ಉಡುಪಿ ಜಿಲ್ಲೆಯಲ್ಲಿ ಶೇ. 13.28 ರಷ್ಟು ಮತದಾನ
ಉಡುಪಿ ಜಿಲ್ಲೆಯಲ್ಲಿ ಬೆಳಿಗ್ಗೆ 9 ಗಂಟೆಯವರೆಗೆ ಶೇ. 13.28 ರಷ್ಟು ಮತದಾನವಾಗಿದೆ.
ಉಡುಪಿ _13.45% ಕಾಪು _13.82% ಕುಂದಾಪುರ _14.17% ಬೈಂದೂರು _10.81% ಕಾರ್ಕಳ _14.61%
ಒಟ್ಟು 13.28 % ಮತದಾನವಾಗಿದೆ
ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
ಉಡುಪಿ: ಚಿತ್ರನಟ ರಕ್ಷಿತ್ ಶೆಟ್ಟಿ ಅವರು ಉಡುಪಿಯ ವಿಧಾನಸಭಾ ಕ್ಷೇತ್ರದ ಕುಕ್ಕಿಕಟ್ಟೆ ಶಾಲೆಯಲ್ಲಿ ಮತದಾನ ಮಾಡಿದರು. ತಂದೆ ಶ್ರೀಧರ್ ಶೆಟ್ಟಿ, ತಾಯಿ ರಂಜನಾ ಶೆಟ್ಟಿ, ಸಹೋದರ ರಂಜಿತ್ ಶೆಟ್ಟಿ ಜತೆ ಬಂದು ಮತ ಚಲಾಯಿಸಿದ್ದಾರೆ. ಬೆಂಗಳೂರಲ್ಲಿ ಇದ್ದ ರಕ್ಷಿತ್ ಶೆಟ್ಟಿ ಮತದಾನ ಮಾಡಲೆಂದು ತನ್ನ ಊರಿಗೆ ಬಂದಿದ್ದರು. ಅಂದಹಾಗೇ, ರಕ್ಷಿತ್ ಶೆಟ್ಟಿ ಅವರು ಇಂದು ಅಮೆರಿಕಕ್ಕೆ ತೆರಳಲಿದ್ದಾರೆ.
ಮಸ್ಕಿಯಲ್ಲಿ ಬಿಜೆಪಿ-ಕಾಂಗ್ರೆಸ್ ಜಗಳ
ರಾಯಚೂರು: ಇಲ್ಲಿನ ಮಸ್ಕಿ ವಿಧಾನಸಭಾ ಕ್ಷೇತ್ರದ ಹರ್ವಾಪುರದಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ನಡುವೆ ಜಗಳ ನಡೆದಿದೆ. ಇಲ್ಲಿ ಕಮಲ ಚಿಹ್ನೆ ಇರುವ ಮತಚೀಟಿಗಳನ್ನು ಕೊಡುತ್ತಿದ್ದರು ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಆಕ್ಷೇಪ ವ್ಯಕ್ತಪಡಿಸಿದರು. ಅದೇ ದೊಡ್ಡದಾಗಿ ಜಗಳ ಶುರುವಾಗಿದೆ. ಬಳಿಕ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರು ಕೈಕೈ ಮಿಲಾಯಿಸಿಕೊಂಡಿದ್ದಾರೆ. ಪೊಲೀಸರು ಮಧ್ಯಪ್ರವೇಶ ಮಾಡಿ, ಪರಿಸ್ಥಿತಿ ತಿಳಿಗೊಳಿಸಿದ್ದಾರೆ. .
ಬಿಜೆಪಿ-ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿ
ಬಳ್ಳಾರಿ: ಇಲ್ಲಿನ ಗ್ರಾಮಾಂತರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ಕಾರ್ಯಕರ್ತರ ನಡುವೆ ಮಾರಾಮಾರಿಯಅಗಿದೆ. ಸಂಜೀವರಾಯನಕೋಟೆ ಗ್ರಾಮದಲ್ಲಿ ನಡೆದ ಹೊಡೆದಾಟದಲ್ಲಿ ಕಾಂಗ್ರೆಸ್ ಸ್ಥಳೀಯ ಮುಖಂಡ ಉಮೇಶ್ ಗೌಡ ತಲೆಗೆ ಗಾಯವಾಗಿ, ರಕ್ತ ಸುರಿದಿದೆ. ಈ ಉಮೇಶ್ ಗೌಡ ಅವರು ಇತ್ತೀಚೆಗಷ್ಟೇ ಬಿಜೆಪಿ ಬಿಟ್ಟು, ಕಾಂಗ್ರೆಸ್ ಸೇರಿದ್ದರು. ಉಮೇಶ್ ಗೌಡ ಮತದಾನಕ್ಕೆ ತೆರಳುತ್ತಿದ್ದಾಗ ಬಿಜೆಪಿ ಕಾರ್ಯಕರ್ತರ ಮತ್ತು ಈತನ ನಡುವೆ ಮಾತಿಗೆಮಾತು ಬೆಳೆದು ಗಲಾಟೆ ನಡೆದಿದೆ. ಸ್ಥಳಕ್ಕೆ ಪೊಲೀಸರು ಆಗಮಿಸಿದ್ದರು.
ರಾಜರಾಜೇಶ್ವರಿ ಕ್ಷೇತ್ರದ ಶ್ರೀ ಶಾರದಾ ವಿದ್ಯಾ ಮಂದಿರದ ಬೂತ್ ಬಳಿ, ಕಾಂಗ್ರೆಸ್ ಕಾರ್ಯಕರ್ತರೆಲ್ಲ ಸೇರಿ ಗ್ಯಾಸ್ ಸಿಲಿಂಡರ್ಗೆ ಪೂಜೆ ಮಾಡಿದ್ದಾರೆ. ಈ ಮೂಲಕ ಗ್ಯಾಸ್ ಸಿಲಿಂಡರ್ ಬೆಲೆ ಏರಿಕೆಗೆ ವಿರೋಧ ವ್ಯಕ್ತಪಡಿಸಿದ್ದಾರೆ.