ಬೆಂಗಳೂರು: ರಾಜ್ಯದ ರಾಜಕೀಯ ಮತ್ತಿತರ ಮಹತ್ವದ ಬೆಳವಣಿಗೆಗಳ ಬಗ್ಗೆ ಕ್ಷಣಕ್ಷಣದ ಅಪ್‌ಡೇಟ್‌ಗಳಿಗಾಗಿ ಇಲ್ಲಿ ಓದಿ.
ಕರಾವಳಿಯಲ್ಲಿಂದು ಮುಂಗಾರು ದರ್ಬಾರ್
ರಾಜ್ಯದಲ್ಲಿ ಪೂರ್ಣ ಪ್ರಮಾಣದಲ್ಲಿ ಮುಂಗಾರು ಆವರಿಸಿದರೂ ಕರಾವಳಿಯಲ್ಲಿ ವ್ಯಾಪಕ ಮಳೆಯಾಗುತ್ತಿದ್ದರೆ, ದಕ್ಷಿಣ ಒಳನಾಡಿನ ಕೆಲವು ಕಡೆ ಉತ್ತರ ಒಳನಾಡಿನ ಹಲವು ಕಡೆ ಮಳೆ (Weather report) ಇಲ್ಲದಂತಾಗಿದೆ. ಮುಂದಿನ 24 ಗಂಟೆಯಲ್ಲಿ ದಕ್ಷಿಣ ಕನ್ನಡ, ಉತ್ತರ ಕನ್ನಡ ಹಾಗೂ ಉಡುಪಿಯಲ್ಲಿ ಗುಡುಗು ಸಹಿತ ಭಾರಿ ಮಳೆಯಾಗುವ ಎಚ್ಚರಿಕೆಯನ್ನು ಹವಾಮಾನ ಇಲಾಖೆ ನೀಡಿದೆ. ಕರ್ನಾಟಕ ಕರಾವಳಿಯಲ್ಲಿ ಬಿರುಗಾಳಿಯು ಗಂಟೆಗೆ 40-55 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಹೀಗಾಗಿ ಈ ಸಮಯದಲ್ಲಿ ಮೀನುಗಾರರು ಮೀನುಗಾರಿಕೆ ತೆರಳದಂತೆ ಸೂಚಿಸಲಾಗಿದೆ.
Weather report : ಕರಾವಳಿಯಲ್ಲಿಂದು ಹೇಗಿರಲಿದೆ ಮುಂಗಾರು ಮಳೆ ದರ್ಬಾರ್
ಜುಲೈ ಒಂದರಿಂದ ಅನ್ನಭಾಗ್ಯ ಜಾರಿ, ಅಕ್ಕಿ ಜತೆಗೆ ಹಣ
ಬೆಂಗಳೂರು: ಜುಲೈ ಮೊದಲ ವಾರದಿಂದ ಅನ್ನಭಾಗ್ಯ ಜಾರಿಯಾಗಲಿದೆ. ಆದರೆ ಸರ್ಕಾರ ನೀಡಿದ ಭರವಸೆಯಂತೆ 10 ಕೆಜಿ ಅಕ್ಕಿ ಕೊಡಲು ಲಭ್ಯವಿಲ್ಲದಿರುವುದರಿಂದ, ಐದು ಕೆಜಿ ಅಕ್ಕಿ ಜತೆಗೆ ಐದು ಕೆಜಿ ಅಕ್ಕಿಯ ಹಣ ಫಲಾನುಭವಿಗಳಿಗೆ ನೀಡಲು ನಿರ್ಧಾರ ಮಾಡಲಾಗಿದೆ.
ಪುನೀತ್ ಕೆರೆಹಳ್ಳಿ ಮೇಲೆ ರೌಡಿಪಟ್ಟಿ ತೆರೆಯಲು ಸಿದ್ಧತೆ
ಬೆಂಗಳೂರು: ರಾಜಧಾನಿಯ ಚಾಮರಾಜಪೇಟೆ ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ಮೇಲೆ ರೌಡಿ ಪಟ್ಟಿ ತೆರೆಯಲು ಸಿದ್ಧತೆ ನಡೆಸಲಾಗಿದೆ. ಕೊಲೆ, ಕೊಲೆಯತ್ನ, ದೊಂಬಿ, ಪ್ರಾಣ ಬೆದರಿಕೆ ಪ್ರಕರಣದಲ್ಲಿ ಭಾಗಿಯಾಗಿರುವ ಪುನೀತ್ ಕೆರೆಹಳ್ಳಿ ಸದ್ಯ ಕೆಲ ದಿನಗಳ ಹಿಂದೆ ಕೊಲೆ ಕೇಸಲ್ಲಿ ಬೇಲ್ ಪಡೆದಿದ್ದಾನೆ.