Site icon Vistara News

Karnataka Election 2023 Live Updates: ವಿಸ್ತಾರ ನ್ಯೂಸ್‌ನ Exit Poll; ಕಾಂಗ್ರೆಸ್‌ ದೊಡ್ಡ ಪಕ್ಷ; ಬೇರೆ Exit Poll ಹೇಳಿರುವುದೇನು?

election live
Harish Kera

ಹೆಬ್ಬಾಳದಲ್ಲಿ ವಚನಾನಂದ ಸ್ವಾಮೀಜಿ ಮತದಾನ

ಬೆಂಗಳೂರು: ಹೆಬ್ಬಾಳದ ಬೂತ್ ನಂಬರ್ 55ರಲ್ಲಿ ಶ್ವಾಸಗುರು ವಚನಾನಂದ ಸ್ವಾಮೀಜಿ ಮತಗಟ್ಟೆಗೆ 15 ನಿಮಿಷ ಮುಂಚಿತವಾಗಿಯೇ ಆಗಮಿಸಿದ ಮೊದಲಿಗರಾಗಿ ಮತ ಚಲಾಯಿಸಿದರು.

Harish Kera

ಮೊದಲ ಮತ ಚಲಾಯಿಸಿದ ಸಿದ್ದಲಿಂಗ ಸ್ವಾಮೀಜಿ

: ತುಮಕೂರಿನಲ್ಲಿ ಸಿದ್ದಗಂಗಾ ಮಠದ ಶ್ರೀ ಸಿದ್ದಲಿಂಗ ಸ್ವಾಮಿಗಳು ಮತಗಟ್ಟೆ ಸಂಖ್ಯೆ 116ರಲ್ಲಿ ಮೊದಲಿಗರಾಗಿ ಮತ ಚಲಾಯಿಸಿದರು.

Harish Kera

ಎಷ್ಟು ಮತದಾರರು ಹಕ್ಕು ಚಲಾಯಿಸಲಿದ್ದಾರೆ?

ಬೆಂಗಳೂರು: ರಾಜ್ಯದಲ್ಲಿ ಒಟ್ಟು 5,30,85,566 ಮತದಾರರಿದ್ದಾರೆ. 2,66,82,156 ಪುರುಷರು, 2,63,98,483 ಮಹಿಳೆಯರು ಇದ್ದಾರೆ. ಸರ್ಕಾರಿ ಸಂಸ್ಥೆಗಳಿಗೆ ಸಂಬಳಸಹಿತ ರಜೆ ನೀಡಲಾಗಿದ್ದು, ಎಷ್ಟು ಮತ ಚಲಾವಣೆಯಾಗಲಿದೆ ನೋಡಬೇಕಿದೆ. ಸರ್ಕಾರಿ ಸಂಸ್ಥೆಗಳಿಗೆ ಸಂಬಳಸಹಿತ ರಜೆ ನೀಡಲಾಗಿದ್ದು, ಎಷ್ಟು ಮತ ಚಲಾವಣೆಯಾಗಲಿದೆ ನೋಡಬೇಕಿದೆ.

Harish Kera

7 ಗಂಟೆಗೆ ಮತದಾನ ಆರಂಭ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ 224 ವಿಧಾನಸಭಾ ಕ್ಷೇತ್ರಗಳಲ್ಲಿ ಇಂದು (ಮೇ.10) ಮತದಾನ ನಡೆಯಲಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 6ರವರೆಗೆ ಮತದಾನಕ್ಕೆ ಅವಕಾಶ ನೀಡಲಾಗಿದೆ.

Exit mobile version