ಹೆಬ್ಬಾಳದಲ್ಲಿ ವಚನಾನಂದ ಸ್ವಾಮೀಜಿ ಮತದಾನ
ಬೆಂಗಳೂರು: ಹೆಬ್ಬಾಳದ ಬೂತ್ ನಂಬರ್ 55ರಲ್ಲಿ ಶ್ವಾಸಗುರು ವಚನಾನಂದ ಸ್ವಾಮೀಜಿ ಮತಗಟ್ಟೆಗೆ 15 ನಿಮಿಷ ಮುಂಚಿತವಾಗಿಯೇ ಆಗಮಿಸಿದ ಮೊದಲಿಗರಾಗಿ ಮತ ಚಲಾಯಿಸಿದರು.
ಮೊದಲ ಮತ ಚಲಾಯಿಸಿದ ಸಿದ್ದಲಿಂಗ ಸ್ವಾಮೀಜಿ
: ತುಮಕೂರಿನಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು ಮತಗಟ್ಟೆ ಸಂಖ್ಯೆ 116ರಲ್ಲಿ ಮೊದಲಿಗರಾಗಿ ಮತ ಚಲಾಯಿಸಿದರು.
ಎಷ್ಟು ಮತದಾರರು ಹಕ್ಕು ಚಲಾಯಿಸಲಿದ್ದಾರೆ?
ಬೆಂಗಳೂರು: ರಾಜ್ಯದಲ್ಲಿ ಒಟ್ಟು 5,30,85,566 ಮತದಾರರಿದ್ದಾರೆ. 2,66,82,156 ಪುರುಷರು, 2,63,98,483 ಮಹಿಳೆಯರು ಇದ್ದಾರೆ. ಸರ್ಕಾರಿ ಸಂಸ್ಥೆಗಳಿಗೆ ಸಂಬಳಸಹಿತ ರಜೆ ನೀಡಲಾಗಿದ್ದು, ಎಷ್ಟು ಮತ ಚಲಾವಣೆಯಾಗಲಿದೆ ನೋಡಬೇಕಿದೆ. ಸರ್ಕಾರಿ ಸಂಸ್ಥೆಗಳಿಗೆ ಸಂಬಳಸಹಿತ ರಜೆ ನೀಡಲಾಗಿದ್ದು, ಎಷ್ಟು ಮತ ಚಲಾವಣೆಯಾಗಲಿದೆ ನೋಡಬೇಕಿದೆ.
7 ಗಂಟೆಗೆ ಮತದಾನ ಆರಂಭ
ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ 224 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು (ಮೇ.10) ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ.