ಮೇಲುಕೋಟೆಯಲ್ಲಿ ಅತಿ ಹೆಚ್ಚಿನ ಮತದಾನ
ಐದು ಗಂಟೆಯ ವೇಳೆಗೆ ಮಂಡ್ಯ ಜಿಲ್ಲೆಯ ಮೇಲುಕೋಟೆ ಕ್ಷೇತ್ರದಲ್ಲಿ ಶೇ.84.53 ಮತದಾನವಾಗಿದ್ದು, ರಾಜ್ಯದಲ್ಲಿ ಅತಿ ಹೆಚ್ಚು ಮತದಾನ ನಡೆದ ಕ್ಷೇತ್ರವೆನಿಸಿದೆ.
ಹೊಸಕೋಟೆಯಲ್ಲಿ ಶೇ. 83.32 ಮತದಾನವಾಗಿದೆ. ಕುಣಿಗಲ್ ಮತ್ತು ಶ್ರೀನಿವಾಸ ಪುರದಲ್ಲಿ ಶೇ. 81 ಮತದಾನವಾಗಿದೆ.
ರಾಜ್ಯದಲ್ಲಿ ಶೇ. 65.69 ರಷ್ಟು ಮತದಾನ
ರಾಜ್ಯದಲ್ಲಿ ಸಂಜೆ ಐದು ಗಂಟೆಯ ವೇಳೆಗೆ ಶೇ. 65.69 ರಷ್ಟು ಮತದಾನವಾಗಿದೆ.
ಮತದಾನಕ್ಕೆ ನೂಕು ನುಗ್ಗಲು
ಬೆಂಗಳೂರಿ ಸೇರಿದಂತೆ ರಾಜ್ಯದ ಬಹುತೇಕ ಜಿಲ್ಲೆಗಳ ಮತಕೇಂದ್ರಗಳಲ್ಲಿ ಇನ್ನೂ ಮತದಾರರು ಸಾಲುಗಟ್ಟಿ ನಿಂತಿದ್ದಾರೆ.
ಕೆಲವು ಮತಗಟ್ಟೆಗಳಲ್ಲಿ ನೂಕುನುಗ್ಗಲು ಉಂಟಾಗಿದೆ. ಮತದಾನ ಸಂಜೆ ಆರು ಗಂಟೆಗೆ ಕೊನೆಗಳ್ಳಲಿದೆ. ಆದರೆ ಸಾಲಿನಲ್ಲಿ ನಿಂತವರಿಗೆ ಮತದಾನ ಮಾಡಲು ಅವಕಾಶ ನೀಡಲಾಗುತ್ತದೆ.
ವಿಜಯನಗರದ ಮತ ಯಂತ್ರದಲ್ಲಿ ದೋಷ
ವಿಜಯನಗರ ಜಿಲ್ಲೆಯ ಮರಿಯಮ್ಮನಹಳ್ಳಿ ಗುಂಡಾ ಗ್ರಾಮದ ಮತ ಕೇಂದ್ರದಲ್ಲಿ ಇವಿಎಂ ನಲ್ಲಿ ದೋಷ ಕಾಣಿಸಿಕೊಂಡು ಮತದಾನ ಸ್ಥಗಿತಗೊಂಡಿದೆ. ಮಧ್ಯಾಹ್ನದ ನಂತರ ಕೇಂದ್ರದಲ್ಲಿ ಮತಯಂತ್ರದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಮತದಾರರಿಗೆ ಮತ ಚಲಾಯಿಸಲು ಸಾಧ್ಯವಾಗಿಲ್ಲ.
ಗುಂಡಾ ಗ್ರಾಮದಲ್ಲಿ 1,259 ಮತದಾರರಿದ್ದು, ಈಗಾಗಲೇ 903 ಮತ ಚಲಾವಣೆ ಮಾಡಿದ್ದಾರೆ. ಮತ ಚಲಾಯಿಸಲಾಗದೇ ಮಹಿಳಾ ಮತದಾರರು ಮನೆಗೆ ಹಿಂತಿರುಗುತ್ತಿದ್ದಾರೆ.
ಮತಗಟ್ಟೆಯಲ್ಲಿಯೇ ಮಗುವಿಗೆ ಜನ್ಮ ನೀಡಿದ ತಾಯಿ
ಬಳ್ಳಾರಿ ಜಿಲ್ಲೆಯ ಕೊರ್ಲಗುಂದಿಯ ಮತಗಟ್ಟೆಯಲ್ಲಿ 23 ವರ್ಷದ ಮಹಿಳೆಯೊಬ್ಬರು ಮಗುವಿಗೆ ಜನ್ಮನೀಡಿದ್ದಾರೆ.
ಮತಗಟ್ಟೆಯಲ್ಲಿದ್ದ ಮಹಿಳಾ ಸಿಬ್ಬಂದಿ ಮಹಿಳೆಗೆ ಈ ಸಂದರ್ಭದಲ್ಲಿ ನೆರವಾದರು.