Site icon Vistara News

Rape Case | ಅಸ್ಸಾಂನಲ್ಲಿ ಅತ್ಯಾಚಾರ, ಕೊಲೆ ಆರೋಪಿಗೆ ಜನರಿಂದ ಧರ್ಮದೇಟು, ಆಸ್ಪತ್ರೆಯಲ್ಲಿ ವ್ಯಕ್ತಿ ಸಾವು

Rape

ದಿಸ್ಪುರ: ಅಸ್ಸಾಂನಲ್ಲಿ ಅತ್ಯಾಚಾರ (Rape Case) ಹಾಗೂ ಕೊಲೆ ಮಾಡಿದ ಆರೋಪ ಹೊತ್ತಿರುವ ವ್ಯಕ್ತಿಯನ್ನು ಜನರೇ ಹಿಡಿದು ಹತ್ಯೆಗೈದಿದ್ದಾರೆ. ಅಸ್ಸಾಂನ ಲಖೀಂಪುರ ಜಿಲ್ಲೆಯಲ್ಲಿ ಅತ್ಯಾಚಾರ, ಕೊಲೆ, ಸುಲಿಗೆ ಆರೋಪ ವ್ಯಕ್ತಿಯೊಬ್ಬ ಪೊಲೀಸ್‌ ಕಸ್ಟಡಿಯಿಂದ ಪರಾರಿಯಾಗಿದ್ದ. ಅವನನ್ನು ಜನ ಹಿಡಿದು ಥಳಿಸಿದ್ದು, ಬಳಿಕ ಆತ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.

” ೪೦ ವರ್ಷದ ವ್ಯಕ್ತಿಯೊಬ್ಬ ಕೊಲೆ, ಸುಲಿಗೆ, ದರೋಡೆ ಹಾಗೂ ಅತ್ಯಾಚಾರದ ಆರೋಪ ಹೊತ್ತಿದ್ದು, ಪೊಲೀಸ್‌ ಕಸ್ಟಡಿಯಿಂದ ತಪ್ಪಿಸಿಕೊಂಡಿದ್ದ. ಆದರೆ, ಆತ ಕಿಲಾಕಿಲಿ ಗ್ರಾಮದಲ್ಲಿ ಪತ್ತೆಯಾಗಿದ್ದು, ಜನರು ಗುರುತಿಸಿ ಗಂಭೀರವಾಗಿ ಥಳಿಸಿದ್ದಾರೆ. ಬಳಿಕ ಪೊಲೀಸರ ವಶಕ್ಕೆ ಆತನನ್ನು ನೀಡಿದ್ದಾರೆ. ಗಾಯಗೊಂಡಿದ್ದ ಅವನನ್ನು ಆಸ್ಪತ್ರೆಗೆ ಸಾಗಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ” ಎಂದು ಪೊಲೀಸರು ತಿಳಿಸಿದ್ದಾರೆ.

ರಾಜು ಬರುವಾಹ್‌ ಎಂಬ ವ್ಯಕ್ತಿಯು ಹಲವು ವರ್ಷಗಳಿಂದ ಪ್ರಕರಣ ಎದುರಿಸುತ್ತಿದ್ದು, ಈತನ ವಿರುದ್ಧ ಸುತ್ತಮುತ್ತಲ ಗ್ರಾಮಸ್ಥರದ್ದು ಆಕ್ರೋಶ ಇತ್ತು ಎನ್ನಲಾಗಿದೆ. ಹಾಗಾಗಿಯೇ, ಪೊಲೀಸರಿಂದ ತಪ್ಪಿಸಿಕೊಂಡಿದ್ದ ಆತನ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ. ಆದಾಗ್ಯೂ, ಇದುವರೆಗೆ ಯಾರ ವಿರುದ್ಧವೂ ಪ್ರಕರಣ ದಾಖಲಾಗಿಲ್ಲ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ | ಸ್ನೇಹಿತೆಯ ಸಹೋದರನಿಂದಲೆ ಅತ್ಯಾಚಾರ, ರೈಲ್ವೆ ಹಳಿ ಮೇಲೆ ಆತ್ಮಹತ್ಯೆಗೆ ಯತ್ನ

Exit mobile version