ನಾರಾಯಣಮೂರ್ತಿ ದಂಪತಿ ಮತ ಚಲಾವಣೆ
ಬೆಂಗಳೂರು: ಇನ್‌ಫೋಸಿಸ್ ಸ್ಥಾಪಕ ನಾರಾಯಣಮೂರ್ತಿ ಹಾಗೂ ಸುಧಾ ಮೂರ್ತಿ ದಂಪತಿ ಜಯನಗರದ ಬಿಇಎಸ್ ಕಾಲೇಜು ಆವರಣದ ಮತಗಟ್ಟೆಗೆ ಆಗಮಿಸಿ ಕ್ಯೂನಲ್ಲಿ ನಿಂತು ಮತ ಚಲಾಯಿಸಿದರು.
ಪಲಿಮಾರು ಸ್ವಾಮೀಜಿ ಮತದಾನ
ಉಡುಪಿ: ಉಡುಪಿಯ ನಾರ್ತ್ ಶಾಲೆಯಲ್ಲಿ ಪಲಿಮಾರು ಮಠದ ಶ್ರೀ ವಿದ್ಯಾಧೀಶ ತೀರ್ಥರು ಹಾಗೂ ಶ್ರೀ ರಾಜರಾಜೇಶ್ವರ ತೀರ್ಥರು ಆಗಮಿಸಿ ಮತದಾನ ಮಾಡಿದರು.
ಮೊದಲ ಮತದಾರರ ಖುಷಿ
ಬೆಂಗಳೂರು: ರಾಜಧಾನಿಯೂ ಸೇರಿದಂತೆ ರಾಜ್ಯದ ಹಲವಾರು ಕಡೆ ಮೊದಲ ಬಾರಿ ಮತ ಹಾಕುತ್ತಿರುವ ಮತದಾರರು ಮುಂಜಾನೆಯೇ ಆಗಮಿಸಿ ತಮ್ಮ ಹಕ್ಕು ಚಲಾಯಿಸಿ ಖುಷಿಪಟ್ಟರು. ʼನಿಮ್ಮ ಅಧಿಕಾರವನ್ನು ಚಲಾಯಿಸಲು ಮರೆಯಬೇಡಿʼ ಎಂದು ಸಂದೇಶ ನೀಡಿದರು.
ಕೈಕೊಟ್ಟ ಮತಯಂತ್ರಗಳು, ಕಾದು ನಿಂತ ಮತದಾರರು
ಬೆಂಗಳೂರು: ರಾಜ್ಯಾದ್ಯಂತ ಹಲವಾರು ಕಡೆ ಮತಯಂತ್ರಗಳು ನಿಷ್ಕ್ರಿಯವಾದವು. ಕೆಲವು ಕಡೆ ಅಧಿಕಾರಿಗಳು ಧಾವಿಸಿ ಹೋಗಿ ಸರಿಪಡಿಸಿದರೆ, ಇನ್ನು ಕೆಲವು ಕಡೆ ಬದಲಿಸಲಾಯಿತು. ಮತದಾರರು ತಾಳ್ಮೆಯಿಂದ ಕಾದು ನಿಂತರು.
ಸುರೇಶ್ ಕುಮಾರ್ ತಾಯಿ ಮತದಾನ
ರಾಜಾಜಿನಗರ: ರಾಜಾಜಿನಗರದಲ್ಲಿ ಮಾಜಿ ಸಚಿವ, ಬಿಜೆಪಿ ಅಭ್ಯರ್ಥಿ ಸುರೇಶ್ ಕುಮಾರ್ ಅವರ ತಾಯಿ, 95 ವಯಸ್ಸಿನ ಸುಶೀಲಮ್ಮ ಅವರ ಜೊತೆಗೆ ಆಗಮಿಸಿ ಮತ ಚಲಾಯಿಸಿದ್ದು ವಿಶೇಷವಾಗಿತ್ತು.