಮಿಯವರೊಂದಿಗೆ ಮತದಾನ ಮಾಡಿದ್ದಾರೆ.
ಮದುಮಗಳ ಮತದಾನ
ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ವಿಧಾನಸಭಾ ಕ್ಷೇತ್ರದ, ಮಾಕೋನಹಳ್ಳಿಯಲ್ಲಿನ ಮತಗಟ್ಟೆ ಯಲ್ಲಿ ಮದುಮಗಳು ಮತದಾನ ಮಾಡಿದ್ದಾಳೆ.
ಇಂದು ಚಿಕ್ಕಮಗಳೂರು ಜಿಲ್ಲೆಯ, ಮೂಡಿಗೆರೆ ವಿಧಾನಸಭಾ ಕ್ಷೇತ್ರದ, ಮಾಕೋನಹಳ್ಳಿಯಲ್ಲಿನ ಮತಗಟ್ಟೆ 165 ರಲ್ಲಿ ಮದುಮಗಳೊಬ್ಬಳು ತನ್ನ ಕರ್ತವ್ಯ ಮರೆಯದೇ ಬಂದು ವೋಟ್ ಮಾಡಿ ಎಲ್ಲರಿಗೂ ಮಾದರಿಯಾಗುವಂತೆ ನಡೆದುಕೊಂಡಿದ್ದಾಳೆ.@SpokespersonECI @ECISVEEP @ZP_Chikmagalur #KarnatakaAssemblyElection2023 pic.twitter.com/mEo1uci214
— Chief Electoral Officer, Karnataka (@ceo_karnataka) May 10, 2023
ವಿವಿ ಪ್ಯಾಟ್ ನಲ್ಲಿ ದೋಷ
ಸವದತ್ತಿ ಕ್ಷೇತ್ರದ ಚಿಕ್ಕ ಉಳ್ಳಿಗೇರಿ ಗ್ರಾಮದ ಮತಗಟ್ಟೆಯ ವಿವಿ ಪ್ಯಾಟ್ ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
ಇದನ್ನು ರಿಪೇರಿ ಮಾಡಲು ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಕಳೆದ ಅರ್ಧಗಂಟೆಯಿಂದ ತಾತ್ಕಾಲಿಕವಾಗಿ ಮತದಾನ ಸ್ಥಗಿತಗೊಂಡಿದೆ.