Site icon Vistara News

Breaking News: 100 ಕೋಟಿ ರೂ. ಪೋಂಜಿ ಸ್ಕ್ಯಾಮ್, ನಟ ಪ್ರಕಾಶ್ ರಾಜ್‌ಗೆ ಇ.ಡಿ ಸಮನ್ಸ್

prakash raj

ನವದೆಹಲಿ: ದಕ್ಷಿಣ ಭಾರತದ (South India) ಖ್ಯಾತ ನಟ ಹಾಗೂ ಕನ್ನಡಿಗ ಪ್ರಕಾಶ್ ರಾಜ್ (Actor Prakash Raj) ಅವರು ಸಂಕಟಕ್ಕೆ ಸಿಲುಕಿದ್ದಾರೆ. ಆಭರಣ ವ್ಯಾಪ್ಯಾರ ಕಂಪನಿ ಎದುರಿಸುತ್ತಿರುವ 100 ಕೋಟಿ ರೂ. ಪೋಂಜಿ ಹಗರಣಕ್ಕೆ (Rs 100 Crore Ponzi Scam) ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯವು (Enforcement Directorate) ಸಮನ್ಸ್ ಜಾರಿ ಮಾಡಿದೆ. ಪ್ರಕಾಶ್ ರಾಜ್ ಬ್ರಾಂಡ್ ಅಂಬಾಸಿಡರ್ ಆಗಿದ್ದ ಪ್ರಣವ್ ಜ್ಯುವೆಲರ್ಸ್‌ ಹೂಡಿಕೆದಾರರಿಗೆ 100 ಕೋಟಿ ರೂ. ವಂಚಿಸಿದೆ.

ಏನಿದು ಹಗರಣ?

ಚಿನ್ನಾಭರಣ ಕಂಪನಿ ನಡೆಸಿದ 100 ಕೋಟಿ ಪೋಂಜಿ ಯೋಜನೆಗೆ ಸಂಬಂಧಿಸಿದಂತೆ ನಟ ಪ್ರಕಾಶ್ ರಾಜ್ ಅವರನ್ನು ವಿಚಾರಣೆಗಾಗಿ ಜಾರಿ ನಿರ್ದೇಶನಾಲಯ ಸಮನ್ಸ್ ನೀಡಿದೆ. ಪ್ರಕಾಶ್ ರಾಜ್ ಅವರು ಪೋಂಜಿ ಹಗರಣ ನಡೆಸಿದ ಪ್ರಣವ್ ಜ್ಯುವೆಲರ್ಸ್‌ನ ಬ್ರಾಂಡ್ ಅಂಬಾಸಿಡರ್ ಆಗಿದ್ದರು.

ಚೆನ್ನೈ ಸೇರಿದಂತೆ ತಮಿಳುನಾಡು ಮತ್ತು ಪುದುಚೇರಿಯಲ್ಲಿ ಹಲವು ಸ್ಥಳಗಳಲ್ಲಿ ಶಾಖೆಗಳನ್ನು ಹೊಂದಿರುವ ತಿರುಚ್ಚಿ ಮೂಲದ ಆಭರಣ ಸರಪಳಿಯ ಶಾಖೆಗಳ ಮೇಲೆ ಇಡಿ ದಾಳಿ ನಡೆಸಿದೆ, ಪೋಂಜಿ ಯೋಜನೆಯನ್ನು ನಡೆಸುತ್ತಿದೆ ಮತ್ತು ಹೂಡಿಕೆದಾರರಿಗೆ ₹ 100 ಕೋಟಿ ವಂಚಿಸಿದೆ ಎಂದು ಆರೋಪಿಸಲಾಗಿದೆ. ಈ ಕಂಪನಿಯ ಬ್ರ್ಯಾಂಡ್ ಅಂಬಾಸಿಡರ್ ಆದ ಕಾರಣದಿಂದಲೇ ಪ್ರಕಾಶ್ ರಾಜ್ ಅವರಿಗೂ ಜಾರಿ ನಿರ್ದೇಶನಾಲಯವು ವಿಚಾರಣೆಗೆ ಹಾಜರಾಗುವಂತೆ ಸಮನ್ಸ್ ನೀಡಿದೆ.

ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಪ್ರಧಾನಿ ನರೇಂದ್ರ ಮೋದಿ ಹಾಗೂ ಕೇಂದ್ರ ಬಿಜೆಪಿ ಸರ್ಕಾರದ ಕಡು ಟೀಕಾಕಾರರಾಗಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲ ಅವರು ಕೇಂದ್ರ ಸರ್ಕಾರವನ್ನು ಖಂಡಿಸುತ್ತಾರೆ ಮತ್ತು ವಿರೋಧಿಸುತ್ತಾರೆ. ಈ ಕಾರಣದಿಂದಾಗಿ ಅವರು ಸಾಕಷ್ಟು ವಿರೋಧಿಗಳನ್ನು ಸೃಷ್ಟಿಸಿಕೊಂಡಿದ್ದಾರೆ. ಕನ್ನಡ ಸೇರಿದಂತೆ ಬಹುಭಾಷೆಗಳಲ್ಲಿ ನಟಿಸಿ ಜನಮನ ಗೆದ್ದಿದ್ದಾರೆ. ಅವರ ನಟನೆಗೆ ರಾಷ್ಟ್ರೀಯ ಪ್ರಶಸ್ತಿ ಕೂಡ ಸಂದಿದೆ.

ಇದು ಬ್ರೇಕಿಂಗ್ ಸುದ್ದಿಯಾಗಿದ್ದು, 100 ಕೋಟಿ ರೂ. ಪೋಂಜಿ ಹಗರಣ ಕುರಿತು ಇನ್ನಷ್ಟೇ ಹೆಚ್ಚಿನ ಮಾಹಿತಿ ಬರಬೇಕಿದೆ.

Exit mobile version