ಮತದಾನ ಮುಕ್ತಾಯವಾಗಲು ಕೇವಲ ಒಂದೇ ಬಾಕಿ
ಮತದಾನ ಮುಕ್ತಾಯವಾಗಲು ಕೇವಲ ಒಂದೇ ಒಂದು ಗಂಟೆ ಬಾಕಿ ಇದೆ. ಬನ್ನಿ, ಸಮೃದ್ಧ ಕರ್ನಾಟಕಕ್ಕೆ ಕೈಜೋಡಿಸಿ.@ECISVEEP @SpokespersonECI #KarnatakaAssemblyElection2023 pic.twitter.com/ZWzKncpmbx
— Chief Electoral Officer, Karnataka (@ceo_karnataka) May 10, 2023
ಚುನಾವಣೆ ಬಹಿಷ್ಕರಿಸಿದ ವಾಟಾಳ್ ನಾಗರಾಜ್
ಚಾಮರಾಜನಗರ ವಿಧಾನಸಭೆಯ ಪಕ್ಷೇತರ ಅಭ್ಯರ್ಥಿ ವಾಟಾಳ್ ನಾಗರಾಜ್ ಚುನಾವಣೆ ಬಹಿಷ್ಕರಿಸಿದ್ದಾರೆ.
ಮತಗಟ್ಟೆಗೆ ಏಜೆಂಟ್ ಗಳನ್ನು ನೇಮಿಸದೇ ಮತದಾನ ಪ್ರಕ್ರಿಯೆಯಿಂದ ಅವರು ದೂರ ಉಳಿದಿದ್ದಾರೆ.
“ಇದು ಚುನಾವಣೆಯಲ್ಲ, ವ್ಯಾಪಾರ. ಕಾಂಗ್ರೆಸ್ ಹಾಗು ಬಿಜೆಪಿ ಅಭ್ಯರ್ಥಿಗಳು ನಿನ್ನೆ ರಾತ್ರಿಯಿಡಿ ಮತದಾರರಿಗೆ ಹಣ ಹಂಚಿದ್ದಾರೆ. ಇದನ್ನು ತಡೆಯುವಲ್ಲಿ ಆಯೋಗ ವಿಫಲವಾಗಿದೆ. ಹೀಗಾಗಿ ನಾನು ಚುನಾವಣೆ ಬಹಿಷ್ಕರಿಸುತ್ತಿದ್ದೇನೆʼʼ ಎಂದು ಅವರು ಪ್ರಕಟಿಸಿದ್ದಾರೆ.
ಹೊನ್ನಾಳಿಯಲ್ಲಿ ಹೊಡೆದಾಟ
ದಾವಣಗೆರೆ ಜಿಲ್ಲೆ ಹೊನ್ನಾಳಿಯಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಹೊಡೆದಾಟ ನಡೆದಿದೆ.
ಶಾಸಕ ರೇಣುಕಾಚಾರ್ಯ ಸಮ್ಮುಖದಲ್ಲಿಯೇ ಬಿಜೆಪಿ- ಕಾಂಗ್ರೆಸ್ ಕಾರ್ಯಕರ್ತರು ಹೊಡೆದಾಡಿಕೊಂಡಿದ್ದಾರೆ.
ನ್ಯಾಮತಿ – ಹೊನ್ನಳ್ಳಿ ಅವಳಿ ತಾಲೂಕಿನಲ್ಲಿ ಯರಗನಾಳ್ ಗ್ರಾಮದಲ್ಲಿ ಈ ಘಟನೆ ನಡೆದಿದೆ.
ಶಾಸಕ ರೇಣುಕಾಚಾರ್ಯ ನೀತಿ ಸಂಹಿತೆ ಉಲ್ಲಂಘನೆ ಮಾಡಿದ್ದಾರೆ ಎಂದು ಕಾಂಗ್ರೆಸ್ ಕಾರ್ಯಕರ್ತರು ಆರೋಪ ಮಾಡಿದಾಗ ಈ ಘಟನೆ ನಡೆದಿದೆ.
ಕಳೆದ ಬಾರಿಗಿಂತ ಹೆಚ್ಚಿನ ಮತದಾನ
ಈ ಚುನಾವಣೆಯಲ್ಲಿ ಕಳೆದ ಬಾರಿಗಿಂತ ಹೆಚ್ಚಿನ ಮತದಾನವಾಗಬಹುದು ಎಂದು ನಿರೀಕ್ಷಿಸಲಾಗುತ್ತಿದೆ.
ಐದು ಗಂಟೆಯ ವೇಳೆಗೆ ಶೇಕಡಾವಾರು 68 ಕಿಂತಲೂ ಅಧಿಕ ಮತದಾನವಾಗಿದೆ. ಮತದಾನಕ್ಕೆ ಇನ್ನೂ ಒಂದು ಗಂಟೆ ಬಾಕಿ ಇದೆ.
ಕಳೆದ ಚುನಾವಣೆಯಲ್ಲಿ ಶೇ. 72 ಮತದಾನ ದಾಖಲಾಗಿತ್ತು.
ಶ್ರೀನಿವಾಸ್ ಹೆಬ್ಬಾರ್ ಮತದಾನ
ಶಿರಸಿಯ ಜೀವಜಲ ಕಾರ್ಯಪಡೆ ಅಧ್ಯಕ್ಷ, ವಿಸ್ತಾರ ನ್ಯೂಸ್‌ನ ನಿರ್ದೇಶಕ ಶ್ರೀನಿವಾಸ್ ಹೆಬ್ಬಾರ್ ಶಿರಸಿಯಲ್ಲಿ ಮತದಾನ ಮಾಡಿದ್ದಾರೆ.
ಕುಟುಂಬಸ್ಥರೊಂದಿಗೆ ಆಗಮಿಸಿದ ಶ್ರೀನಿವಾಸ್ ಹೆಬ್ಬಾರ್ ಶಿರಸಿಯ ಯಲ್ಲಾಪುರ ನಾಖೆ ಬಳಿಯ ಸರ್ಕಾರಿ ಶಾಲೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ್ದಾರೆ.