ಬೆಂಗಳೂರು: ರಾಜ್ಯದ ರಾಜಕೀಯ ಮತ್ತಿತರ ಮಹತ್ವದ ಬೆಳವಣಿಗೆಗಳ ಬಗ್ಗೆ ಕ್ಷಣಕ್ಷಣದ ಅಪ್‌ಡೇಟ್‌ಗಳಿಗಾಗಿ ಇಲ್ಲಿ ಓದಿ.
ರಾಜ್ಯದಲ್ಲಿ ಶುರುವಾಗಲಿದೆ "ರಾಜಕೀಯ ತರಬೇತಿ ಕೇಂದ್ರ"
ರಾಜ್ಯದಲ್ಲಿ ಯುವಕರಿಗೆ ರಾಜಕೀಯ ಅರಿವು ಮೂಡಿಸಬೇಕಿದೆ. ಈ ನಿಟ್ಟಿನಲ್ಲಿ ರಾಜಕೀಯ ತರಬೇತಿ ಕೇಂದ್ರ ತೆರೆಯುವ ಬಗ್ಗೆ ಸ್ಪೀಕರ್ ಯು.ಟಿ. ಖಾದರ್ ಹೇಳಿದ್ದಾರೆ. ಸದ್ಯಕ್ಕೆ ಒಂದು ವರ್ಷದ ಕೋರ್ಸ್ ಅನ್ನು ಪ್ರಾರಂಭ ಮಾಡುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ.
Karnataka Politics : ಶಿಕ್ಷಣಕ್ಕೂ ಕಾಲಿಟ್ಟ ರಾಜಕೀಯ; ರಾಜ್ಯದಲ್ಲಿ ಶುರುವಾಗಲಿದೆ ಪಾಲಿಟಿಕ್ಸ್ ಟ್ರೈನಿಂಗ್ ಸೆಂಟರ್!
ಪ್ರೀತ್ಸೆ ಎಂದು ಬ್ಲ್ಯಾಕ್‌ಮೇಲ್ ಮಾಡಿದ ಗೆಳೆಯರು
ಪ್ರೀತಿಸುವ ವಿಚಾರದಲ್ಲಿ (Love Case) ಯುವಕರಿಬ್ಬರು ಕಿರುಕುಳ ನೀಡಿದ್ದಕ್ಕೆ (Mental harassment) ಯುವತಿಯೊಬ್ಬಳು ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಿಹಾರಿಕ (22) ಮೃತ ದುರ್ದೈವಿ.
Love Case : ಪ್ರೀತ್ಸೆ ಪ್ರೀತ್ಸೆ ಎಂದು ಬ್ಲ್ಯಾಕ್‌ಮೇಲ್ ಮಾಡಿದ ಗೆಳೆಯರ ಕಾಟಕ್ಕೆ ಬೇಸತ್ತು ನದಿಗೆ ಹಾರಿದ ಯುವತಿ
Murder Case : ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ, ತಹಸೀಲ್ದಾರ್ ಸಾವಿಗೆ ಟ್ವಿಸ್ಟ್! ಹೃದಯಾಘಾತವಲ್ಲ, ಕೊಲೆ?
ಬೆಳಗಾವಿಯ ಗ್ರೇಡ್ 2 ತಹಸೀಲ್ದಾರ್ ಅಶೋಕ್ ಮಣ್ಣಿಕೇರಿ ಅವರು ಹೃದಯಾಘಾತದಿಂದ ಮೃತಪಟ್ಟಿದ್ದಾಗಿ ಹೇಳಲಾಗಿತ್ತು. ಇದೀಗ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಇದು ಕೊಲೆ ಎಂದು ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಅಶೋಕ್ ಪತ್ನಿ ಹಾಗೂ ಬಾವ ಸೇರಿ ಕೊಲೆ ಮಾಡಿರುವ ಆರೋಪ ಕೇಳಿಬಂದಿದೆ.
Murder Case : ಲಕ್ಷ್ಮಿ ಹೆಬ್ಬಾಳ್ಕರ್ ಆಪ್ತ, ತಹಸೀಲ್ದಾರ್ ಸಾವಿಗೆ ಟ್ವಿಸ್ಟ್! ಹೃದಯಾಘಾತವಲ್ಲ, ಕೊಲೆ?
Congress Guarantee: ಮಾಜಿ ಸಿಎಂ ಬೊಮ್ಮಾಯಿಗೆ ಹೊಟ್ಟೆಯಲ್ಲಿ ಬೇನೆ; ಔಷಧಿ ಇಲ್ಲ ಎಂದ ಆರೋಗ್ಯ ಸಚಿವ ಗುಂಡೂರಾವ್!
ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಜಾರಿ ಮಾಡಲು ಮುಂದಾಗಿರುವ ಗ್ಯಾರಂಟಿ (Congress Guarantee) ಯೋಜನೆಗಳ ಕುರಿತು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಮಾಡಿರುವ ಟೀಕೆಗೆ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿರುಗೇಟು ನೀಡಿದ್ದಾರೆ.
Video Viral : ಫ್ರೀ ಬಸ್ ಬಗ್ಗೆ ಉಗಿದು ಉಪ್ಪಿನಕಾಯಿ ಹಾಕಿದ ಮಹಿಳೆ! ಸಿದ್ದರಾಮಯ್ಯಗೆ ಏಕವಚನ ಪ್ರಯೋಗ
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಜಾರಿಗೆ ತಂದಿರುವ ಶಕ್ತಿ ಯೋಜನೆ ಬಗ್ಗೆ ಚಿತ್ರದುರ್ಗದಲ್ಲಿ ಮಹಿಳೆಯೊಬ್ಬಳು ಕಿಡಿಕಾರಿದ್ದಾಳೆ. ಸಿಎಂ ವಿರುದ್ಧ ಏಕವಚನವನ್ನು ಪ್ರಯೋಗ ಮಾಡಿದ್ದಾಳೆ. ಯಾರಿಗೆ ಬೇಕು ಈ ಉಚಿತ ಸ್ಕೀಂ ಎಂದು ಆಕ್ರೋಶವನ್ನು ಹೊರಹಾಕಿದ್ದಾಳೆ.
Video Viral : ಫ್ರೀ ಬಸ್ ಬಗ್ಗೆ ಉಗಿದು ಉಪ್ಪಿನಕಾಯಿ ಹಾಕಿದ ಮಹಿಳೆ! ಸಿದ್ದರಾಮಯ್ಯಗೆ ಏಕವಚನ ಪ್ರಯೋಗ