ಬೆಂಗಳೂರು: ಇಲ್ಲಿನ ಕೆಂಪೇಗೌಡ ಆಟದ ಮೈದಾನ (Kempegowda Play Ground) ಉಳಿಸುವಂತೆ ಆಗ್ರಹಿಸಿ ರಾಜರಾಜೇಶ್ವರಿ ನಗರದ ನಿವಾಸಿಗಳು ಭಾನುವಾರ (ನವೆಂಬರ್ 13) ಪ್ರತಿಭಟನೆಗೆ ಕರೆ ನೀಡಿದ್ದಾರೆ. ಸರ್ಕಾರವು ಆಟದ ಮೈದಾನದಲ್ಲಿ ಶಾಲೆಯನ್ನು ನಿರ್ಮಿಸಲು ಮುಂದಾಗಿರುವುದನ್ನು ವಿರೋಧಿಸಿ ನಾಗರಿಕರು ಧರಣಿ ನಡೆಸಲಿದ್ದಾರೆ.
1.6 ಎಕರೆ ವಿಸ್ತೀರ್ಣದ ಕೆಂಪೇಗೌಡ ಮೈದಾನ (ಸರ್ವೆ ಸಂಖ್ಯೆ 223 ಮತ್ತು 224) ಹಲಗೆವಡೇರಹಳ್ಳಿ ಎಲ್ಲಾ ವಯಸ್ಸಿನ ಜನರಿಗೆ ಕ್ರೀಡಾ ಚಟುವಟಿಕೆಗಳಿಗೆ ಲಭ್ಯವಿರುವ ಏಕೈಕ ಸ್ಥಳವಾಗಿದೆ. 2006ರಲ್ಲಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರು ಮೈದಾನ ಉದ್ಘಾಟಿಸಿದ್ದರು. ಅಲ್ಲಿ ಶಾಲೆ ನಿರ್ಮಿಸಲು ಮುಂದಾಗಿರುವುದನ್ನು ನಾಗರಿಕರು ವಿರೋಧಿಸಿದ್ದಾರೆ.
ಮೈದಾನವನ್ನು ಅನ್ಯ ಉದ್ದೇಶಕ್ಕೆ ಬಳಸುವುದರಿಂದ ಯುವಕರಿಗೆ ಮಾನಸಿಕ ಹಾಗೂ ದೈಹಿಕ ಆರೋಗ್ಯ ಕಾಪಾಡಲು ಇದ್ದ ಅವಕಾಶವನ್ನು ಕಸಿದುಕೊಂಡಂತಾಗುತ್ತದೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ | ಚಾಮರಾಜಪೇಟೆ ಆಟದ ಮೈದಾನದಲ್ಲಿ ಕಂದಾಯ ಇಲಾಖೆಯಿಂದಲೇ ಗಣೇಶೋತ್ಸವ: ಸರಕಾರದ ಚಿಂತನೆ