Site icon Vistara News

ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ರಥೋತ್ಸವ | ಬಿಗಿ ಬಂದೋಬಸ್ತ್, ಮುಂದುವರಿದ ಧರ್ಮ ದಂಗಲ್‌

kukke

ಮಂಗಳೂರು: ದಕ್ಷಿಣ ಕನ್ನಡದ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಚಂಪಾ ಷಷ್ಠಿ ರಥೋತ್ಸವ ಆರಂಭಗೊಂಡಿದೆ. ಬೆಳಗ್ಗೆ 7.05 ನಿಮಿಷಕ್ಕೆ ವೃಶ್ಚಿಕ ಲಗ್ನದಲ್ಲಿ ಆರಂಭವಾದ ಬ್ರಹ್ಮ ರಥೋತ್ಸವಕ್ಕೆ ಸಾವಿರಾರು ಜನರು ಸಾಕ್ಷಿಯಾದರು.

ರಥೋತ್ಸವಕ್ಕೆ ರಾತ್ರಿಯಿಂದಲೇ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸಿದ್ದಾರೆ. ನಾಡಿನ ನಾನಾ ಕಡೆಗಳಿಂದ ಬಂದ ಭಕ್ತಾದಿಗಳು ಕುಮಾರಧಾರ ನದಿಯಲ್ಲಿ ಮಿಂದು ದೇವಸ್ಥಾನಕ್ಕೆ ನಡಿಗೆಯಲ್ಲಿ ಬಂದರು. ಗರುಡ ರಥದ ಮೇಲೆ ಮೂರು ಸುತ್ತು ಪ್ರದಕ್ಷಿಣೆ ಹಾಕಿದ ಬಳಿಕ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ರಥೋತ್ಸವಕ್ಕೆ ಎಲ್ಲಾ ಸಿದ್ದತೆಗಳನ್ನು ಜಿಲ್ಲಾಡಳಿತ ಮಾಡಿಕೊಂಡಿದ್ದು, ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್‌ ಬಂದೋಬಸ್ತ್ ಒದಗಿಸಿದೆ. ಜಾತ್ರಾ ಮಹೋತ್ಸವದ ಅನೇಕ ಕಡೆಗಳಲ್ಲಿ, ಹಿಂದೂಯೇತರರಿಗೆ ಇಲ್ಲಿ ವ್ಯಾಪಾರ ವಹಿವಾಟಿಗೆ ಅವಕಾಶವಿಲ್ಲ ಎಂಬ ಬ್ಯಾನರ್‌ಗಳನ್ನು ಹಿಂದೂ ಜಾಗರಣ ವೇದಿಕೆ ಅಳವಡಿಸಿದೆ.

ಇದನ್ನೂ ಓದಿ | Kukke subrahmanya | ಕುಕ್ಕೆ ಕ್ಷೇತ್ರದಲ್ಲಿ ಅನ್ಯಮತೀಯರಿಗೆ ವ್ಯಾಪಾರ ನಿರ್ಬಂಧ: ಜಾಗರಣ ವೇದಿಕೆ ಮನವಿ

Exit mobile version